* ಕಾಂಗ್ರೆಸ್ ಅಧ್ಯಕ್ಷನಾಗಿ ನಾನೇ ಸದಸ್ಯತ್ವ ನೋಂದಣಿ ಮಾಡುತ್ತಿದ್ದೇನೆ
* ಸದಸ್ಯತ್ವ ನೋಂದಣಿ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದ ಸೋನಿಯಾ ಗಾಂಧಿ
* 19,287 ಮುಖ್ಯ ನೋಂದಣಿದಾರರ ನೇಮಕ
ಬೆಂಗಳೂರು(ಫೆ.15): ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶವನ್ನು ಹಾಳು ಮಾಡುತ್ತಿರುವ ಬಿಜೆಪಿ(BJP) ವಿರುದ್ಧ ಹೋರಾಡಲು ಹೆಚ್ಚೆಚ್ಚು ಕಾಂಗ್ರೆಸ್(Congress) ಸದಸ್ಯತ್ವ ನೋಂದಣಿ ಮಾಡುವ ಮೂಲಕ ಪಕ್ಷವನ್ನು ಸಂಘಟಿಸಬೇಕು. ಮುಂದಿನ ಮೂರು ದಿನಗಳಲ್ಲಿ ಸೂಕ್ತವಾಗಿ ಕೆಲಸ ಮಾಡದ ಮುಖ್ಯ ನೋಂದಣಿದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಹೇಳಿದ್ದಾರೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ಕಾಂಗ್ರೆಸ್ ಸದಸ್ಯತ್ವ ನೋಂದಣಿ(Congress Membership Registration) ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷನಾಗಿ ನಾನೇ ಸದಸ್ಯತ್ವ ನೋಂದಣಿ ಮಾಡುತ್ತಿದ್ದೇನೆ. ಸೋಮವಾರ ಬೆಳಗ್ಗೆ ರೈಲಿನಿಂದ ಇಳಿಯುತ್ತಿದ್ದಂತೆ 11 ಜನರ ಸದಸ್ಯತ್ವ ನೋಂದಣಿ ಮಾಡಿದ್ದೇನೆ. ಕಳೆದ ತಿಂಗಳು ಸೋನಿಯಾ ಗಾಂಧಿ(Sonia Gandhi) ಅವರನ್ನು ಭೇಟಿ ಮಾಡಿದಾಗ ಅವರು ಸದಸ್ಯತ್ವ ನೋಂದಣಿ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ಪರಿಣಾಮವಾಗಿ ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಹೀಗಾಗಿ ಎಲ್ಲರೂ ಸದಸ್ಯತ್ವ ನೋಂದಣಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
Karnataka Congress ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಬಿಗ್ ಶಾಕ್ ಕೊಟ್ಟ ಕೆಪಿಸಿಸಿ
ನೀವು ಸದಸ್ಯತ್ವ ನೋಂದಣಿ ಮಾಡುವಾಗ ಯಾರು ಸೇರುವುದಿಲ್ಲವೋ ಅವರ ಹೆಸರನ್ನು ನೀವು ಪಟ್ಟಿ ಮಾಡಿಕೊಂಡು ನಂತರದ ದಿನಗಳಲ್ಲಿ ಅವರ ಮನ ಗೆಲ್ಲಲು ಏನು ಮಾಡಬೇಕು ಎಂದು ಯೋಜನೆ ರೂಪಿಸಬಹುದು. ಸದಸ್ಯತ್ವ ನೋಂದಣಿ ಮಾಡಲು ಈಗಾಗಲೇ 19,287 ಮುಖ್ಯ ನೋಂದಣಿದಾರರ ನೇಮಕ ಮಾಡಲಾಗಿದೆ. ಇದರಲ್ಲಿ 10,139 ಮಂದಿ ಜನ ಕಾರ್ಯಪ್ರವೃತ್ತವಾಗಿಲ್ಲ. ಮುಂದಿನ ಮೂರು ದಿನಗಳಲ್ಲಿ ಮುಖ್ಯ ನೋಂದಣಿದಾರರು ಬೂತ್ ಮಟ್ಟದಲ್ಲಿ ನೋಂದಣಿದಾರರನ್ನು ನೇಮಕ ಮಾಡದಿದ್ದರೆ, ಸರಿಯಾದ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗದಿದ್ದರೆ ಅಂತಹವರನ್ನು ಪಟ್ಟಿಯಿಂದ ತೆಗೆದು ಹಾಕುತ್ತೇನೆ ಎಂದರು.
ಅತ್ಯಾಚಾರ ಹೇಳಿಕೆ: ಡಿಕೆಶಿಗೆ ಜಮೀರ್ ಸಡ್ಡು
ಹುಬ್ಬಳ್ಳಿ: ಹಿಜಾಬ್(Hijab) ಧರಿಸದ್ದಕ್ಕೆ ಅತ್ಯಾಚಾರ ಹೆಚ್ಚುತ್ತಿದೆ ಎಂಬ ಹೇಳಿಕೆಗೆ ಕ್ಷಮೆ ಕೋರುವಂತೆ ಸೂಚಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರಗೆ ಸಡ್ಡು ಹೊಡೆದಿರುವ ಮಾಜಿ ಸಚಿವ ಜಮೀರ್ ಅಹ್ಮದ್(Zamer Ahmed Khan), ನಾನು ಕ್ಷಮೆ ಕೇಳಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Hijab Row: ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಜನರ ಕ್ಷಮೆ ಕೇಳಬೇಕು: ಡಿಕೆಶಿ
ಡಿ.ಕೆ. ಶಿವಕುಮಾರ ಹೇಳಿಕೆಗೆ ಹುಬ್ಬಳ್ಳಿಯಲ್ಲಿ(Hubballi) ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾನ್ಯಾಕೆ ಹೇಳಿಕೆಯನ್ನು ಹಿಂಪಡೆಯಬೇಕು? ಅಂತಹ ಯಾವ ಹೇಳಿಕೆ ನೀಡಿದ್ದೇನೆ ಎಂದು ಕ್ಷಮೆ ಕೋರಬೇಕು? ಹಿಜಾಬ್ ಬಗ್ಗೆ ನಾನು ಮಾತನಾಡುತ್ತೇನೆ ಎಂದಿದ್ದಾರೆ.
ಮಹಿಳೆಯರಿಗೆ(Woman) ತೊಂದರೆ ಆಗುವಂತಹ ಹೇಳಿಕೆಯನ್ನು ನಾನು ನೀಡಿಲ್ಲ. ಹಿಜಾಬ್ ಯಾಕೆ ಧರಿಸುತ್ತಾರೆ, ಅದರಿಂದ ಲಾಭವೇನು ಎಂಬುದರ ಬಗ್ಗೆ ಬಿಡಿಸಿ ಹೇಳಿದ್ದೇನಷ್ಟೆ. ಆದರೆ ಮಾಧ್ಯಮದಲ್ಲಿ ಅದನ್ನು ಬೇರೆ ರೀತಿಯಾಗಿ ಸೃಷ್ಟಿಸಿ ತೋರಿಸಲಾಗಿದೆ. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವ ಪದ್ಧತಿ ಇದೆ. ಹೆಣ್ಣು ಮಕ್ಕಳ ಸೌಂದರ್ಯ ಬೇರೆಯವರಿಗೆ ಕಾಣಬಾರದು. ಬೇರೆಯವರ ದೃಷ್ಟಿ ಬೀಳಬಾರದು. ಸರ್ಕಾರ ಜನ ಸೇಫ್ ಇರಲಿ ಎಂದು ಹಾಫ್ ಹೆಲ್ಮೇಟ್ ಬದಲು ಫುಲ್ ಹೆಲ್ಮೇಟ್ ಕಡ್ಡಾಯ ಮಾಡಿದೆ. ಆದರೆ ಎಷ್ಟುಜನ ಧರಿಸುತ್ತಾರೆ? ಕುರಾನ್‌ನಲ್ಲಿ ದಿನಕ್ಕೆ ಐದು ಬಾರಿ ನಮಾಜ ಮಾಡಬೇಕು ಎಂದಿದೆ. ಆದರೆ, ಸಮಯ ಸಿಗದ ಕಾರಣ ಬಹಳಷ್ಟುಜನರು ಮಾಡಲ್ಲ. ಹಾಗೆಯೆ ಮುಸ್ಲಿಂ ಧರ್ಮದಲ್ಲೇ ಸಾಕಷ್ಟುಹೆಣ್ಣು ಮಕ್ಕಳು ಹಿಜಾಬ್ ಹಾಕುವುದಿಲ್ಲ. ಅದರಿಂದ ತೊಂದರೆ ಆಗುತ್ತದೆ ಎಂದು ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು ಜಮೀರ್ ಅಹ್ಮದ್.