ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಾನೂ ಟಿಕೆಟ್‌ ಆಕಾಂಕ್ಷಿ: ಎಚ್‌.ವಿಶ್ವನಾಥ್‌

By Govindaraj S  |  First Published Feb 8, 2024, 8:28 AM IST

ನಾನೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಆಕಾಂಕ್ಷಿ. ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ. 


ಮಡಿಕೇರಿ (ಫೆ.08): ನಾನೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಆಕಾಂಕ್ಷಿ. ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಪ್ರಯತ್ನಿಸುವುದರಲ್ಲಿ ತಪ್ಪೇನಿದೆ? ಪಕ್ಷದಲ್ಲಿ ಎಲ್ಲರಿಗೂ ಟಿಕೆಟ್ ಕೊಡುತ್ತಾರೆ ಎಂದು ಪ್ರಯತ್ನ ಮಾಡುವುದಲ್ಲ. ಪ್ರಯತ್ನ ಮಾಡುತ್ತಾ ಮಾಡುತ್ತಾ ಸಿಕ್ಕರೂ ಸಿಗಬಹುದು, ಸಿಕ್ಕದೆಯೂ ಇರಬಹುದು ಎಂದರು. ಹೈಕಮಾಂಡ್‌ನಲ್ಲೀಗ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ರಾಜಕೀಯವಾಗಿ ಎಲ್ಲಾ ರೀತಿಯಲ್ಲೂ ನಮ್ಮನ್ನು ಪ್ರೋತ್ಸಾಹಿಸಿದವರು ಅವರು. 

ಅವರೊಂದಿಗೆ ಕೆಲಸ ಮಾಡಿದ್ದೇನೆ. ನಮ್ಮ ಕೆಲಸದ ಬಗ್ಗೆ ಅವರಿಗೆ ಗೊತ್ತಿದೆ. ನಾನು ಸಂಸದನಾಗಿ ಈಗಾಗಲೇ ಕೆಲಸ ಮಾಡಿದ್ದೇನೆ, ನನ್ನ ಅನುಭವದ ಆಧಾರದ ಮೇಲೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುತ್ತೇನೆ ಎಂದರು. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸುವುದರಲ್ಲಿ ನಿಮ್ಮ ಪಾತ್ರ ಹೆಚ್ಚು ಇದೆ. ಕಾಂಗ್ರೆಸ್‌ನವರು ಮತ್ತೆ ನಿಮ್ಮನ್ನು ಒಪ್ಪುತ್ತಾರೆಯೇ ಎಂಬ ಪ್ರಶ್ನೆಗೆ, ಮೂರೂ ಪಕ್ಷಗಳಲ್ಲಿ ಇರುವವರು ಶುದ್ಧವಂತರೇ ಎಂದು ಮರು ಪ್ರಶ್ನೆ ಹಾಕಿದರು. ಸಿದ್ದರಾಮಯ್ಯ ಪರಿಶುದ್ಧ ಕಾಂಗ್ರೆಸ್ ನಾಯಕರೇ? ಯಡಿಯೂರಪ್ಪ ಅವರು ಶುದ್ಧ ಬಿಜೆಪಿಗರಾ? ಎಲ್ಲರೂ ಪಕ್ಷಾಂತರಿಗಳೇ. ನಾವು ಅಂದು ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಅಧಿಕಾರ ಕೊಡಲು ಬಿಜೆಪಿಗೆ ಹೋದವರೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದರು.

Tap to resize

Latest Videos

ಸಮಾಜದಲ್ಲಿ ಮೇಲು- ಕೀಳೆಂಬ ಭಾವನೆ ಇನ್ನೂ ದೂರಾಗಿಲ್ಲ: ಸಿದ್ದರಾಮಯ್ಯ ವಿಷಾದ

ಕನಕ ಭವನಕ್ಕೆ ಅನುದಾನ ನೀಡುವೆ: ಕನಕ ಭವನಕ್ಕೆ ಐದು ಲಕ್ಷ ಅನುದಾನ ನನ್ನ ನಿಧಿಯಲ್ಲಿ ಕೊಡುತ್ತೇನೆ ಎಂದು ಮಾಜಿ ಸಚಿವ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಅಡಗೂರು ಎಚ್‌ ವಿಶ್ವನಾಥ್‌ ಘೋಷಿಸಿದರು. ಪಟ್ಟಣದಲ್ಲಿ ಕನಕದಾಸ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ಕನಕದಾಸ ಜಯಂತಿ ಮಹೋತ್ಸವ ಸಮಾರಂಭದಲ್ಲಿ ಕನಕದಾಸರಿಗೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಮಾತನಾಡಿ ನಾನು ಕೊಡುತ್ತಿರುವುದು ಜನರ ತೆರಿಗೆಯ ಹಣ ಎಂದರು. ಇದು ಶಾಸಕ, ಸಂಸದ, ವಿಪ ಸದಸ್ಯರ ಹಣವಲ್ಲ ಜನರ ತೆರಿಗೆಯ ಹಣವನ್ನು ಕೊಡುತ್ತೇನೆ. ನಮಗೊಂದು ಪತ್ರ ಕೊಡಿ ೫ ಲಕ್ಷ ಕೊಡುತ್ತೇನೆ ಎಂದು ಹೇಳಿದರು.

ಮದ್ದೂರು ಕ್ಷೇತ್ರದಲ್ಲಿ ಶೀಘ್ರ ನಿಖಿಲ್ ಕುಮಾರಸ್ವಾಮಿ ಪ್ರವಾಸ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ

ರಾಜ್ಯದಲ್ಲಿ ೩೨ ಜಯಂತಿಗಳು, ಹಬ್ಬ, ಶನಿವಾರ, ಭಾನುವಾರಗಳ ರಜೆಯಲ್ಲೇ ಸರ್ಕಾರ ಕಾಲ ಕಳೆದರೆ ರಾಜ್ಯದ ಅಭಿವೃದ್ಧಿ, ಆಡಳಿತಕ್ಕೆ ಸಮಯವೇ ಇಲ್ಲ. ಹಾಗಾಗಿ ಎಲ್ಲಾ ವಿಭೂತಿ ಪುರುಷರ ಜಯಂತಿಗಳನ್ನು ಆಚರಿಸಿ ಆಡಳಿತ ನಡೆಸಿ ಆಗ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಮಾಜಿ ಸಚಿವ ಅಡಗೂರು ವಿಶ್ವನಾಥ್‌ ಸರ್ಕಾರಕ್ಕೆ ಸಲಹೆ ನೀಡಿದರು. ದೇಶದಲ್ಲಿ ಜಯಂತಿಗಳಿಗೇನು ಬರವಿಲ್ಲ, ನಡೆಯುತ್ತಿವೆ ಆದರೆ ಮರುದಿನ ಜಯಂತಿಯ ಅರ್ಥವೇ ಆಗಲ್ಲ ಹಾಗಾಗಿ ಜಯಂತಿಗಳ ಆಚರಣೆಗೆ ಪೂರ್ವ ಭಾವಿ ಸಭೆ ದಿನ ಕೆಲಸವಿಲ್ಲ. ಜಯಂತಿ ರಜೆ ಘೋಷಣೆ ಆದರೆ ಆಡಳಿತ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು. ವಿಭೂತಿ ಪುರುಷರು ಮನುಷ್ಯರು ಹೇಗೆ ಬದುಕಬೇಕು ಎಂಬ ಸಂದೇಶ ೧೨ ಮತ್ತು ೧೫ ನೇ ಶತಮಾನದಲ್ಲಿ ಹೇಳಿದ್ದಾರೆ. ಸ್ವಾತಂತ್ರ್ಯ ನಂತರ ಅಂಬೇಡ್ಕರ್‌ ಹೇಳಿದ್ದಾರೆ. ಹಾಗಾಗಿ ಜಯಂತಿಗಳು ಒಟ್ಟಿಗೆ ಆಚರಣೆ ಮಾಡಲಿ ಎಂದರು.

click me!