ನನಗೂ ಸಿಎಂ ಆಗುವ ಆಸೆ ಇದೆ, ಆದರೆ ಈಗಲ್ಲ: ಸಚಿವ ಎಂ.ಬಿ.ಪಾಟೀಲ್

By Govindaraj SFirst Published Sep 8, 2024, 7:18 PM IST
Highlights

ಸಿಎಂ‌ ಸಿದ್ದರಾಮಯ್ಯ ಬಲಿಷ್ಟರಾಗಿದ್ದು ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಆಗಿ ಅವರೇ ಮುಂದುವರೆಯುತ್ತಾರೆ. ಅದೆಲ್ಲ ಮುಗಿದ ಬಳಿಕ ಮುಂದೆ ಸಿದ್ದರಾಮಯ್ಯ ಸರದಿ ಮುಗಿದ ಬಳಿಕ ಮುಂದೊಂದು ದಿನ ನಾನು‌ ಸಿಎಂ ಆಗುತ್ತೇನೆ. 

ಷಡಕ್ಷರಿ ಕಂಪುನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ.08): ಸಿಎಂ‌ ಸಿದ್ದರಾಮಯ್ಯ ಬಲಿಷ್ಟರಾಗಿದ್ದು ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಆಗಿ ಅವರೇ ಮುಂದುವರೆಯುತ್ತಾರೆ. ಅದೆಲ್ಲ ಮುಗಿದ ಬಳಿಕ ಮುಂದೆ ಸಿದ್ದರಾಮಯ್ಯ ಸರದಿ ಮುಗಿದ ಬಳಿಕ ಮುಂದೊಂದು ದಿನ ನಾನು‌ ಸಿಎಂ ಆಗುತ್ತೇನೆ. ಸಿಎಂ‌ ಆಗುವ ಆಸೆ ಇದೆ. ಆದರೆ ಯಾರದೋ ಸ್ಥಾನ‌ ಕಸಿದುಕೊಂಡು ಸಿಎಂ ಆಗುವ ದುರಾಸೆ‌ ನನಗಿಲ್ಲ. ಸಿಎಂ ಆಗಲು ಪಕ್ಷ ಹಾಗೂ ಶಾಸಕರು ನಿರ್ಧರಿಸಬೇಕಿದೆ. ರಾಜ್ಯದಲ್ಲಿ ಒಳ್ಳೆಯ, ಅಭಿವೃದ್ಧಿ ಕೆಲಸ ಮಾಡಲು ಸಿಎಂ ಆಗುವ ಆಸೆಯಿದೆ ಆ ಸಮಯ ಬಂದಾಗ ಸಿಎಂ ಆಗುತ್ತೇನೆ ಎಂದು‌ ಸಚಿವ ಡಾ.ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಬಬಲೇಶ್ವರ ಮತಕ್ಷೇತ್ರದ ಮಮದಾಪುರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Latest Videos

ಮುಡಾ ಹಗರಣದಲ್ಲಿ‌ ಸಿಎಂ ಪಾತ್ರ ಇಲ್ಲ: ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ಕುರಿತು ಯಾವುದೇ ಹುರಳಿಲ್ಲ, ಪಾತ್ರವಿಲ್ಲ. ನ್ಯಾಯಾಲಯದಲ್ಲಿಯೂ ಸಿದ್ದರಾಮಯ್ಯ ಅವರ ಪರವಾಗಿ ತೀರ್ಪು ಬರುತ್ತದೆ, ನ್ಯಾಯ ಸಿಗುತ್ತದೆ. ಬಿಜೆಪಿಯವರು ಪಶ್ಚಾತಾಪ ಪಡುತ್ತಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ನಾವೆಲ್ಲ ಸಿದ್ದರಾಮಯ್ಯರ ಜೊತೆಗಿದ್ದೇವೆ. ಈ ಕುರಿತು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು, ಸಚಿವರು, ಶಾಸಕರು, ಕಾರ್ಯಕರ್ತರು, ಪದಾಧಿಕಾರಿಗಳು ಸಿದ್ದರಾಮಯ್ಯ ಪರವಾಗಿದ್ದೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದು, ಸಿಎಂ ಆಗಿ ಮುಂದುವರೆಯುತ್ತಾರೆ ಎಂದ ಸಚಿವ ಎಂ ಬಿ ಪಾಟೀಲ್ ಸ್ಪಷ್ಟಪಡಿಸಿದರು.

ಕಲಬುರಗಿಯಲ್ಲಿ ಹನಿಟ್ರ್ಯಾಪ್‌, ಬ್ಲ್ಯಾಕ್‌ಮೇಲ್ ದಂಧೆ: ಸಂತ್ರಸ್ತೆಯರ ಆರೋಪ

ದೆಹಲಿ ವರಿಷ್ಠರ ಭೇಟಿ ತಪ್ಪಲ್ಲ: ಕಾಂಗ್ರೆಸ್ ನ ಕೆಲ ನಾಯಕರ ದೆಹಲಿ ಭೇಟಿ ವಿಚಾರವಾಗಿ, ದೆಹಲಿಗೆ ಹೋಗಬಾರದು ಎಂದಿದೆಯಾ? ನಾನು ಕೇಂದ್ರ ಸಚಿವರನ್ನ ಭೇಟಿಯಾಗಲು ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗುವುದರಲ್ಲಿ ತಪ್ಪಿಲ್ಲ ವರಿಷ್ಠರನ್ನ ಭೇಟಿಯಾಗುತ್ತಿರುತ್ತಾರೆ ಎಂದರು. ಸತೀಶ್ ಜಾರಕಿಹೋಳಿ ಸಿಎಂ ಆಗಬೇಕೆಂದು ಲಕ್ಷ್ಮಣ ಸವದಿ ಬೆಂಬಲ ವಿಚಾರವಾಗಿ, ಸತೀಶ್ ಜಾರಕಿಹೋಳಿ ಇರಲಿ ಎಂ ಬಿ ಪಾಟೀಲ್ ಇರಲಿ ಯಾರೇ ಇರಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.

ಜೂನಿಯರ್-ಸಿನಿಯರ್ ಚರ್ಚೆಗೆ ಎಂಬಿಪಿ ಸ್ಪಷ್ಟನೆ: ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ ಬಿ ಪಾಟೀಲ್, ಇದಕ್ಕೆ ನಿನ್ನೆ ಉತ್ತರ ನೀಡಿದ್ದೇನೆ. ನಾನು ಡಿಕೆಶಿ ಸೀನಿಯರ್ ಇದ್ದೇವೆ. ಸತೀಶ ಜಾರಕಿಹೋಳಿಗಿಂತ ನಾನು ಸೀನಿಯರ್. ಪರಮೇಶ್ವರ ಅವರು ನಾವೆಲ್ಲ ಒಂದೇ  ಹಂತದಲ್ಲಿದ್ದೇವೆ. ನಮಗಿಂತ ಮೇಲಿನ‌ ಹಂತದ ಸೀನಿಯರ್ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ, ಸಿದ್ದರಾಮಯ್ಯ ಆರ್ ವಿ ದೇಶಪಾಂಡೆ ಅವರಿದ್ದಾರೆ. ಸಿಎಂ ಮಾಡುವ ವೇಳೆ ಸೀನಿಯರ್ ಜೂನಿಯಾರಿಟಿ ಪ್ರಶ್ನೆ ಬರಲ್ಲ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಶರದ್ ಪವಾರ್ ಉದಾಹರಣೆ ಇದೆ. ನಮ್ಮಲ್ಲೇ ಗುಂಡೂರಾವ್, ದೇವರಾಜ್ ಅರಸ್ ಉದಾಹರಣೆ ಇದೆ. ನಮ್ಮಲ್ಲಿ‌ ಹಾಗೂ ಬೇರೆ ಪಕ್ಷಗಳ ನೂರಾರು ಜನ‌ 28 ವರ್ಷ ಆದವರು ಸಿಎಂ ಆಗಿದ್ದಾರೆ. ಈಗ ಸಿಎಂ ಆಗುವ ವಿಚಾರ ಅಪ್ರಸ್ತುತ ಎಂದರು.

ಸಿಎಂ ಆಸೆ ಬಿಚ್ಚಿಟ್ಟ ಎಂಬಿ ಪಾಟೀಲ್: ಆದರೆ ನಾನು ಕಾಂಗ್ರೆಸ್‌ನಿಂದ ಮುಂದೆ ಒಂದು‌ ದಿನ ಸಿಎಂ ಆಗುತ್ತೇನೆ. ಅಸೆ ಇದೆ ದುರಾಸೆ‌ ಇಲ್ಲ. ನಾನು ಸಿಎಂ ಆದರೆ ಜನರಿಗೆ ಒಳ್ಳೆಯದನ್ನು ಮಾಡುವೆ. ನೀರಾವರಿ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ. ನಾನು ಸಿಎಂ ಆದರೆ ವಿಜಯಪುರ ಜಿಲ್ಲೆಯ ಜನರಿಗೆ, ರಾಜ್ಯದ ಜನರಿಗೆ ಖುಷಿಯಾಗುತ್ತದೆ. ಈಗ ಸಿಎಂ ಸಿದ್ದರಾಮಯ್ಯ ಅವರ ಅಥವಾ ಬೇರೆಯವರ ಸ್ಥಾನದ ಮೇಲೆ ಕೈ ಹಾಕಲ್ಲ. ಸ್ವಯಂ ಘೋಷಿತವಾಗಿ ಸಿಎಂ ಆಗಲು ಬರಲ್ಲ. ಸಿಎಂ ಮಾಡುವ ತೀರ್ಮಾನ ಪಕ್ಷದ ಹೈಕಮಾಂಡ್ ಹಾಗೂ ಶಾಸಕರು‌ ತೀರ್ಮಾನ ಮಾಡುತ್ತಾರೆ. ಯಾರನ್ನು ತೆಗೆದು ಹಾಕುವ ಕೆಲಸಕ್ಕೆ ನಾನು ಕೈ ಹಾಕಲ್ಲ ಎಂದರು.

ಮಹದಾಯಿ ಯೋಜನೆ ಜಾರಿಗೆ ಬಿಜೆಪಿ ಬದ್ಧ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಸಿದ್ದರಾಮಯ್ಯ ಜೊತೆಗಿನ ಹೋಲಿಕೆ ತಪ್ಪು: ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಎಂ ಬಿ ಪಾಟೀಲ್ ಗಿಂತ ಬಹಳ ಜನರು‌ ಹಿರಿಯರಿದ್ದಾರೆ. ಎಂಬ ಶಿವಾನಂದ ಪಾಟೀಲ್ ಹೇಳಿಕೆಗೆ, ಹಾಗೂ ಶಿವಾನಂದ ಪಾಟೀಲ್ ಜೆಡಿಎಸ್‌ನಿಂದ ಬಂದವರು ಎಂದು ಎಂ ಬಿ ಪಾಟೀಲ್ ಹೇಳಿಕೆಗೆ, ಸಿದ್ದರಾಮಯ್ಯ ಸಹ ಜೆಡಿಎಸ್‌ನಿಂದ ಬಂದವರು ಎಂಬ ಶಿವಾನಂದ ಪಾಟೀಲ್ ಹೇಳಿಕೆಗೆ ಸಚಿವ ಡಾ.ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರದ್ದು ಸ್ಪೆಷಲ್ ‌ಕೇಸ್. ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ತಪ್ಪು. ಅವರದ್ದು ದೊಡ್ಡ ವ್ಯಕ್ತಿತ್ವ. ಸಿದ್ದರಾಮಯ್ಯ ದೊಡ್ಡ ನಾಯಕರು ಎಂದರು.

click me!