
ಬೀದರ್ (ಸೆ.8) 'ಆ ಪಾಕೀಟ್ ಎಂಎಲ್‌ಎ ಏನಾದರೂ ಮಾತಾಡಿದರೇ ನಾಲಗೆ ಕಟ್ ಮಾಡುತ್ತೇನೆ' ಎಂದು ಬಿಜೆಪಿ ಶಾಸಕ ಸಿದ್ದು ಪಾಟೀಲ್ ವಿರುದ್ಧ ಸಹೋದರ ಸಂಬಂಧಿ ಕಾಂಗ್ರೆಸ್ ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ.
ಹುಮನಾಬಾದ್ ಪಟ್ಟಣದಲ್ಲಿ ನಡೆದ ನೂತನ ಕಾಂಗ್ರೆಸ್ ಸಂಸದರು, ಶಾಸಕರ ಸನ್ಮಾನ ಸಮಾರಂಭದಲ್ಲಿ ಮಾತನಾಡುವ ವೇಳೆ ನಾಲಗೆ ಹರಿಬಿಟ್ಟ ಎಂಎಲ್ಸಿ ಚಂದ್ರಶೇಖರ್ ಪಾಟೀಲ್, ನಮ್ಮ ಅಣ್ಣ ರಾಜಶೇಖರ್ ಪಾಟೀಲ್ ಈ ವಿಚಾರದಲ್ಲಿ ಶಾಂತವಾಗಿರಬೇಕು. ನಾನು ನಮ್ಮಣ್ಣ ಭೀಮು ಪಾಟೀಲ್ ಶಾಸಕ ಸಿದ್ದು ಪಾಟೀಲನ ನಾಲಗೆ ಕಟ್ ಮಾಡ್ತೇವೆ. ತಾವು ಸ್ವಲ್ಪ ಸಮಾಧಾನದಿಂದ ಇರಬೇಕು ನಾವು ಇಬ್ಬರು ಅಣ್ಣತಮ್ಮ ಇಲ್ವಾ ಎಂದಿದ್ದಾರೆ.
ಬಾಗೀನ ಅರ್ಪಿಸುವ ವೇಳೆ ಈಶ್ವರ್ ಖಂಡ್ರೆ ಜಸ್ಟ್ ಮಿಸ್, 'ಕೆರೆಗೆ ಹಾರ' ದಿಂದ ಬಚಾವ್ ಆದ ಅರಣ್ಯ ಸಚಿವ!
ಅವನು(ಶಾಸಕ) ಪಾಕೀಟ್ ಎಂಎಲ್‌ಎ ಏನಾದ್ರೂ ಅಂದ್ರೆ ನಾಲಗೆ ಕಟ್ ಮಾಡುತ್ತೇನೆ. ನೀವು ಸ್ವಲ್ಪ ಸಮಯ ಕೊಡ್ರಿ. ಅವನಿಗೆ ಗಣೇಶನ ಸೊಂಡಿಲಿನಿಂದ ಬಿಸಾಕುತ್ತೇವೆ ಸ್ವಲ್ಪ ಶಾಂತವಾಗಿರಬೇಕು ಎನ್ನುವ ಮೂಲಕ ಬಹಿರಂಗ ವೇದಿಕೆ ಮೇಲೆಯೇ ಬಿಜೆಪಿ ಶಾಸಕ ಸಿದ್ದು ಪಾಟೀಲ್ ವಿರುದ್ಧ ಬೆದರಿಕೆ ಹಾಕಿದ್ದಾರೆ. ಘಟನೆ ವಿಡಿಯೋ ವೈರಲ್ ಆಗಿದ್ದು, ಎರಡೂ ಕಡೆಯಿಂದ ತೀವ್ರ ಪ್ರತಿಕ್ರಿಯೆಗಳು ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.