ಮಹಿಳೆಗೆ ಯಜಮಾನಿಕೆ ಪದವಿ ನೀಡಿದ ಕಾಂಗ್ರೆಸ್ ಸರ್ಕಾರ: ಹುನಗುಂದ ಶಾಸಕ ಕಾಶಪ್ಪನವರ

Published : Feb 12, 2024, 01:00 AM IST
ಮಹಿಳೆಗೆ ಯಜಮಾನಿಕೆ ಪದವಿ ನೀಡಿದ ಕಾಂಗ್ರೆಸ್ ಸರ್ಕಾರ: ಹುನಗುಂದ ಶಾಸಕ ಕಾಶಪ್ಪನವರ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯ ಧ್ವನಿ ಗಟ್ಟಗೊಳಿಸಲು ಮಹಿಳೆಯರಿಗಾಗಿ 4 ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಕೊಟ್ಟ ೫ ಗ್ಯಾರಂಟಿಗಳನ್ನು ಕೇವಲ ೭ ತಿಂಗಳಲ್ಲಿ ಜಾರಿಗೊಳಿಸಿದ್ದೇವೆ. ಜೊತೆಗೆ ಪ್ರಣಾಳಿಕೆಯಲ್ಲಿ 68 ಭರವಸೆ ಈಡೇರಿಸಿದ್ದೇವೆ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ 

ಇಳಕಲ್ಲ(ಫೆ.12): ಮಹಿಳೆಗೆ ಕುಟುಂಬದ ಯಜಮಾನಿಕೆ ಪದವಿ ನೀಡಿ ಮಹಿಳೆಯರ ಹೆಸರಲ್ಲೇ ನಾಲ್ಕು ಗ್ಯಾರಂಟಿ ನೀಡಿ ಆರ್ಥಿಕವಾಗಿ ಸಬಲೀಕರಣಗೊಳಿಸಿದ ಏಕೈಕ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರಸಭೆ ಪಕ್ಕದಲ್ಲಿರುವ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಗಲಕೋಟೆ ಜಿಲ್ಲಾ ಆಡಳಿತ, ತಾಲೂಕು ಆಡಳಿತ ಕಾರ‍್ಯಾಲಯ ಹಾಗೂ ನಗರಸಭೆ ಕರ‍್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯ ಧ್ವನಿ ಗಟ್ಟಗೊಳಿಸಲು ಮಹಿಳೆಯರಿಗಾಗಿ 4 ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಕೊಟ್ಟ ೫ ಗ್ಯಾರಂಟಿಗಳನ್ನು ಕೇವಲ ೭ ತಿಂಗಳಲ್ಲಿ ಜಾರಿಗೊಳಿಸಿದ್ದೇವೆ. ಜೊತೆಗೆ ಪ್ರಣಾಳಿಕೆಯಲ್ಲಿ 68 ಭರವಸೆ ಈಡೇರೊಸಿದ್ದೇವೆ. ೨೦೧೪ರ ಚುನಾವಣಾ ಪೂರ್ವದಲ್ಲಿ ನೀಡಿದ ೬೫ ಭರವಸೆಗಳಲ್ಲಿ ೫೮ ಭರವಸೆಗಳನ್ನು ಈಡೇರಿಸಿದ್ದೇವೆ. ಸಂಕಷ್ಟದಲ್ಲಿರುವವರಿಗೆ ಹಸಿದವರಿಗೆ ಅನ್ನಭಾಗ್ಯ ನೀಡಿ ಹಸಿವು ನೀಗಿಸುವ ಕಾರ್ಯ ಮಾಡಿದರೆ ಬಿಜೆಪಿಯವರು ಅಕ್ಷತೆ ನೀಡುತ್ತಿದ್ದಾರೆ. ನಿಮಗೆ ಗ್ಯಾರಂಟಿ ಬೇಕೋ ಅಕ್ಷತೆ ಬೇಕೋ ನೀವೇ ನಿರ್ಧರಿಸಿರಿ ಎಂದರು.

ಚಲಾವಣೆಯಾಗದ ₹ 5 ನೋಟು, 10 ರೂ. ನಾಣ್ಯ?

ತಹಸಿಲ್ದಾರ್‌ ನಿಂಗಪ್ಪ ಬಿರಾದಾರ, ನಗರಸಭೆ ಸದಸ್ಯೆ ರೇಷ್ಮಾ ಮಾರನಬಸರಿ, ಹೆಸ್ಕಾಂ ಅಧಿಕಾರಿ ಚೇತನಕುಮಾರ ಹಾದಿಮನಿ, ವಿಜಯಮಹಾಂತೇಶ ಗದ್ದನಕೇರಿ, ಇಳಕಲ್ಲ ಶಹರ ಪೊಲೀಸ್‌ಠಾಣೆ ಪಿಎಸ್‌ಐ ಎಸ್.ಆರ್. ನಾಯಕ ಮಾತನಾಡಿದರು.

ವೇದಿಕೆ ಮೇಲೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಕೆಎಸ್ಆರ್ಟಿಸಿ ವ್ಯವಸ್ಥಾಪಕ ಗಾಣಿಗೇರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಕುಬಕಚ್ಚಿ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಆಮದಿಹಾಳ, ಮುತ್ತಣ್ಣ ಕಲ್ಗುಡಿ ಹಾಗೂ ನಗರಸಭೆ ಸದಸ್ಯರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಸ್ವಾಗತಿಸಿದರು. ಇಳಕಲ್ಲ ತಾಲೂಕು ೨ಗ್ರೇಡ್ ತಹಸೀಲ್ದಾರ್‌ ಈಶ್ವರ ಗಡ್ಡಿ ವಂದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ