ಮುಸ್ಲಿಮರನ್ನು ವಿರೋಧಿಸುವ ಬಿಜೆಪಿ, ಆರ್‌ಎಸ್‌ಎಸ್‌ನವರೇ ನಿಜವಾದ ಭಯೋತ್ಪಾದಕರು: ಎಂ.ಲಕ್ಷ್ಮಣ್!

By Sathish Kumar KH  |  First Published Oct 15, 2024, 2:11 PM IST

ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ವಾಪಸಾತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ. ಮುಸ್ಲಿಂ ಸಮುದಾಯವನ್ನು ವಿರೋಧಿಸುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರೇ ನಿಹವಾದ ಭಯೋತ್ಪಾದಕು ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.


ಮೈಸೂರು (ಅ.15): ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ವಾಪಸಾತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ. ಬಿಜೆಪಿಯವರು ಇಡೀ ಮುಸ್ಲಿಂ ಸಮುದಾಯವನ್ನು ವಿರೋಧ ಮಾಡುತ್ತಿದ್ದಾರೆ. ಮುಸ್ಲಿಮರನ್ನು ಭಯೋತ್ಪಾದಕರಿಗೆ ಹೋಲಿಸು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರೇ ದೇಶದ ನಿಜವಾದ ಭಯೋತ್ಪಾದಕರು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಮೇಲಿ‌ನ ಪ್ರಕರಣ ರಾಜ್ಯ ಸರ್ಕಾರದಿಂದ ರದ್ದತಿ ವಿಚಾರದ ಕುರಿತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿ ಗಲಭೆಯಲ್ಲಿ ಮುಸ್ಲಿಂ ಸಮುದಾಯದವರ ಹೆಸರು ಇರುವುದಕ್ಕೆ ಬಿಜೆಪಿಯವರು ಟೀಕಿಸುತ್ತಾರೆ. ಮುಸ್ಲಿಮರ ಹೆಸರು ಕೇಳಿದರೆ ಬಿಜೆಪಿಯರಿಗೆ ಉರಿ. ಮುಸ್ಲಿಮರನ್ನು ಭಯೋತ್ಪಾದಕರಿಗೆ ಹೋಲಿಸುತ್ತಿದ್ದಾರೆ. ಆದರೆ ಬಿಜೆಪಿ ಹಾಗು ಆರ್ ಎಸ್ ಎಸ್ ನವರು ನಿಜವಾದ ಭಯೋತ್ಪಾದಕರು ಎಂದು ಟೀಕೆ ಮಾಡಿದರು.

Tap to resize

Latest Videos

ಇದನ್ನೂ ಓದಿ: ಸಿಗರೇಟ್ ಸೇದುವುದನ್ನು ಬಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ!

ರಾಜ್ಯದಲ್ಲಿ ಸರ್ಕಾರದಿಂದ ಒಟ್ಟು 43 ಪ್ರಕರಣಗಳನ್ನು ಕೈಬಿಡಲಾಗಿದೆ. ಅದರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಗೆ ಸಂಬಂಧಿಸಿದ 9 ಪ್ರಕರಣಗಳಿವೆ. ಉಳಿದ 34 ಪ್ರಕರಣಗಳು ಬಿಜೆಪಿ ಸರ್ಕಾರದ ಅವಧಿಗೆ ಸೇರಿದ್ದಾಗಿವೆ. ರೈತ ಮುಖಂಡರು, ಕನ್ನಡಪರ ಹೋರಾಟಗಾರರಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ. ಹುಬ್ಬಳ್ಳಿ ಗಲಬೆಯ ಪ್ರಕರಣದಲ್ಲಿ ಮುಸ್ಲಿಮರ ಹೆಸರು ಇರುವುದರಿಂದ ಬಿಜೆಪಿಗರು ಈ ವಿಚಾರವನ್ನು ಹಿಡಿದುಕೊಂಡು ಎಲ್ಲರೂ ಮಾತನಾಡುತ್ತಾ ದೊಡ್ಡದು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಕುರಿತು ದೂರು ನೀಡಿರುವ ಸ್ನೇಹಮಯಿಕೃಷ್ಣ ವಿರುದ್ಧ 43 ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ಇವರು, ಸಿಎಂ ಸಿದ್ದರಾಮಯ್ಯರನ್ನು ಬಂಧಿಸಿ ವಿಚಾರ ನಡೆಸುವಂತೆ ಆಗ್ರಹಿಸಿದ್ದಾರೆ. ಪ್ರತಿನಿತ್ಯ ಲೋಕಾಯುಕ್ತ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: 25 ವರ್ಷದ ಹಿಂದಿನದು, ತಪ್ಪಿಲ್ಲ ಎಂದು ತೀರ್ಪು ಬಂದಿದೆ, ಈಗ ವಿವಾದ ಏಕೆ?: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಇನ್ನು ಸ್ನೇಹಮತಿ ಕೃಷ್ಣ ನನ್ನ ವಿರುದ್ಧ ಲಕ್ಷ್ಮಣ್ ಪ್ರತಿನಿತ್ಯ ಲೋಕಾಯುಕ್ತಗೆ ಹೋಗುತ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ನಾನು ಒಮ್ಮೆ ಮಾತ್ರ ಹೋಗಿದ್ದೇನೆ. ಲೋಕಾಯುಕ್ತ ಕಚೇರಿ ಪಕ್ಕದಲ್ಲಿರುವ ಹೋಟೆಲ್ ಕಾಫಿ ಕುಡಿಯಲು ಪ್ರತಿನಿತ್ಯ ಹೋಗುತ್ತೇನೆ. ಇದನ್ನೇ ಲೋಕಾಯುಕ್ತ ಕಚೇರಿಗೆ ಹೋಗುತ್ತಿರುವುದಾಗಿ ಹೇಳುತ್ತಿದ್ದಾರೆ. ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್‌ಮೇಲರ್. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಕರಣ ತನಿಖೆಯ ಹಂತದಲ್ಲಿರುವಾಗ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸ್ನೇಹಮಯಿ ಕೃಷ್ಣ ಕೇಂದ್ರ ಸರ್ಕಾರದ ಸೂತ್ರಧಾರರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

click me!