ಬಂಡಾಯದ ಬಿಸಿ: 16 ನಾಯಕರಿಗೆ ಬಿಜೆಪಿ ಗೇಟ್‌ಪಾಸ್, 34 ಮುಖಂಡರನ್ನು ಉಚ್ಚಾಟಿಸಿದ ಕಾಂಗ್ರೆಸ್

By Suvarna NewsFirst Published Aug 30, 2021, 9:46 PM IST
Highlights

* ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳ ಬಿಸಿ
* ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ಗೆ ಕಸಿವಿಸಿ
* ಪಕ್ಷದ ವಿರುದ್ಧ ತೊಡೆತಟ್ಟಿದವರಿಗೆ ಗೇಟ್ ಪಾಸ್

ಧಾರವಾಡ, (ಆ.30): ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮಹಾನಗರ ಪಾಲಿಕೆ ಚುಣಾವಣೆಯ ಕಾವು ರಂಗೇರಿದ್ದು, ಲೋಕಲ್ ಪೈಟ್ ನಲ್ಲಿ ನಾನಾ ನೀನಾ ಅನ್ನೋ ಪ್ರಶ್ನೆ ಎದ್ದು ಕಾಣ್ತಾ ಇದೆ.

ಇದರ ಮಧ್ಯೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್‌ ಸಿಗದೇ ತಮ್ಮ ಪಕ್ಷದ ವಿರುದ್ಧವೇ ತೊಡೆತಟ್ಟಿ ನಿಂತಿದ್ದಾರೆ. ಇದೀಗ ಅವರೆಲ್ಲರಿಗೆ ಪಕ್ಷದಿಂದ ಗೇಟ್‌ ಪಾಸ್‌ ನೀಡಲಾಗಿದೆ.

ಬಿಜೆಪಿ ವಿರುದ್ಧ ತೊಡೆತಟ್ಟಿ ನಿಂತ ಪ್ರಹ್ಲಾದ್ ಜೋಶಿ ಆಪ್ತ: ಚುನಾವಣೆಯಲ್ಲಿ ಗುರು-ಶಿಷ್ಯರ ಕದನ

ಪಕ್ಷದ ವಿರುದ್ಧವೇ ತೊಡೆತಟ್ಟಿರುವ ಬಿಜೆಪಿ 16 ಹಾಗೂ ಕಾಂಗ್ರೆಸ್‌ನಿಂದ 34 ಮುಖಡರುಗಳನ್ನ ಪಕ್ಷದಿಂದ  ಉಚ್ಚಾಟಿಸಲಾಗಿದೆ. ನಾಯಕರ ಮನವೊಲಿಕೆಗೂ ಮಣಿಯದೆ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದವರನ್ನ ಬಿಜೆಪಿ ಮತ್ತು ಕಾಂಗ್ರೆಸ್ 6 ವರ್ಷ ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದೆ.

ಬಿಜೆಪಿಯಿಂದ 16 ಮುಖಂಡರಿಗೆ ಗೇಟ್‌ ಪಾಸ್
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಧಾರವಾಡ ಜಿಲ್ಲೆಯ ತನ್ನ 16 ಮುಖಂಡರನ್ನು ಬಿಜೆಪಿ ಉಚ್ಚಾಟಿಸಿದೆ. ಈ ಮುಖಂಡರನ್ನ 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟಿಸಿ ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಅರವಿಂದ ಬೆಲ್ಲದ್ ಆದೇಶಿಸಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಫರ್ಧಿಸಿದ್ದಕ್ಕೆ ಉಚ್ಚಾಟನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. 

ಕಾಂಗ್ರೆಸ್‌ನಿಂದ 34 ನಾಯಕರು ಉಚ್ಛಾಟನೆ
ಕೇವಲ ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದ ಅಭ್ಯರ್ಥಿಗಳನ್ನು ಸಹ ಉಚ್ಚಾಟನೆ ಮಾಡಲಾಗಿದೆ. 34 ಅಭ್ಯರ್ಥಿಗಳನ್ನು ಉಚ್ಚಾಟನೆ ಮಾಡಿ ಕಾಂಗ್ರೆಸ್ ಆದೇಶ ಹೊರಡಿಸಿದೆ. ಮುಂದಿನ 6 ವರ್ಷ ಪಕ್ಷದಿಂದ ಉಚ್ಚಾಟಿಸಿ ಆದೇಶ ನೀಡಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಆದೇಶ ಹೊರಡಿಸಿದ್ದಾರೆ. ವಿವಿಧ ವಾರ್ಡುಗಳ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ 34 ಜನರನ್ನು ಮುಂದಿನ 6 ವರ್ಷ ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಲಾಗಿದೆ.

click me!