
ಬೆಂಗಳೂರು (ಮಾ.18): ರಾಜ್ಯ ರಾಜಕಾರಣದಲ್ಲಿ ಮತ್ತೆ ಹನಿಟ್ರ್ಯಾಪ್ ಸದ್ದು ಮಾಡಿದೆ. ವಿಧಾನಸೌಧದ ಮೊಗಸಾಲೆಯಲ್ಲಿ ಹನಿಟ್ರ್ಯಾಪ್ ಕುರಿತು ಸಾಕಷ್ಟು ಚರ್ಚೆಯಾಗಿದೆ. ಹನಿಟ್ರ್ಯಾಪ್ ಗೆ ಬಲಿಯಾದವರು ಯಾರು ಅನ್ನೋ ಬಗ್ಗೆ ಕುತೂಹಲ ಶುರುವಾಗಿದೆ. ಅಧಿಕಾರಸ್ಥ ವ್ಯಕ್ತಿಯನ್ನು ಹನಿಟ್ರ್ಯಾಪ್ ಗೆ ಒಳಪಡಿಸಿದ ಶಕ್ತಿ ಎಂತಹುದು ಎನ್ನುವುದರ ಬಗ್ಗೆಯೂ ಚರ್ಚೆ ಶುರುವಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಸಚಿವರಿಂದ ಹನಿಟ್ರ್ಯಾಪ್ ಕುರಿತು ಬಹಿರಂಗ ಹೇಳಿಕೆಗಳು ಬರೋಕೆ ಶುರುವಾಗಿದೆ. ಕಳೆದ 20 ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿರುವ ಹನಿಟ್ರ್ಯಾಪ್ ಕುರಿತ ಚರ್ಚೆ ಈಗ ಮುನ್ನಲೆಗೆ ಬಂದಿದೆ. ಅಧಿವೇಶನದ ಹೊತ್ತಲ್ಲಿ ಹನಿಟ್ರ್ಯಾಪ್ ಕುರಿತು ಸಚಿವರುಗಳಿಂದಲೇ ಬಹಿರಂಗ ಹೇಳಿಕೆ ಬರುತ್ತಿದೆ.
ಹನಿಟ್ರ್ಯಾಪ್ ಕುರಿತು ಪರೋಕ್ಷವಾಗಿ ಸಚಿವರುಗಳು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಹಾಲಿ ಸಚಿವರೊಬ್ಬರು ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ ಅನ್ನೋ ಅನ್ನೋ ಬಗ್ಗೆ ಗುಸು ಗುಸು ಶುರುವಾಗಿದೆ. ಪ್ರಭಾವಿ ವಿಧಾನಸಭೆಯ ಮೊಗಸಾಲೆಯಲ್ಲಿ ಈ ಕುರಿತು ಶಾಸಕರು - ಸಚಿವರ ಮಧ್ಯೆ ಚರ್ಚೆ ಕೂಡ ನಡೆದಿದೆ. ಯಾವ ಗುಂಪು ಹನಿಟ್ರ್ಯಾಪ್ ಮಾಡಿದೆ ಅಂತ ಶಾಸಕರು ಪ್ರಶ್ನೆ ಮಾಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮರೆತು ಹೋಗಿದ್ದ ಹನಿಟ್ರ್ಯಾಪ್ ವಿಚಾರ ಈಗ ಮುನ್ನೆಲೆಗೆ ಬಂದ ಬಗ್ಗೆಯೂ ಕುತೂಹಲ ಶುರುವಾಗಿದೆ.ಅಧಿವೇಶನದ ಕ್ರೈಮ್ಯಾಕ್ಸ್ ಹೊತ್ತಲ್ಲಿ ಸದ್ದು ಮಾಡ್ತಿರುವ ಹನಿಟ್ರ್ಯಾಪ್ ಕಂಪನ ಹೇಗಿರಲಿದೆ ಅನ್ನೋದು ಮುಂದಿನ ವಿಚಾರವಾಗಿದೆ. ಈ ಬಾರಿ ಹನಿಟ್ರ್ಯಾಪ್‌ಗೆ ಯಾರ ತಲೆದಂಡ ಆಗಲಿದೆ ಅನ್ನೋ ಚರ್ಚೆಯೂ ಜೋರಾಗಿದೆ
ಹನಿಟ್ರ್ಯಾಪ್ ಕುರಿತು ಸಚಿವರುಗಳು ಹೇಳಿದ್ದೇನು: 'ಹನಿಟ್ರ್ಯಾಪ್ ಮಾಡೋರಿಗೆ ಯಾವುದೇ ಕ್ಷಮೆ ಇಲ್ಲ. ಇದು ಮೋಸ್ಟ್ ಡೇಂಜರಸ್ ಥಿಂಗ್. ಯಾರಾದರೂ ಹನಿಟ್ರ್ಯಾಪ್ ಮಾಡಿದ್ರೆ ಕಾನೂನು ಕ್ರಮ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಹನಿಟ್ರ್ಯಾಪ್ ಮಾಡಿಸಿದ ವ್ಯಕ್ತಿ ಪ್ರಭಾವಿಯಾಗಿದ್ದರೆ ಪೊಲೀಸರು ನೋಡಿಕೊಳ್ತಾರೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. 'ಇವೆಲ್ಲವೂ ರಾಜಕಾರಣ ಇದು ದುರ್ದೈವ. ಇದೊಂದು ಉದ್ಯೋಗ ಆಗಿದೆ. ಇದು ಸರಿಯಿಲ್ಲ' ಎಂದು ಹಿರಿಯ ಸಚಿವ ಆರ್ ಬಿ.ತಿಮ್ಮಾಪೂರ್ ಹೇಳಿದ್ದಾರೆ.
ತುಮಕೂರು: ಹನಿಟ್ರ್ಯಾಪ್ ಬಲೆಗೆ ಬಿದ್ದ ಮಾಜಿ ಅಧ್ಯಕ್ಷ
ಹೈಕಮಾಂಡ್ ಗಮನಕ್ಕೆ: ಇನ್ನು ಹನಿಟ್ರ್ಯಾಪ್ ವಿಚಾರ ಹೈಕಮಾಂಡ್ ಗಮನಕ್ಕೂ ಬಂದಿದೆ. ಕಳೆದ 20 ದಿನಗಳ ಹಿಂದೆಯೇ ಹೈಕಮಾಂಡ್ ನಾಯಕರ ಗಮನಕ್ಕೆ ಇದು ಹೋಗಿದ್ದು. ಪ್ರಕರಣ ಕುರಿತು ಗಂಭೀರವಾಗಿದೆ. I will address ಅಂತ ಹೈಕಮಾಂಡ್‌ನ ಪ್ರಭಾವಿ ನಾಯಕರು ಹೇಳಿದ್ದಾರೆ.
57 ವರ್ಷದ ಅಂಕಲ್ ಬಟ್ಟೆ ಬಿಚ್ಚಿಸಿ ಪಾಪರ್ ಮಾಡಿದ್ದ 21 ವರ್ಷದ ಬ್ಯೂಟಿ ಅರೆಸ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.