Karnataka Politics: ಸಿದ್ದರಾಮಯ್ಯರಿಂದ ವೋಟ್‌ ರಾಜಕಾರಣ: ಸಚಿವ ಆರಗ

Published : Apr 01, 2022, 04:09 AM ISTUpdated : Apr 01, 2022, 04:13 AM IST
Karnataka Politics: ಸಿದ್ದರಾಮಯ್ಯರಿಂದ ವೋಟ್‌ ರಾಜಕಾರಣ: ಸಚಿವ ಆರಗ

ಸಾರಾಂಶ

*    ಸಿದ್ದರಾಮಯ್ಯ ಒಬ್ಬರನ್ನು ಎತ್ತಿಕಟ್ಟುವುದು ಹಾಗೂ ಮತ್ತೊಬ್ಬರನ್ನು ತೆಗಳುವುದು ಮಾಡುತ್ತಿದ್ದಾರೆ *   ಕಾಂಗ್ರೆಸ್‌ ಪಕ್ಷ ಅಪಾಯಕಾರಿ ಸ್ಥಿತಿಗೆ ತಲುಪಿದೆ  *   ಕುಮಾರಸ್ವಾಮಿ ಯಾವ ಅರ್ಥದಲ್ಲಿ ಅವಧಿಗೂ ಮುನ್ನವೇ ಚುನಾವಣೆ ಬರುತ್ತವೆ ಎಂದಿದ್ದಾರೋ ಗೊತ್ತಿಲ್ಲ

ಕೊಪ್ಪಳ(ಏ.01): ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರನ್ನು ದೂರಲ್ಲ, ಅವರು ವೋಟ್‌ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಹೇಳಿದರು.
ಮುನಿರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಬ್ಬರನ್ನು ಎತ್ತಿಕಟ್ಟುವುದು ಹಾಗೂ ಮತ್ತೊಬ್ಬರನ್ನು ತೆಗಳುವುದು ಮಾಡುತ್ತಿದ್ದಾರೆ. ಕಾಂಗ್ರೆಸ್‌ಛ(Congress) ಪಕ್ಷ ಇದನ್ನೇ ಮಾಡಿಕೊಂಡು ಬಂದು ಅಪಾಯಕಾರಿ ಸ್ಥಿತಿಗೆ ತಲುಪಿದೆ ಎಂದರು.

ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ:

ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಅವರ ಬಗ್ಗೆ ನಾನೇನು ಹೇಳುವುದಿಲ್ಲ. ಅವರು ಯಾವ ಅರ್ಥದಲ್ಲಿ ಅವಧಿಗೂ ಮುನ್ನವೇ ಚುನಾವಣೆ ಬರುತ್ತವೆ ಎಂದಿದ್ದಾರೋ ಗೊತ್ತಿಲ್ಲ. ಅವರು ಹೀಗೆಲ್ಲಾ ಹೇಳ್ತಾನೆ ಇರುತ್ತಾರೆ ಎಂದರು.

Karnataka Politics: ಹಿಜಾಬ್ ಬಿಜೆಪಿಯವರು ಹುಟ್ಟು ಹಾಕಿದ ವಿವಾದವಲ್ಲ: ಗೃಹ ಸಚಿವ ಜ್ಞಾನೇಂದ್ರ

ಸಾಬೀತು ಮಾಡಲಿ:

ನಾನು ಸಚಿವರಾದ ಬಳಿಕ ಯಾರಾದರೂ ಪೊಲೀಸ್‌s ಇಲಾಖೆಯಲ್ಲಿ(Police Department) ವರ್ಗಾವಣೆಗೆ ಹಣ ಕೊಟ್ಟಿದ್ದಾರೆ ಎನ್ನುವುದನ್ನು ಸಾಬೀತು ಮಾಡಲಿ. ಕೊಟ್ಟವರು ಹೇಳಲಿ. ಅಂಥ ಮಾಹಿತಿ ಇದ್ದರೆ ನೇರವಾಗಿ ನನಗೆ ಹೇಳಬಹುದು. ನಾನು ಬಂದ ಮೇಲೆ ಅದಕ್ಕೆ ಅವಕಾಶವನ್ನೇ ನೀಡಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೇನೆ. ನನ್ನ ಅಕ್ಕ- ತಂಗಿಯವರಿಗೂ ಒಂದು ಪೋಸ್ಟ್‌ ಕೊಡಿಸಿಲ್ಲ ಎಂದು ಸ್ಪಷ್ಪಪಡಿಸಿದರು.

ಹಿಜಾಬ್‌ ಬಗ್ಗೆ ಬುದ್ಧಿಜೀವಿಗಳು ಯಾಕೆ ಮಾತನಾಡಲಿಲ್ಲ: ಆರಗ

ಕೊಪ್ಪಳ: ಹಲಾಲ್‌(Halal) ವಿಚಾರದಲ್ಲಿ ಸರ್ಕಾರಕ್ಕೆ ಪತ್ರ ಬರೆಯುವ, ಕರಪತ್ರ ಹಂಚುವ ಬುದ್ಧಿಜೀವಿಗಳು ಹಿಜಾಬ್‌(Hijab) ಬಗ್ಗೆ ಯಾಕೆ ಮಾತನಾಡಲಿಲ್ಲ ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.
ಮುನಿರಾಬಾದ್‌ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷ್‌ ಕಾಲದಿಂದಲೂ ಸಮವಸ್ತ್ರ ಜಾರಿಯಲ್ಲಿದೆ. ಇದರ ಕುರಿತು ಬುದ್ಧಿಜೀವಿಗಳು ಮಾತಡುವುದಿಲ್ಲ. ಆದರೆ, 60 ಬುದ್ಧಿಜೀವಿಗಳು ಹಲಾಲ್‌ ಪರವಾಗಿ ಕರಪತ್ರ ಹಂಚುತ್ತಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇವರಿಗೆ ದೇಶದ ಬಗ್ಗೆ ಯೋಚನೆ ಇಲ್ಲವೆ? ದೇಶದ ಬಗ್ಗೆ ಯೋಚನೆ ಮಾಡೂವಷ್ಟುಬುದ್ದಿವಂತರಲ್ಲವೇ? ಎಂದು ಕಿಡಿಕಾರಿದರು.

ಶಾಲೆಯೊಳಗೆ ಮತೀಯ ಭಾವನೆ ಬೆಳೆಯಬಾರದು ಎನ್ನುವ ಕನಿಷ್ಠ ತಿಳಿವಳಿಕೆಯೂ ಇಲ್ಲವೇ?, ಶಾಲೆಯೊಳಗೆ ಮತೀಯ ಭಾವನೆ ತುಂಬಿಕೊಂಡು ಹೊರ ಬರೋದಾದ್ರೆ ಈ ಬುದ್ದಿ ಜೀವಿಗಳೆಂದುಕೊಂಡವರು ಯೋಚನೆ ಮಾಡ್ಬೇಕು, ತಿಳಿ ಹೇಳಬೇಕು ಅಲ್ವಾ. ಆಗ ಯಾರೂ ಮಾತನಾಡಿಲ್ಲ ಎಂದರು.

ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಹೇಳಿಕೆ ಯಾರೂ ನೀಡಬಾರದು: ಆರಗ ಜ್ಞಾನೇಂದ್ರ

ಹಲಾಲ್‌ ಮತ್ತು ಜಟ್ಕಾ ವಿವಾದ ಧಾರ್ಮಿಕ ಭಾವನೆಗಳ ತಾಕಲಾಟ. ಇದರಲ್ಲಿ ಸರ್ಕಾರದ ಕೆಲಸವೇನೂ ಇಲ್ಲ. ದೇಶದ ಸಂವಿಧಾನ ಒಪ್ಪಲ್ಲ ಅನ್ನುವವರಿಗೆ ಪಾಠ ಮಾಡಬೇಕಿದೆ. ಜಾತ್ಯತೀತತೆ ಬಗ್ಗೆ ನಮಗೇನು ಪಾಠ ಮಾಡುತ್ತಾರೆ. ಅದು ನಮ್ಮ ರಕ್ತಗತವಾಗಿಯೇ ಬಂದಿದೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಧಾರ್ಮಿಕ ಭಾವನೆಗಳ ಕುರಿತು ಮಾತನಾಡುವುದಿಲ್ಲ ಎಂದರು.

ಪಿಎಸ್‌ಐ ನೇಮಕದಲ್ಲಿ ಅಕ್ರಮ ಆರೋಪ ಸುಳ್ಳು: ಸಚಿವ ಆರಗ

ಬೆಂಗಳೂರು:  ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌(PSI) ನೇಮಕದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕಲ್ಯಾಣ ಕರ್ನಾಟಕ(Kalyana Karnataka) ಭಾಗಕ್ಕೆ ಮೀಸಲು ಗೊಂದಲಗಳನ್ನು ಸರಿಪಡಿಸುವ ಉದ್ದೇಶದಿಂದ ನೇಮಕಾತಿ ತಡೆ ಹಿಡಿಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದರು. 

ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ(Congress) ಅರವಿಂದ ಕುಮಾರ್‌ ಅರಳಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಪಿಎಸ್‌ಐ ನೇಮಕಾತಿ(Recruitment) ಪರೀಕ್ಷೆಯಲ್ಲಿ(Competitive Exam) ಬ್ಲೂ ಟೂಥ್‌ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬೆಳಗಾವಿ, ಕಲಬುರಗಿ ಸೇರಿ ಕೆಲವು ಕಡೆ ಹೋಟೆಲ್‌ ಮೇಲೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಪರೀಕ್ಷಾ ಕೊಠಡಿಯಲ್ಲಿ ಬ್ಲೂಟೂಥ್‌ ಬಳಕೆಯಾಗಿಲ್ಲ. ಪರೀಕ್ಷಾ ಕೇಂದ್ರದ ಸುತ್ತ ಎರಡು ಹಂತದ ಬಿಗಿ ಪೊಲೀಸ್‌(Police) ಭದ್ರತೆ ಒದಗಿಸಲಾಗಿತ್ತು ಎಂದು ಹೇಳಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!