* ಕುಮಾರಸ್ವಾಮಿ ಥರ ದಿನಕ್ಕೆರಡು ಬಾರಿ ಕ್ಯಾಮೆರಾ ಮುಂದೆ ನಿಲ್ಬೇಕಾ?
* ಜನರ ಕಷ್ಟ ಅರ್ಥ ಮಾಡಿಕೊಳ್ಳುವ ಕೆಲಸ ನಾವು ಮಾಡ್ತಿದ್ದೇವೆ
* ಕಾಂಗ್ರೆಸ್‌ನವರು ಮುಚ್ಚಿಹಾಕಿದ್ದ ಬಿಚ್‌ಕಾಯಿನ್ ಕೇಸ್ ಇಂದು ಬಿಚ್ಚಿಟ್ಟಿದ್ದೇವೆ
ಕಲಬುರಗಿ(ನ.21): ಕುಮಾರಸ್ವಾಮಿ(HD Kumarawamy) ತರಹ ಬೆಂಗಳೂರಿನಲ್ಲಿ ಇದ್ದುಕೊಂಡು ದಿನಕ್ಕೆ ಎರಡು ಬಾರಿ ಕ್ಯಾಮೆರಾ ಮುಂದೆ ನಿಲ್ಲಕ್ಕೆ ಆಗುತ್ತಾ? ಬೆಂಗಳೂರಿನಲ್ಲಿ(Bengaluru) ಇದ್ದು ಮೀಟಿಂಗ್ ಮಾಡಿದ್ರೆ ಹಳ್ಳಿ ಕಡೆ ಹೋಗ್ತಿಲ್ಲ ಅಂತಾರೆ. ಹಳ್ಳಿ ಕಡೆ ಹೋದ್ರೆ ಶಂಕಾ ಊದಿಕೊಂಡು ಒಡಾಡ್ತಿದ್ದಾರೆ ಅಂತಾರೆ. ನಾವೇನ್ ಕುಮಾರಸ್ವಾಮಿ ಹತ್ರ ಕೇಳಿ ಕೆಲಸ ಮಾಡಬೇಕಾ? ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಪ್ರಶ್ನಿಸಿದ್ದಾರೆ.
ಜನ ಸ್ವರಾಜ್(JanSwaraj) ಯಾತ್ರೆಯೊಂದಿಗೆ ಕಲಬುರಗಿ ಸಂಚಾರದಲ್ಲಿರುವ ಗೃಹ ಸಚಿವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ(Karnataka) ಮಹಾಮಳೆಯಿಂದ(Rain) ಜನರು ಸಂಕಷ್ಟದಲ್ಲಿರುವಾಗ ಆಡಳಿತಾರೂಢ ಬಿಜೆಪಿ(BJP) ಶಂಖ ಊದಿಕೊಂಡು ಜನ ಸ್ವರಾಜ್ ಯಾತ್ರೆ ಅಂತ ಶುರು ಮಾಡಿಕೊಂಡಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಟಾಂಗ್ ನೀಡಿದರು.
ಪ್ರಿಯಾಂಕ್‌ಗೆ ತಿರುಗೇಟು:
ರಾಜ್ಯದಲ್ಲಿ ಬೊಮ್ಮಾಯಿ(Basavaraj Bommai) ಸರ್ಕಾರವಿದೆ, ಸಿಎಂ ನಡಾವಳಿ, ಪಕ್ಷದ ಪ್ರಗತಿಪರ ಚಿಂತನೆ ಎಲ್ಲವೂ ಜನಮನ ಸೆಳೆಯುತ್ತಿದೆ. ಹೀಗಾಗಿ ಕಾಂಗ್ರೆಸ್‌ನವರಿಗೆ(Congress) ಅಸ್ತಿತ್ವ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ. ಅವರು ಅಕ್ಷರಶಃ ನಿರುದ್ಯೋಗಿಗಳಾಗಿದ್ದಾರೆ. ಮಾತನಾಡಲು ಅವರಿಗೆ ಏನೂ ಸಿಗುತ್ತಿಲ್ಲ. ಅದಕ್ಕಾಗಿ ಬಿಟ್ ಕಾಯಿನ್(Bitcoin) ವಿಚಾರ ಇಟ್ಟುಕೊಂಡು ಗಡಿಬಿಡಿ ಮಾಡುತ್ತಿದ್ದಾರೆ ಎಂದು ಗೃಹ ಸಚಿವರು ಮಾತಿನಲ್ಲೇ ಕಾಂಗ್ರೆಸ್‌ಗೆ ತಿವಿದರು.
Bitcoin Scam| ಶ್ರೀಕಿಯನ್ನ ಅರೆಸ್ಟ್ ಮಾಡಿದ್ದು ಬಿಜೆಪಿ ಸರ್ಕಾರ: ಆರಗ ಜ್ಞಾನೇಂದ್ರ
ಕಾಂಗ್ರೆಸ್‌ನವರು 2018ರಲ್ಲಿ ಶ್ರೀಕಿಯನ್ನು(Shreeki) ಬಂಧಿಸಿದಾಗ ಪ್ರಕರಣ ಮುಚ್ಚಿ ಹಾಕಿದ್ದರು. ಇಂದು ಅದನ್ನು ನಾವು ಬಿಚ್ಚಿ ಹಾಕಿದ್ದೇವೆ. ಶ್ರೀಕಿ ಕಾಂಗ್ರೆಸ್ ನಾಯಕರ ಮಕ್ಕಳಿಗೆ ಡ್ರಗ್ಸ್(Drugs) ತರಿಸಿಕೊಡುತ್ತಿದ್ದ. ಗೋವಾದಲ್ಲಿ(Goa) ಅವರ ಮಕ್ಕಳ ಜೊತೆಗೆ ಸಿಕ್ಕಿಬಿದ್ದಿದ್ದ, ಆಗ ಪ್ರಿಯಾಂಕ್ ಖರ್ಗೆಯವರೇ(Priyank Kharge) ಐಟಿಬಿಟಿ ಮಂತ್ರಿಯಾಗಿದ್ದರು. ನನಗೆಲ್ಲಾ ಗೊತ್ತಿಗೆ ಅನ್ನೋ ತರಹ ಮಾತನಾಡುವ ಪ್ರಿಯಾಂಕ್ 2018ರಲ್ಲೇ ಯಾಕೆ ಶ್ರೀಕಿ ವಿರುದ್ಧ ತನಿಖೆ(Investigation) ಮುಂದುವರಿಸಲಿಲ್ಲ. ಆಗೇಕೆ ಪರಕರಣ ಮುಚ್ಚಿ ಹಾಕಿದರು? ಆಗ ಮುಚ್ಚಿ ಹಾಕಿದವರೇ ಇಂದು ಪ್ರಕರಣದ ಆರೋಪ ಮಾಡುತ್ತಿದ್ದಾರೆ, ಈಗ್ಯಾವ ಲಾಭದ ಚಿಂತನೆ ಇವರದ್ದಾಗಿದೆ? ಜನ ಇವರನ್ನೆಲ್ಲ ನೋಡುತ್ತಿದ್ದಾರೆ. ಚೆನ್ನಾಗಿ ಪಾಠ ಕಲಿಸುತ್ತಾರೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬಿಟ್ ಕಾಯಿನ್ ಆರೋಪ ಮಾಡಿದಾಗ ಸರಕಾರದಿಂದ ಸ್ಪಂದಿಸಬೇಕು ತಾನೆ? ನಾನಾಗ 3 ದಿನ ಹಳ್ಳಿಯಲ್ಲಿದ್ದೆ. ನಮ್ಮ ಸಚಿವರಾದ ಸುದಾಕರ್ ಸ್ಪಂದಿಸಿದ್ದಾರೆ. ಅದಕ್ಕೆ ಪ್ರಿಯಾಂಕ್ ಖರ್ಗೆ ಡಿಫೆನ್ಸ್ ಲಾಯರ್ ತರಹ ಮಾತನಾಡುತ್ತಾರೆ. ಟೀಕೆ, ಟಿಪ್ಪಣಿ ಬಿಟ್ಟು ತನಿಖೆ ಆಗೋವರೆಗೂ ಸುಮ್ಮನಿರಿ ಎಂದು ಸಚಿವರು ಪ್ರಿಯಾಂಕ್ ಖರ್ಗೆಗೆ ಕಿವಿಮಾತು ಹೇಳಿದರು.
ಹಂಸಲೇಖ ವಿರುದ್ಧ ಪ್ರಕರಣ ದಾಖಲು ವಿಚಾರ:
ಹಂಸಲೇಖ(Hamsalekha) ಓರ್ವ ಮಹಾನ್ ಕಲಾವಿದ, ಹಾಗಂತ ಅವರ ವಿರುದ್ಧ ಕಾನೂನು ಕ್ರಮ(Legal Action) ಕೈಗೊಳ್ಳುವುದಿಲ್ಲ ಅಂತೇನಿಲ್ಲ. ಪ್ರಕರಣ(Case) ದಾಖಲಾಗಿದೆ, ನೋಟಿಸ್ ನೀಡಿದ್ರೂ ವಿಚಾರಣೆಗೆ ಹಾಜರಾಗಿಲ್ಲ, ಇದೀಗ ಕಾನೂನಿನ ಅಡಿಯಲ್ಲಿದ್ದಾರೆ. ಎಲ್ಲರಂತೆ ಹಂಸಲೇಖ ಅವರ ವಿರುದ್ಧವೂ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತೆ. ಬಸವನಗುಡಿ ಪೊಲೀಸರು(Police) ತನಿಖೆ ನಡೆಸುತ್ತಿದ್ದಾರೆ, ಕಾನೂನಿನಲ್ಲಿರುವ ಅವಕಾಶಗಳಂತೆಯೇ ಅವರ ವಿರುದ್ಧ ಕ್ರಮಗಳು ಜರುಗಲಿವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ರೌಡಿಗಳು ಬಾಲ ಬಿಚ್ಚದ್ಹಂಗೆ ಮಾಡ್ಬೇಕು
ಕಲಬುರಗಿ(Kalaburagi) ನಗರ ಪೊಲಿಸಿಂಗ್ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ ಎಂದು ಬೇಸರ ಹೊರಹಾಕಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಬರುವ 2 ವಾರದೊಳಗೆ ಇಲ್ಲಿ ನಡೆಯುತ್ತಿರುವ ಕ್ಲಬ್, ಜೂಜು, ಮಟ್ಕಾ, ಜುಗಾರಿ, ಗಾಂಜಾ ಅಡ್ಡೆಗಳೆಲ್ಲ ಬಂದ್ ಆಗಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಡಿಕೆಶಿ ಧಮ್ ಸವಾಲಿಗೆ ತಿರುಗೇಟು ಕೊಟ್ಟ ಗೃಹ ಸಚಿವ ಆರಗ ಜ್ಞಾನೇಂದ್ರ
ಕಲಬುರಗಿ ಸಂಚಾರದಲ್ಲಿರುವ ಸಚಿವರು ಇಲ್ಲಿನ ಪೊಲೀಸ್ ಕಮೀಷನರ್ ಡಾ. ವೈ.ಎಸ್. ರವಿಕುಮಾರ್ ಅವರೊಂದಿಗೆ ಪೊಲೀಸಿಂಗ್ ವಿಚಾರದಲ್ಲಿ ಮಾತುಕತೆ ನಡೆಸಿದರಲ್ಲದೆ ರೌಡಿಸಂ ಮಟ್ಟಹಾಕುವುದರ ಜೊತೆಗೆ ಎಲ್ಲಾ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕಲೇಬೇಕು ಎಂದು ತಾಕೀತು ಮಾಡಿದ್ದಾರೆ.
ಕಲಬುರಗಿ ಕಾನೂನು- ಸುವ್ಯವಸ್ಥೆ ವಿಚಾರವಾಗಿ ತಮಗೇ ದೂರುಗಳು ಬಂದಿರುವ ಬಗ್ಗೆ ಮಾಹಿತಿ ನೀಡುತ್ತ ಕನ್ನಡಪ್ರಭ(Kannada Prabha) ಜೊತೆ ಮಾತನಾಡಿದ ಸಚಿವರು, ನಗರ ಬಸ್ ನಿಲ್ದಾಣದಲ್ಲೇ ರೌಡಿಗಳ ಅಟ್ಟಹಾಸದ ವಿಚಾರ ಗೊತ್ತಾಗಿದೆ. ಇದಲ್ಲದೆ ರೌಡಿಗಳ(Rowdy) ಗುಂಪಲ್ಲಿ ಪೊಲೀಸರ ಮಕ್ಕಳಿರೋದು ಕಳವಳಕಾರಿ ಸಂಗತಿ. ಇವೆಲ್ಲವೂ ತನಿಖೆಯಾಗುವಂತಹ ಸಂಗತಿಗಳೇ ಆಗಿವೆ. ಕಲಬುರಗಿಯ ಜೂಜು, ಜುಗಾರಿಗಳಿಗೆ ಆಂಧ್ರ, ತೆಲಂಗಾಣ ಜನ ಬಂದು ಹೋಗುತ್ತಿರೋದು ಇನ್ನೂ ಆಘಾತಕಾರಿ ವಿಚಾರ. ಇದರಿಂದ ರಾಜ್ಯದ ಗಡಿಯಲ್ಲಿ ಕಾನೂನು ಸುವ್ಯವಸ್ಥೆ ಹಗೆಡುತ್ತದೆ. ಕಲಬುರಗಿ ನಗರದಲ್ಲಿನ ಇಂತಹ ಅಪಸವ್ಯಗಳಿಗೆ ಮಟ್ಟಹಾಕಬೇಕಾದವರು ಪೊಲೀಸರು. ಹೀಗಾಗಿ ಹಿರಿಯ ಅಧಿಕಾರಿಗೇ ತಾಕೀತು ಮಾಡಿದ್ದೇನೆಂದರು.