ಚುನಾವಣಾ ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್‌ಗೆ ಆಘಾತ, 30 ನಾಯಕರಿಗೆ ಪಕ್ಷದಿಂದ ಗೇಟ್‌ಪಾಸ್!

By Suvarna NewsFirst Published Dec 7, 2022, 10:04 PM IST
Highlights

ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣೆ ಫಲಿತಾಂಶ ಡಿಸೆಂಬರ್ 8ಕ್ಕೆ ಹೊರಬೀಳಲಿದೆ. ಇದಕ್ಕೆ ಒಂದು ಇರುವಾಗಲೇ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಯಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ 30 ಕಾಂಗ್ರೆಸ್ ನಾಯಕರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ.

ಶಿಮ್ಲಾ(ಡಿ.07): ದೆಹಲಿ ಮಹಾ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿದೆ. ಇದೀಗ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಡಿಸೆಂಬರ್ 8ಕ್ಕೆ ಹೊರಬೀಳಲಿದೆ. ಸಮೀಕ್ಷೆಗಳ ಪ್ರಕಾರ ಗುಜರಾತ್‌ನಲ್ಲಿ ಕಾಂಗ್ರೆಸ್ ಮಕಾಡೆ ಮಲಗಲಿದೆ. ಇತ್ತ ಹಿಮಾಚಲ ಪ್ರದೇಶದಲ್ಲಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದಿದೆ. ಈ ಹಿನ್ನಡೆಗಳಿಂದ ಮೈಕೊಡವಿ ನಿಲ್ಲಲು ಯತ್ನಿಸುತ್ತಿರುವ ಕಾಂಗ್ರೆಸ್‌ಗೆ ಇದೀಗ ಫಲಿತಾಂಶ್ಕಕೂ ಮೊದಲೇ ಮತ್ತೊಂದು ಆಘಾತ ಎದುರಾಗಿದೆ. ಹಿಮಾಚಲ ಪ್ರದೇಶದ ಚೋಪಾಲ್ ಬ್ಲಾಕ್ ಕಮಿಟಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 30 ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ಹೊರದಬ್ಬಲಾಗಿದೆ.

ಹಿಮಾಚಲ ಪ್ರದೇಶದ ಬ್ಲಾಕ್ ಕಮಿಟಿ ಹಾಗೂ ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಮಹತ್ವದ ಸಭೆ ನಡೆಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 30 ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಹೀಗೆ ಪಕ್ಷದಿಂದ ಹೊರಬಿದ್ದ ನಾಯಕರ ಪೈಕಿ ಉಪಾಧ್ಯಕ್ಷ ಧೀರೆನ್ ಸಿಗ್ ಚೌಹ್ಹಾನ್ ಹಾಗೂ ಪ್ರಮುಖ ನಾಯಕ ಸಂತೋಶ್ ದೋಗ್ರಾ ಕೂಡ ಸೇರಿಕೊಂಡಿದ್ದಾರೆ. 

ದೆಹಲಿ ಪಾಲಿಕೆ ಗೆದ್ದ ಆಪ್‌‌ಗೆ ಕೌಂಟರ್, ರಾಜಧಾನಿಗೆ ನಮ್ಮವರೇ ಮೇಯರ್ ಎಂದ ಬಿಜೆಪಿ

ಹಿಮಾಚಲದಲ್ಲಿ ಗೊಂದಲ ತಂದ ಸಮೀಕ್ಷೆ
ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ಸೀಟುಗಳಿದ್ದು ಬಹುಮತಕ್ಕೆ 35 ಸ್ಥಾನ ಬೇಕು. ಇಲ್ಲಿ ಯಾವ ಪಕ್ಷವೂ 2ನೇ ಬಾರಿ ಸತತವಾಗಿ ಗೆದ್ದಿಲ್ಲ. ಹೀಗಾಗಿ ಈ ಸಲ ಗೆದ್ದು ಇತಿಹಾಸ ಸೃಷ್ಟಿಸುವ ಧಾವಂತದಲ್ಲಿದ್ದ ಬಿಜೆಪಿಗೆ ಸಮೀಕ್ಷೆಗಳು ಕೊಂಚ ಆತಂಕ ಸೃಷ್ಟಿಸಿವೆ.  8 ಸಮೀಕ್ಷೆಗಳ ಪೈಕಿ 4 ಸಮೀಕ್ಷೆ ಮಾತ್ರ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ನುಡಿದಿವೆ. ಉಳಿದ ಸಮೀಕ್ಷೆಗಳು ಕಾಂಗ್ರೆಸ್‌ ಗೆಲ್ಲಬಹುದು ಅಥವಾ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅತಂತ್ರ ವಿಧಾನಸಭೆ ಸೃಷ್ಟಿಆಗಬಹುದು ಎಂಬ ಭವಿಷ್ಯ ಹೇಳಿವೆ. ಇಲ್ಲಿ ಆಪ್‌ ಸಾಧನೆ ಬಹುತೇಕ ಶೂನ್ಯ. ಹೀಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡಕ್ಕೂ ಸಮೀಕ್ಷೆಗಳು ಆತಂಕ ಹಾಗೂ ಕುತೂಹಲ ಉಂಟು ತಂದೊಡ್ಡಿವೆ.

ಕೇಂದ್ರದ ಸಹಕಾರ, ಮೋದಿ ಆಶೀರ್ವಾದ ಬೇಕು, ಪಾಲಿಕೆ ಗೆಲುವಿನ ಬಳಿಕ ಕೇಜ್ರಿವಾಲ್‌ ಮಾತು!

 ಹಿಮಾಚಲ: ಪಕ್ಷೇತರರಿಗೆ ಬಿಜೆಪಿ, ಕಾಂಗ್ರೆಸ್‌ ಗಾಳ
ಡಿ.8ರಂದು ಪ್ರಕಟವಾಗುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಬಹುಮತಕ್ಕೆ ಅಗತ್ಯವಾದ 35 ಸ್ಥಾನ ಗೆಲ್ಲುವ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಪಕ್ಷೇತರ ಅಭ್ಯರ್ಥಿಗಳ ಕಡೆ ಎಲ್ಲರ ಚಿತ್ತ ತಿರುಗಿದೆ. 68 ಸ್ಥಾನ ಹೊಂದಿರುವ ಹಿಮಾಚಲದಲ್ಲಿ ಬಿಜೆಪಿ 24-41, ಕಾಂಗ್ರೆಸ್‌ 20-40 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ. ಬಹುಮತಕ್ಕೆ 35 ಸ್ಥಾನದ ಅಗತ್ಯವಿದೆ. ಒಂದು ವೇಳೆ ಬಹುಮತ ಬರದೇ ಹೋದರೇ ಪಕ್ಷೇತರರೇ ಹೊಸ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಬಂಡಾಯವಾಗಿ ಸ್ಪರ್ಧಿಸಿದವರು, ಪಕ್ಷೇತರರಾಗಿ ನಿಂತು ಗೆಲ್ಲುವ ಸಾಧ್ಯತೆ ಇರುವ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕಲು ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ ಯತ್ನ ಆರಂಭಿಸಿವೆ.

click me!