Himachal Election Result 2022: ಹಿಮಾಚಲ ಪ್ರದೇಶದ 9 ಕ್ಷೇತ್ರಗಳಲ್ಲಿ 1 ಸಾವಿರಕ್ಕಿಂತ ಕಡಿಮೆ ಅಂತರದ ಮುನ್ನಡೆ!

By Santosh Naik  |  First Published Dec 8, 2022, 1:13 PM IST

ಹಿಮಾಚಲ ಪ್ರದೇಶ ಚುನಾವಣೆ 2022 ಫಲಿತಾಂಶ ರೋಚಕ ಘಟ್ಟದಲ್ಲಿದೆ. ಸಾಕಷ್ಟು ಕ್ಷೇತ್ರಗಳಲ್ಲಿ ನಿಕಟ ಸ್ಪರ್ಧೆ ನಡೆಯುತ್ತಿದೆ. ಬಹುಶಃ ಅಂತಿಮ ಫಲಿತಾಂಶ ಬರುವ ವೇಳೆಗೆ ಅಂದಾಜು 9 ಕ್ಷೇತ್ರಗಳಲ್ಲಿ ಫಲಿತಾಂಶ ಯಾವ ಪಕ್ಷದ ಕಡೆಯಾದರೂ ವಾಲಬಹುದು ಎನ್ನುವ ಸೂಚನೆ ಸಿಕ್ಕಿದೆ.


ಶಿಮ್ಲಾ (ಡಿ.8): ಹಿಮಾಚಲ ಪ್ರದೇಶದ ಎಲ್ಲಾ 68 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚಿನ ಹಿಮಾಚಲ ಪ್ರದೇಶದ ಚುನಾವಣೆಯ ಟ್ರೆಂಡ್‌ಗಳ ಪ್ರಕಾರ, ಬಿಜೆಪಿ 25 ಹಾಗೂ ಕಾಂಗ್ರೆಸ್‌ 40 ಕ್ಷೇತ್ರಗಳನ್ನು ಮುನ್ನಡೆ ಕಂಡಿದೆ.  3 ಸ್ಥಾನಗಳಲ್ಲಿ ಪಕ್ಷೇತರರು ಮುನ್ನಡೆಯಲಿದ್ದಾರೆ. ಇದರ ನಡುವೆ ಬಿಲಾಸ್‌ಪುರ, ರಾಮ್‌ಪುರ ಹಾಗೂ ಇನ್ನೂ 7 ಕ್ಷೇತ್ರಗಳಲ್ಲಿ ಮುನ್ನಡೆಯ ಅಂತರ ಕೇವಲ 1 ಸಾವಿರಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ ಲಕ್ಷಣಗಳ ಪ್ರಕಾರ, ಇಡೀ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯುವುದು ಬಹುತೇಕ ಖಚಿತವಾಗಿದೆ. ಹಾಗೇನಾದರೂ ಕಾಂಗ್ರೆಸ್‌ ಬಹುಮತ ಪಡೆಯಲು ವಿಫಲರಾದಲ್ಲಿ ಸ್ವತಂತ್ರರು ಸರ್ಕಾರ ರಚನೆಗೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಬಹುದು. ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ನಿಕಟ ಸ್ಪರ್ಧೆ ನಡೆಯುತ್ತಿವೆ. ಈ ರಾಜ್ಯದ ಅಂತಿಮ ಫಲಿತಾಂಶ ಬರುವ ಹೊತ್ತಿಗೆ, ಗೆಲುವು ಯಾವ ಪಕ್ಷದ ಕಡೆ ಬೇಕಾದರೂ ವಾಲುವಂಥ ಸ್ಥಿತಿ ಇದೆ. ಇಬ್ಬರು ಅಭ್ಯರ್ಥಿಗಳ ನಡುವಿನ ಅಂತರವು 1,000 ಮತಗಳಿಗಿಂತ ಕಡಿಮೆ ಇರುವ ಹಿಮಾಚಲ ಅಸೆಂಬ್ಲಿ ಸ್ಥಾನಗಳಲ್ಲಿ ಕೆಲವು ನಿಕಟ ಸ್ಪರ್ಧೆಗಳಿವೆ. ಆ ಕ್ಷೇತ್ರಗಳ ವಿವರ ಅಲ್ಲಿದೆ.

Gujarat, HP Election Results 2022 Live: ರಿವಾಬಾ ಜಡೇಜಾಗೆ 20 ಸಾವಿರ ಮತಗಳ ಮುನ್ನಡೆ 

Tap to resize

Latest Videos

ಭಟ್ಟಿಯತ್: ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕುಲದೀಪ್‌ ಸಿಂಗ್‌ ಪಠಾನಿಯಾ, ಬಿಜೆಪಿಯ ಬ್ರಿಕ್ರಮ್‌ ಸಿಂಗ್‌ ಅವರಗಿಂತ ಮುನ್ನಡೆಯಲ್ಲಿದ್ದು, ಈ ಮುನ್ನಡೆ ಕೇವಲ 351 ಮತಗಳಾಗಿದೆ.
ಭಾರುಂಜ್‌: ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುರೇಶ್‌ ಕುಮಾರ್‌ ಕೇವಲ 449 ಮತಗಳ ಮುನ್ನಡೆಯಲ್ಲಿದ್ದಾರೆ. ಅವರಿಗೆ ಬಿಜೆಪಿಯ ಅನಿಲ್‌ ಧಿಮಾನ್‌ರಿಂದ ಪೈಪೋಟಿ ಎದುರಾಗಿದೆ
ಬಿಲಾಸ್‌ಪುರ: ಈ ಕ್ಷೇತ್ರದಲ್ಲಿ ಬಿಜೆಪಿಯ ತ್ರಿಲೋಕ್‌ ಜಾಮ್‌ವಾಲ್‌, ಕಾಂಗ್ರೆಸ್‌ನ ಬುಂಬರ್‌ ಠಾಕೂರ್‌ ಅವರಿಗಿಂತ ಮುನ್ನಡೆಯಲಿದ್ದಾರೆ. ಮುನ್ನಡೆಯ ಅಂತರ ಕೇವಲ 634 ಮತ
ಇಂದೋರಾ: ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಲೇಂದರ್‌ ರಾಜನ್‌, ಬಿಜೆಪಿ ರೀತಾ ದೇವಿಗಿಂತ ಮುನ್ನಡೆಯಲ್ಲಿದ್ದಾರೆ. ಈ ಮುನ್ನಡೆಯ ಅಂತರ 809 ಮತ
ಜಂದೂತಾ: ಈ ಕ್ಷೇತ್ರದಲ್ಲಿ ಬಿಜೆಪಿ ಜೀತ್‌ ರಾಮ್‌ ಕತ್ವಾಲ್‌ ಮುನ್ನಡೆ ಕಂಡುಕೊಂಡಿದ್ದಾರ. ಕಾಂಗ್ರೆಸ್‌ನಿಂದ ವಿವೇಕ್‌ ಕುಮಾರ್‌ ಸ್ಪರ್ಧೆಯಲ್ಲಿದ್ದು, ಮುನ್ನಡೆಯ ಅಂತರ ಕೇವಲ 766 ಮತಗಳಾಗಿವೆ.
ರಾಮ್‌ಪುರ: ಅತ್ಯಂತ ನಿಕಟ ಪೈಪೋಟಿಯಲ್ಲಿರುವ ಕ್ಷೇತ್ರವಾಗಿದೆ. ಬಿಜೆಪಿಯ ಕೌಲ್‌ ಸಿಂಗ್‌ ಸದ್ಯ ಮುನ್ನಡೆಯಲ್ಲಿದ್ದಾರೆ, ಕಾಂಗ್ರೆಸ್‌ನ ನಂದಾ ಲಾಲ್‌ ಕೇವಲ 86 ಮತಗಳ ಹಿನ್ನಡೆಯಲ್ಲಿದ್ದಾರೆ.
ಶಿಲ್ಲೈ: ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹರ್ಷವರ್ಧನ್‌ ಚೌಹಾಣ್‌ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ಬಲ್‌ದೇವ್‌ ಸಿಂಗ್‌ 411 ಮತಗಳ ಹಿನ್ನಡೆಯಲ್ಲಿದ್ದಾರೆ.
ಶ್ರೀ ನೈನಾ ದೇವೀಜಿ: ಈ ಕ್ಷೇತ್ರದಲ್ಲಿ ಬಿಜೆಪಿಯ ರಣಧೀರ್‌ ಶರ್ಮ ಕೇವಲ 145 ಮತಗಳ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್‌ನ ರಾಮ್‌ಲಾಲ್‌ ಠಾಕೂರ್‌ ಅವರಿಂದ ಪೈಪೋಟಿ ಎದುರಿಸುತ್ತಿದ್ದಾರೆ.
ಸುಜನ್‌ಪುರ: ಇನ್ನು ಸುಜನ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಜೀಂದರ್‌ ಸಿಂಗ್ 498 ಮತಗಳ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ರಣಜಿತ್‌ ಸಿಂಗ್‌ ಅವರಿಂದ ಪೈಪೋಟಿ ಎದುರಿಸುತ್ತಿದ್ದಾರೆ.

ಇದರೊಂದಿಗೆ ಧರ್ಮಪುರ, ಶ್ರೀ ರೇಣುಕಾಜಿ, ಸರ್ಕಾಘಟ್‌, ಲಾಹುಲ್‌ & ಸ್ಪಿತಿ, ನಾಹನ್‌, ಜಸ್ವಾನ್‌ ಪರಗ್‌ಪುರ್‌, ದಾರಂಗ್ ಹಾಗೂ ಬ್ಲಾಹ್‌ ಕ್ಷೇತ್ರಗಳಲ್ಲಿ ಅಂತರ 2 ಸಾವಿರಕ್ಕಂತ ಕಡಿಮೆ ಇದೆ ಎನ್ನುವುದು ಚುನಾವಣಾ ಅಯೋಗದ ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ.

click me!