Assembly election: ಗುಜರಾತ್ ಬಿಜೆಪಿ ಮಾಡೆಲ್ ರಾಜ್ಯ ಕಾಂಗ್ರೆಸ್‌ನಲ್ಲಿ ಅಳವಡಿಕೆ: ಸತೀಶ್ ಜಾರಕಿಹೊಳಿ

By Sathish Kumar KH  |  First Published Dec 8, 2022, 1:04 PM IST

ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ಕೊಡುವ ಗುಜರಾತ್ ಮಾಡೆಲ್ ಕರ್ನಾಟಕಕ್ಕೆ ಮಾದರಿಯಾಗಲಿ.
ಅತಿ ಹೆಚ್ಚು ವಯಸ್ಸಿನ ಅಥವಾ ಹಿರಿಯ ನಾಯಕರಿಗೆ ಟಿಕೇಟ್ ನೀಡುವ ಬಗ್ಗೆ ಮರುಚಿಂತನೆ ಆಗಬೇಕಿದೆ.
ಎಂಟು ಬಾರಿ ಟಿಕೇಟ್ ಕೊಟ್ಟವರಿಗೆ ಪುನಃ 9ನೇ ಬಾರಿಯೂ ಟಿಕೆಟ್ ಕೊಡುವುದು ಬೇಡ. 


ಬೆಂಗಳೂರು (ಡಿ.8) : ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಸೇರಿದಂತೆ 38 ಹಿರಿಯ ನಾಯಕರು ಮತ್ತು ಹಾಲಿ ಶಾಸಕರಾಗಿದ್ದವರಿಗೆ ಟಿಕೆಟ್‌ ನೀಡಿರಲಿಲ್ಲ. ಈ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿಯೂ ಅಳವಡಿಕೆ ಮಾಡಿಕೊಂಡರೆ ಅನುಕೂಲ ಆಗಲಿದೆ. 8 ಬಾರಿ ಗೆದ್ದವರಿಗೆ ೯ನೇ ಬಾರಿ ಟಿಕೆಟ್‌ ಕೊಡುವುದಕ್ಕಿಂತ ಅವರನ್ನು ವಿಧಾನ ಪರಿಷತ್‌ಗೆ ಕಳಿಸುವುದು ಪಕ್ಷಕ್ಕೆ ಹೊಸಬರನ್ನು ಕರೆತರಲು ಒಳಿತಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ಕೊಡುವ ಗುಜರಾತ್ ಮಾಡೆಲ್ ಕರ್ನಾಟಕಕ್ಕೆ ಮಾದರಿಯಾಗಲಿ. ಅತಿ ಹೆಚ್ಚು ವಯಸ್ಸಿನ ಅಥವಾ ಹಿರಿಯ ನಾಯಕರಿಗೆ ಟಿಕೇಟ್ ನೀಡುವ ಬಗ್ಗೆ ಮರುಚಿಂತನೆ ಆಗಬೇಕಿದೆ. ಹಲವು ಬಾರಿ ಗೆದ್ದಿದ್ದಾರೆ ಅನ್ನೋ ಕಾರಣಕ್ಕಾಗಿ ಟಿಕೇಟ್ ಬೇಡ. ಹಿರಿಯರಿಗೆ ಪರಿಷತ್ ನಲ್ಲಿ ಅವಕಾಶ ನೀಡಲಿ. ಎಂಟು ಬಾರಿ ಟಿಕೇಟ್ ಕೊಟ್ಟಿದ್ದೇವೆ, 9ನೇ ಬಾರಿಯೂ ಟಿಕೇಟ್ ಕೊಡಲು ಮುಂದಾಗಿದ್ದೇವೆ. ಇದು ಬದಲಾಗಬೇಕು, ಹೊಸಬರಿಗೆ ಅವಕಾಶ ನೀಡಬೇಕು. ಇದನ್ನು ಪಕ್ಷದ ವೇದಿಕೆಯಲ್ಲೂ ಹೇಳಿದ್ದೇವೆ. ಸೈದ್ದಾಂತಿಕವಾಗಿಯೂ ಪಕ್ಷ ಕೆಲ ಬದಲಾವಣೆ ಮಾಡಿಕೊಳ್ಳಬೇಕಿದೆ. ನಾವಿನ್ನೂ ಹಳೆ ಮಾದರಿ ಅನುಸರಿಸುತ್ತಿದ್ದು, ಅದು ಬದಲಾಗಬೇಕಿದೆ ಎಂದು ಪರೋಕ್ಷವಾಗಿ ಬಿಜೆಪಿಯ ಗುಜರಾತ್ ಮಾಡೆಲ್ ಅನ್ನು ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಅನ್ವಯ ಮಾಡಿಕೊಳ್ಳುವ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ.

Tap to resize

Latest Videos

https://kannada.asianetnews.com/live-tv

ಕಾಂಗ್ರೆಸ್ಸಿನ ಜಾತ್ಯಾತೀತ ಮತಕ್ಕೆ ಎಎಪಿ ಕನ್ನ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಹಿಮಾಚಲ ಪ್ರದೇಶದಲ್ಲಿ ನಾವು ಗೆದ್ದಿದ್ದೇವೆ. ಗುಜರಾತ್ ನಲ್ಲಿ ಹಿನ್ನಡೆ ಆಗಿದೆ. ಗುಜರಾತ್ ನಲ್ಲಿ ಎಎಪಿಗೆ ಮತಗಳ ಪ್ರಮಾಣ ಹೆಚ್ಚು ಸಿಕ್ಕಿದ್ದರಿಂದ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಎಎಪಿ ಅವರು ಜಾತ್ಯಾತೀತ ಓಟ್ ಪಡೆಯುತ್ತಾರೆ. ಇದರಿಂದ ಕಾಂಗ್ರೆಸ್ ಗೆ ತೊಂದರೆ ಆಗುತ್ತಿದೆ. ಆದರೆ, ಗುಜರಾತ್ ಚುನಾವಣೆಯ ಫಲಿತಾಂಶ ನಮ್ಮ ಕರ್ನಾಟಕ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಸೈದ್ಧಾಂತಿಕವಾಗಿ ಕೆಲವು ಬದಲಾವಣೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿಸಿದರು.

ಇಂದು ಗುಜರಾತ್‌, ಹಿಮಾಚಲ ಫಲಿತಾಂಶ: ಸತತ 7ನೇ ಬಾರಿ ಗುಜರಾತ್‌ ಗೆಲ್ಲುವತ್ತ ಬಿಜೆಪಿ ಚಿತ್ತ

ಮುಸ್ಲಿಮರನ್ನು ತೀವ್ರ ಓಲೈಕೆ ಮಾಡಲ್ಲ: ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನಾವು ಮುಸ್ಲಿಂ ಸಮುದಾಯವನ್ನು ತೀರಾ ಓಲೈಕೆ ಮಾಡಲ್ಲ. ಇನ್ನು ಎಸ್ ಸಿ, ಎಸ್ ಟಿ ಸಮುದಾಯಗಳನ್ನು ಸಹ ಸಮಾನವಾಗಿ ಕಾಣುತ್ತೇವೆ. ನಮ್ಮಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡುವಾಗ ಅಭ್ಯರ್ಥಿಗಳ ಆಯ್ಕೆಯಲ್ಲೂ ಬದಲಾವಣೆ ಆಗಬೇಕಿದೆ. ಹಲವು ಬಾರಿ ಗೆದ್ದವರಿಗೆ ಟಿಕೆಟ್ ಕೊಡುವ ಬಗ್ಗೆ ಮರು ಚಿಂತನೆ ಆಗಬೇಕಿದೆ. ಹಿರಿಯರನ್ನು ಪರಿಷತ್ ಸದಸ್ಯರಾಗಿ ಮಾಡಬೇಕು. ಹೊಸಬರಿಗೆ ಅವಕಾಶ ನೀಡಬೇಕು. ಇನ್ನು ರಾಜ್ಯದಲ್ಲಿನ ಸಂಸ್ಕೃತಿ ಮತ್ತು ರಾಜಕೀಯ ಬೇರೆ ಇದೆ. ಗುಜರಾತ್‌ಗೆ ಹೋಲಿಕೆ ಮಾಡಿದಲ್ಲಿ ಆಚಾರ ವಿಚಾರಗಳು ಸಹ ಬೆರೆ ತರಹ ಇದೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಚುನಾವಣೆಯೇ ಬೇರೆ ಬೇರೆಯಾಗಿದೆ. ಗುಜರಾತ್‌ಗೂ ಫಲಿತಾಂಶ ಕರ್ನಾಟಕದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ.

ಗುಗರಾತ್ ಗೆಲುವು ಕರ್ನಾಟಕದ ಮೇಲೆ ಪರಿಣಾಮ ಬೀರಲ್ಲ: ಗುಜರಾತಿನ ಪರಿಸ್ಥಿತಿಗೂ ಕರ್ನಾಟಕದ ಸ್ಥಿತಿಗೂ ವ್ಯತ್ಯಾಸವಿದೆ. ಗುಜರಾತ್ ನಲ್ಲಿ ವ್ಯಕ್ತಿ ನಿಷ್ಟೆ ರಾಜಕೀಯ ಹೆಚ್ಚು ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಜಾತಿ ಆಧಾರಿತ ರಾಜಕಾರಣ ಗುಜರಾತ್ ಗಿಂತ ಭಿನ್ನವಾಗಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್ ನ ಓಟು ಕೀಳುವುದಿಲ್ಲ ಎನ್ನುವ ವಿಶ್ವಾಸವಿದೆ. ಆಮ್ ಆದ್ಮಿ ಪಕ್ಷಕ್ಕೆ ರಾಜ್ಯದಲ್ಲಿ ಇನ್ನೂ ಸೂಕ್ತ ನೆಲೆ ಸೃಷ್ಟಿ ಆಗಿಲ್ಲ. ಕಾಂಗ್ರೆಸ್ ಓಟು ಕೀಳುವುದಕ್ಕೆ ಆಮ್ ಆದ್ಮಿ ಇನ್ನೂ ಕರ್ನಾಟಕದಲ್ಲಿ ನಾಯಕತ್ವ ಇಲ್ಲ. ಕರಾವಳಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಇನ್ನೂ ಸಮರ್ಥ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಗುಜರಾತ್ ಗಿಂತ ಹೆಚ್ಚು ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ದೇಶದಲ್ಲಿಯೇ ಸದ್ದು ಮಾಡಿದ ಶೇ.೪೦ ಪರ್ಸೆಂಟ್ ಕಮಿಷನ್ ಮತ್ತು ಭ್ರಷ್ಟಾಚಾರ ಆರೋಪ ಬಿಜೆಪಿಗೆ ಹಿನ್ನಡೆ ಆಗುವ ವಿಶ್ವಾಸವಿದೆ. ಪ್ರಖರ ಹಿಂದುತ್ವಕ್ಕೆ ಇಡೀ ರಾಜ್ಯಾದ್ಯಂತ ಮನ್ನಣೆ ಸಿಕ್ಕಿಲ್ಲ. ಇದು ಬಿಜೆಪಿಗೆ ನೆಗೆಟಿವ್ ಆಗತ್ತದೆ. ಗುಜರಾತ್ ನಲ್ಲಿ ಕಾಂಗ್ರೆಸ್ ನಾಯಕರ ನಡುವೆ ಸಾಮೂಹಿಕ ನಾಯಕತ್ವದ ಕೊರತೆ ಇತ್ತು. ಆದರೆ ಕರ್ನಾಟಕದಲ್ಲಿ ಎಲ್ಲ ಸಮುದಾಯಗಳನ್ನು ಸೆಳೆಯಲು ಸಾಮೂಹಿಕ ನಾಯಕತ್ವ ಅನುಕೂಲ ಮಾಡಿಕೊಡುವ ವಿಶ್ವಾಸವಿದೆ ಎಂದರು.

click me!