ಹೈಕಮಾಂಡ್ ನೀನು ಸಿಎಂ ಆಗು ಅಂದರೇ ನಾನು ಸಿದ್ಧನಿದ್ದೇನೆ: ಸಚಿವ ಪ್ರಿಯಾಂಕ್ ಖರ್ಗೆ

By Kannadaprabha News  |  First Published Nov 4, 2023, 8:03 AM IST

ಹೈಕಮಾಂಡ್ ಯಾರು ಸಿಎಂ ಆಗಬೇಕು, ಮುಂದುವರೆಯಬೇಕು ಎಂಬುದನ್ನ ನಿರ್ಧರಿಸುತ್ತೆ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಅಂದರೂ ನಾನು ಸಿದ್ಧನಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. 
 


ಮೈಸೂರು (ನ.04): ಹೈಕಮಾಂಡ್ ಯಾರು ಸಿಎಂ ಆಗಬೇಕು, ಮುಂದುವರೆಯಬೇಕು ಎಂಬುದನ್ನ ನಿರ್ಧರಿಸುತ್ತೆ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಅಂದರೂ ನಾನು ಸಿದ್ಧನಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು, ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕಂಬ ವಿಚಾರಕ್ಕೆ ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಅವರವರ ವೈಯಕ್ತಿಕ ಹೇಳಿಕೆ. ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ಸಿಎಂ ಅಧಿಕಾರ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೆಹಲಿಯಲ್ಲಿ ನಾಲ್ಕು ಜನ ಕುಳಿತು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ. ಸಿಎಂ ಅವರದ್ದು ವೈಯಕ್ತಿಕ ಅಭಿಪ್ರಾಯ. ಜಿಲ್ಲಾ ಪಂಚಾಯತ್ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರವಿದೆ. ಇದರಲ್ಲಿ ತಪ್ಪು ಏನು ಇಲ್ಲ. ಆದರೆ, ಅವರ ಹೇಳಿಕೆ, ಕಲ್ಲಿನ ಕೆತ್ತಿದ ಶಾಸನವಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದರು.

Tap to resize

Latest Videos

 

ರಾಜ್ಯ ಸರ್ಕಾರವೇ ಮೊದಲ ಗ್ರಾಹಕ: ಬಿಗ್‌ಟೆಕ್‌ಶೋನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?

‘ಮೈಸೂರು ಬ್ಲೂ’ ಟಾಪ್ ಫಂಡ್ ರೆಡಿ- ಸ್ಟಾರ್ಟ್ ಅಪ್ ಗಳ ಆಯ್ಕೆ: ಬೆಂಗಳೂರು ಟೆಕ್ ಸಮ್ಮಿಟ್ ಪೂರ್ವಭಾವಿಯಾಗಿ 'ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್' ಮೈಸೂರು ಟೆಕ್ಕ್ಲಸ್ಟರ್ ನಲ್ಲಿ ಆಯೋಜಿಸಿದ್ದ 'ಬ್ಲೂ' ಕಾರ್ಯಕ್ರಮ ಯಶಸ್ವಿಯಾಗಿದ್ದು, ಟಾಪ್ಫಂಡ್ರೆಡಿ- ಸ್ಟಾರ್ಟ್ ಅಪ್ ಗಳ ಹೆಸರನ್ನು ಶುಕ್ರವಾರ ಘೋಷಿಸಲಾಯಿತು. ಮೈಸೂರಿನ ಇನ್ಫೋಸಿಸ್ ಸಭಾಂಗಣದಲ್ಲಿ ನಡೆದ ಬಿಗ್ ಟೆಕ್ ಶೋ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಟಾಪ್ 3 ಫಂಡ್ ರೆಡಿ ಸ್ಟಾರ್ಟ್ ಅಪ್ ಗಳ ಹೆಸರನ್ನು ಘೋಷಿಸಲಾಯಿತು.

ಬಿಯಾಂಡ್ ಬೆಂಗಳೂರು ಉಪಕ್ರಮ ಮೈಸೂರು ಬ್ಲೂ 2- ಇನ್ನೋವೇಶನ್ ಮೀಟ್ಸ್ ಇನ್ವೆಸ್ಟ್ ಮೆಂಟ್ ಕಾರ್ಯಕ್ರಮದಲ್ಲಿ 15 ಸ್ಥಳೀಯ ಸ್ಟಾರ್ಟ್ ಅಪ್ ಗಳು ಹಾಗೂ ವಿದ್ಯಾರ್ಥಿಗಳ 3 ತಂಡಗಳು ಪಾಲ್ಗೊಂಡಿದ್ದವು. ಬ್ರೀಜಿ ಇನ್ಸುರೆಟೆಕ್ ಪ್ರೈ.ಲಿ, ಇನ್ದಿ ಲೂಪ್ಲ್ಯಾಬ್ಸ್ಪ್ರೈ.ಲಿ., ಬ್ರೂಮ್ ಸ್ಟಿಕ್ ಕ್ಲೀನ್ ಟೆಕ್ ಎಲ್ಎಲ್ ಪಿ- ಟಾಪ್ ಫಂಡಬಲ್ ಸ್ಟಾರ್ಟ್ ಅಪ್ ಗಳಾಗಿ ಘೋಷಿಸಲಾಗಿದೆ.

'ಬ್ಲೂ'ನಲ್ಲಿ ಪಾಲ್ಗೊಂಡ ಸ್ಟಾರ್ಟ್ ಅಪ್ ಗಳು: ಬಿಯಾಂಡ್ ಬ್ರೈನ್ ಬಿಸಿನೆಸ್ ಸೊಲ್ಯೂಷನ್ಸ್ ಪ್ರೈ.ಲಿ, ಭಾರತ್ ಮಿಲ್ಸ್, ಬ್ರೀಜಿ ಇನ್ಸುರೆಟೆಕ್ ಪ್ರೈ.ಲಿ, ಬ್ರೂಮ್ ಸ್ಟಿಕ್ ಕ್ಲೀನ್ ಟೆಕ್ ಎಲ್ಎಲ್ ಪಿ, ಕಂಟೆಂಟ್ಡೈನಾಮಿಕ್ಸ್, ಎಲಿಂಟ್ ಲ್ಯಾಬ್ಸ್ ಪ್ರೈ.ಲಿ, ಗ್ರಿಟ್ಬೈಟ್, ಎಚ್.ಜಿ.ಎಸ್.ಓ.ಎಲ್.ಟಿ.ಇ.ಸಿ ಪ್ರೈ.ಲಿ, ಇನ್ದಿ ಲೂಪ್ಲ್ಯಾಬ್ಸ್ಪ್ರೈ.ಲಿ., ಜಾಗೃತ್ ಟೆಕ್ ಪ್ರೈ.ಲಿ, ಎನ್.ಬಿ.ಎನ್.ಬಿ ಟೆಕ್ ಪ್ರೈ.ಲಿ., ಪ್ರೋಯವ ಇನ್ನೋವೇಷನ್ಸ್, ಸಪಿಯಂಚುರಿ, ಸ್ಪೋರ್ಟಿವಿ, ವ್ಯೂನ್ ಟೆಕ್ನಾಲಜಿಸಿ ಪ್ರೈ.ಲಿ. ತಮ್ಮ ವಿನೂತನ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಬಂಡವಾಳವನ್ನು ಹೂಡುವಂತೆ ಹೂಡಿಕೆದಾರರ ಬಳಿ ಸ್ಟಾರ್ಟ್ ಅಪ್ ಗಳು ಮಾಡಿದ್ದ ಮನವಿಗೆ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ದೊರೆತಿದೆ.

ಚುನಾವಣೆ ಉದ್ದೇಶಕ್ಕೆ ಪಠ್ಯದಿಂದ ‘ಇಂಡಿಯಾ’ ಪದಕ್ಕೆ ಕೊಕ್‌: ಸಚಿವ ಮಧು ಬಂಗಾರಪ್ಪ

ಉದಯೋನ್ಮುಖ ಕ್ಲಸ್ಟರ್ ಗಳಲ್ಲಿ ಆವಿಷ್ಕಾರವನ್ನು ಉತ್ತೇಜಿಸುವ ದೃಷ್ಟಿಯಿಂದ ಸಂಭಾವ್ಯ ಹೂಡಿಕೆದಾರರೊಂದಿಗೆ ಸ್ಟಾರ್ಟ್ ಅಪ್ಮುಖ್ಯಸ್ಥರ ಭೇಟಿಗೆ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡುವ (ವಿಸಿಗಳು) ಹಾಗೂ ದೇಶದ ಏಂಜಲ್ಹೂಡಿಕೆದಾರರ ಎದುರು ಆರಂಭಿಕ ಹಂತದ ಸ್ಟಾರ್ಟ್ ಅಪ್ ಗಳು ತಮ್ಮ ವಿನೂತನ ಆಲೋಚನೆಗಳನ್ನು ಮುಂದಿಟ್ಟವು. ತಂಡದ ಅನುಭವ, ಮಾರುಕಟ್ಟೆ ಸಾಮರ್ಥ್ಯ, ಉತ್ಪನ್ನ ನಾವೀನ್ಯತೆ, ಸಾಮಾಜಿಕ ಪರಿಣಾಮ ಮತ್ತು ಅವುಗಳ ಯುಎಪಿ ಅಥವಾ ಎಕ್ಸ್- ಫ್ಯಾಕ್ಟರ್ಒಳಗೊಂಡ ಮಾನದಂಡಗಳ ಆಧಾರದ ಮೇಲೆ ಕೆಡಿಇಎಂ, ಸ್ಟಾರ್ಟ್ ಅಪ್ ಗಳ ಮೌಲ್ಯಮಾಪನ ಮಾಡಿದೆ.

click me!