ಪಂಚಮಸಾಲಿ ಸಮಾವೇಶ ಬಳಿಕ ಯತ್ನಾಳ್ ದಿಢೀರ್ ದಿಲ್ಲಿಗೆ, ಅಸಲಿ ಕಾರಣ ಬಹಿರಂಗ

By Suvarna NewsFirst Published Feb 23, 2021, 3:11 PM IST
Highlights

ಯತ್ನಾಳ್ ಅವರಿಗೆ ಯಾವುದೇ ಹೈಕಮಾಂಡ್ ಬುಲಾವ್ ನೀಡಿಲ್ಲ. ಬದಲಾಗಿ ಬೇರೊಂದು ಕೆಲಸಕ್ಕೆ ಹೋಗಿದ್ದಾರೆ. ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಪಂಚಮಸಾಲಿ ಸಮಾವೇಶ ಮುಗಿಯುತ್ತಿದ್ದಂತಯೆಏ ದಿಲ್ಲಿಗೆ ಹಾರಿದ್ಯಾಕೆ..? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ನವದೆಹಲಿ/ಬೆಂಗಳೂರು, (ಫೆ.23): ವಿಜಯಪುರ ಬಿಜೆಪಿ ಶಾಸಕ ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ್ ರಾಜ್ಯ ರಾಜಕೀಯದಲ್ಲಿ ಚಿರಪರಿಚಿತರು. ಕೇವಲ ರಾಜ್ಯವೊಂದೇ ಅಲ್ಲ, ಅವರ ಹೇಳಿಕೆಗಳಿಂದ ದೆಹಲಿ ಬಿಜೆಪಿ ವಲಯದಲ್ಲೂ ಬಸನಗೌಡ ಪಾಟೀಲ್ ಎಂಬ ನಾಮಧೇಯ ಆಗಾಗ ಓಡಾಡುತ್ತಲೇ ಇರುತ್ತದೆ. 

ಅದರಲ್ಲೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸ್ಥಾನಮಾನ ನೀಡಬೇಕು ಎಂದು ಆರಂಭವಾದ ಹೋರಾಟ ಬೆಂಗಳೂರಲ್ಲಿ ನಡೆಸಿದ ಕೋಲಾಹಲ ಒಂದೆರಡಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ದೊರಕಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬಸನಗೌಡ ಪಾಟೀಲ್ ಬಹಿರಂಗ ಸಭೆಯಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪಂಚಮಸಾಲಿ ಹೋರಾಟದಲ್ಲಿ ಕಾಣಿಸಿಕೊಂಡ ಯತ್ನಾಳ್‌ಗೆ ಶಾಕ್; ಹೈಕಮಾಂಡ್‌ನಿಂದ ಬುಲಾವ್ 

ಇದರ ಮಧ್ಯೆ ಯತ್ನಾಳ್ ದಿಢೀರ್ ದೆಹಲಿಗೆ ಹೋಗಿದ್ದಾರೆ. ಇತ್ತ ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಕ್ಲಾಸ್ ತೆಗೆದುಕೊಳ್ಳು ಯತ್ನಾಳ್ ಅವರನ್ನ ದೆಹಲಿಗೆ ಕರೆಯಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಆದ್ರೆ, ಯತ್ನಾಳ್ ಅವರಿಗೆ ಯಾವುದೇ ಹೈಕಮಾಂಡ್ ಬುಲಾವ್ ನೀಡಿಲ್ಲ. ಬದಲಾಗಿ ಬೇರೊಂದು ಕೆಲಸಕ್ಕೆ ಹೋಗಿದ್ದಾರೆ. ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಪಂಚಮಸಾಲಿ ಸಮಾವೇಶ ಮುಗಿಯುತ್ತಿದ್ದಂತಯೆಏ ದಿಲ್ಲಿಗೆ ಹಾರಿದ್ಯಾಕೆ..? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಯತ್ನಾಳ್ ದೆಹಲಿ ಭೇಟಿ ಕಾರಣ ಬಹಿರಂಗ
ರವಿವಾರ ರಾತ್ರಿ ನಾನು ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಶಿಶು ನಿ ಕೇತನ ಶಾಲೆಯ ಸಿ. ಬಿ. ಎಸ್. ಇ.(C B S E) ನೊಂದಣಿ ಕಾರ್ಯ ನಿಮಿತ್ತ ತುರ್ತು ಕಾರ್ಯ ನಿಮಿತ್ತ ನವ ದೆಹಲಿಗೆ ಬಂದಿದ್ದೆನೆ. ನನಗೆ ಪಕ್ಷದ ಹೈಕಮಾಂಡ್ ಯಾವುದೇ ರೀತಿಯ ತುರ್ತು ಬುಲಾವ್ ಆಗಲಿ ಅಥವಾ ಸಮಯ ಕೊಟ್ಟು ನನ್ನ ವಿಚಾರಣೆಗೆ ಕರೆದಿಲ್ಲ. ನಾನು ಯಾವುದೇ ನಾಯಕರ ಭೇಟಿಗೆ ಸಮಯ ಕೇಳಲಿಲ್ಲ.

 ಮಾಧ್ಯಮಗಳಲ್ಲಿ ತಂದೆ ಮತ್ತು ಮಗ ಸುಳ್ಳು ಸುದ್ದಿ ಮಾಡಿಸಿ ಬಲ್ಲ ಮೂಲಗಳಿಂದ ಎಂದು ಹೇಳಿಸಿ ಮತ್ತು ಬರೆಸಿ ರಾಜ್ಯದ ಜನರಲ್ಲಿ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಆತಂಕ ಉಂಟು ಮಾಡಿ ಯತ್ನಾಳನಿಗೆ ಮುಖಭಂಗ, ಬೀಗ್ ಶಾಕ್ 'ಎಚ್ಚರಿಕೆ ಮತ್ತು ಬಾಯಿಗೆ ಬೀಗ ಅಂತ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ.. ನಾನು ಯಾರನ್ನೂ ಭೇಟಿಯಾಗಿಲ್ಲ ಮತ್ತು ಯಾರ ಸಮಯ ಕೇಳಲಿಲ್ಲ.

ನನ್ನ ಹೋರಾಟ ನನ್ನ ಆದರ್ಶ ಗುರು ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಹಾಗೂ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಸಂಕಲ್ಪದ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಮುಕ್ತ ಭಾರತದ ಭಾಗವಾಗಿದೆ ಹೊರತು ವಯಕ್ತಿಕ ವ್ಯಕ್ತಿ ವಿರುದ್ಧ ಅಲ್ಲ. ನನ್ನ ಮಾತ್ರು ಪಕ್ಷದ ವಿರುದ್ಧ ಅಲ್ಲವೆ ಅಲ್ಲ.  ನಿನ್ನೆ ಕರ್ನಾಟಕ ರಾಜ್ಯದ ಇಬ್ಬರು ಸಚಿವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಮತ್ತು ನಮ್ಮ ಪೂಜ್ಯರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ ಅದಕ್ಕೆ ಸೂಕ್ತ ಉತ್ತರ ಬಂದ ಮೇಲೆ ಕೊಡುತ್ತೆನೆ.

 ಹಿಂದೂ ಸಮಾಜದಲ್ಲಿಯ ಸಾಮಾಜಿಕ ನ್ಯಾಯಕ್ಕಾಗಿ ನನ್ನ ಹೋರಾಟ ನಿಲ್ಲುವುದಿಲ್ಲ ಅಂಜುವುದಿಲ್ಲ, ಬಗ್ಗುವದು ಇಲ್ಲ ಮತ್ತು ಪಲಾಯನ ಇಲ್ಲವೆ ಇಲ್ಲ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಎಲ್ಲರಿಗೂ ನಮಸ್ಕಾರಗಳು 🚩🙏 ರವಿವಾರ ರಾತ್ರಿ ನಾನು ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ ಭಾರತ ರತ್ನ ಅಟಲ್ ಬಿಹಾರಿ...

Posted by B R Patil Yatnal on Monday, February 22, 2021
click me!