
ಬೆಂಗಳೂರು, (ಅ.29): ನವೆಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ-ಬಾಗಲಕೋಟೆ, ಡಾ. ಅಶ್ವತ್ಥ್ ನಾರಾಯಣ-ರಾಮನಗರ, ಲಕ್ಷ್ಮಣ ಸವದಿ- ರಾಯಚೂರಿನಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.
ಎಂಎಲ್‌ಎ ಸೋತ್ರು ಹೊಸಕೋಟೆಯಲ್ಲಿ ಕಮಲ ಅರಳಿಸಿದ ಎಂಟಿಬಿ ನಾಗರಾಜ್
ಕೆ.ಎಸ್.ಈಶರಪ್ಪ-ಶಿವಮೊಗ್ಗ, ಆರ್.ಅಶೋಕ್-ಬೆಂಗಳೂರು ಗ್ರಾಮಾಂತರ, ಜಗದೀಶ್ ಶೆಟ್ಟರ್- ಧಾರವಾಡ, ಬಿ.ಶ್ರೀರಾಮುಲು-ಚಿತ್ರದುರ್ಗ, ಎಸ್.ಸುರೇಶ್ ಕುಮಾರ್- ಚಾಮರಾಜನಗರ, ವಿ. ಸೋಮಣ್ಣ-ಕೊಡಗು, ಟಿ.ರವಿ-ಚಿಕ್ಕಮಗಳೂರು, ಬಸವರಾಜ್ ಬೊಮ್ಮಾಯಿ-ಹಾವೇರಿ, ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ ಮತ್ತು ತುಮಕೂರಿನಲ್ಲಿ ಜೆ.ಸಿ. ಮಾಧುಸ್ವಾಮಿ ಅವರಿಗೆ ದ್ವಜಾರೋಹಣದ ಜವಾಬ್ದಾರಿ ನೀಡಲಾಗಿದೆ.
ಉಳಿದಂತೆ ಸಿ.ಸಿ. ಪಾಟೀಲ-ಗದಗ, ಎಚ್.ನಾಗೇಶ- ಕೋಲಾರ, ಪ್ರಭು ಚೌವ್ಹಾಣ್- ಬೀದರ್, ಶಶಿಕಲಾ ಜೊಲ್ಲೆ- ವಿಜಯಪುರ, ಆನಂದ ಸಿಂಗ್- ಬಳ್ಳಾರಿ, ಬೈರತಿ ಬಸವರಾಜ್- ದಾವಣಗೆರೆ, ಎಸ್.ಟಿ. ಸೋಮಶೇಖರ್- ಮೈಸೂರು, ಬಿ.ಸಿ. ಪಾಟೀಲ್-ಕೊಪ್ಪಳ, ಡಾ.ಕೆ. ಸುಧಾಕರ್- ಚಿಕ್ಕಬಳ್ಳಾಪುರ, ಕೆ.ಸಿ. ನಾರಾಯಣಗೌಡ-ಮಂಡ್ಯ, ಶಿವರಾಮ್ ಹೆಬ್ಬಾರ್-ಉತ್ತರ ಕನ್ನಡ, ರಮೇಶ್ ಜಾರಕಿಹೊಳಿ-ಬೆಳಗಾವಿ, ಕೆ. ಗೋಪಾಲಯ್ಯ-ಹಾಸನ, ಶ್ರೀಮಂತ ಪಾಟೀಲ್- ಕಲಬುರಗಿ, ಉಡುಪಿ ಹಾಗೂ ಯಾದಗಿರಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.