ಶಕ್ತಿ ಯೋಜನೆಯಿಂದ ನಷ್ಟವಾದ ಆಟೋ ಚಾಲಕರಿಗೆ ನೆರವು: ಸಚಿವ ರಾಮಲಿಂಗಾರೆಡ್ಡಿ

By Kannadaprabha News  |  First Published Jul 6, 2023, 11:29 AM IST

ಮಹಿಳೆಯರು ಉಚಿತವಾಗಿ ಬಸ್‌ ಪ್ರಯಾಣಿಸುವ ‘ಶಕ್ತಿ’ಯೋಜನೆ ಆರಂಭಿಕ ಹಂತದಲ್ಲಿದೆ. ಈ ಯೋಜನೆಯಿಂದ ಆಟೋ ಚಾಲಕರ ದುಡಿಮೆ ತೊಂದರೆಯಾಗಿದ್ದರೆ ಪರಿಶೀಲಿಸಿ ಯಾವ ರೀತಿ ನೆರವು ನೀಡಬಹುದು ಎಂಬ ಬಗ್ಗೆ ಸ್ವಲ್ಪ ಕಾಲದ ನಂತರ ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು. 


ವಿಧಾನ ಪರಿಷತ್‌ (ಜು.06): ಮಹಿಳೆಯರು ಉಚಿತವಾಗಿ ಬಸ್‌ ಪ್ರಯಾಣಿಸುವ ‘ಶಕ್ತಿ’ಯೋಜನೆ ಆರಂಭಿಕ ಹಂತದಲ್ಲಿದೆ. ಈ ಯೋಜನೆಯಿಂದ ಆಟೋ ಚಾಲಕರ ದುಡಿಮೆ ತೊಂದರೆಯಾಗಿದ್ದರೆ ಪರಿಶೀಲಿಸಿ ಯಾವ ರೀತಿ ನೆರವು ನೀಡಬಹುದು ಎಂಬ ಬಗ್ಗೆ ಸ್ವಲ್ಪ ಕಾಲದ ನಂತರ ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು. 

ಜೆಡಿಎಸ್‌ ಸದಸ್ಯ ಗೋವಿಂದರಾಜು ಅವರ ಪರವಾಗಿ ಎಸ್‌.ಎಲ್‌. ಬೋಜೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಕ್ತಿ ಯೋಜನೆಯಿಂದ ತಮ್ಮ ದುಡಿಮೆಗೆ ತೊಂದರೆಯಾಗಿದೆ ಎಂದು ತಮಗೆ ಆಟೋ ಚಾಲಕರಾಗಲಿ, ಆಟೋ ರಿಕ್ಷಾ ಸಂಘಟನೆಗಳಾಗಿ ದೂರು ನೀಡಿಲ್ಲ. ಆದರೆ ಮಾಧ್ಯಮಗಳಲ್ಲಿ ತಮಗೆ ಅನಾನುಕೂಲವಾಗಿದೆ ಎಂದು ಆಟೋ ಚಾಲಕರು ಹೇಳಿರುವುದು ತಮ್ಮ ಗಮನಕ್ಕೆ ಬಂದಿದೆ.  ಈ ಯೋಜನೆ ಈಗ ತಾನೆ ಆರಂಭವಾಗಿದೆ. ಇನ್ನೂ ಒಂದು ತಿಂಗಳು ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಲಾಗುವುದು ಎಂದರು. ರಾಜ್ಯದಲ್ಲಿ 4,69,619 ಆಟೋರಿಕ್ಷಾಗಳು ನೋಂದಣಿಯಾಗಿವೆ. 

Tap to resize

Latest Videos

ಯಾವುದೇ ಕಾರಣಕ್ಕೂ ನಾನು ನೋಟಿಸ್‌ಗೆ ಉತ್ತರ ಕೊಡಲ್ಲ: ರೇಣುಕಾಚಾರ್ಯ ಮತ್ತೆ ಕಿಡಿ

ಆಟೋರಿಕ್ಷಾಗಳನ್ನೇ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಕುಟುಂಬಗಳು ಸಹ ಅಷ್ಟೆ ಸಂಖ್ಯೆಯಲ್ಲಿರುತ್ತದೆ ಎಂದು ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದರು. ಇದಕ್ಕೂ ಮುನ್ನ ಮಾತನಾಡಿದ ಬೋಜೇಗೌಡ ಅವರು, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಒಳ್ಳೆಯದಾಗಿದೆ, ಆದರೆ ಯೋಜನೆಯಿಂದ ಮಹಿಳೆಯರು ಆಟೋದಲ್ಲಿ ಓಡಾಡುವುದು ಕಡಿಮೆಯಾಗಿದೆ. ಆಟೋ ರಿಕ್ಷಗಳ ದುಡಿಮೆ ಕಡಿಮೆಯಾಗಿದೆ. ಆದ್ದರಿಂದ ಸಚಿವರು ಆಟೋ ಚಾಲಕರು ಅಥವಾ ಆಟೋ ರಿಕ್ಷಾ ಸಂಘಟನೆಗಳು ದೂರು ಸಲ್ಲಿಸುವವರೆಗೆ ಕಾಯದೆ, ಸ್ವಯಂ ಪ್ರೇರಣೆಯಿಂದ ಅವರ ನೆರವಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಹೆದ್ದಾರಿ ಕಾಮಗಾರಿ ಲೋಪ ಸರಿಪಡಿಸಲು ಕ್ರಮ: ಬೆಂಗಳೂರು-ಮೈಸೂರು ದಶ ಪಥ ರಸ್ತೆ ಯೋಜನೆಯ ಸಿವಿಲ್‌ ಕಾಮಗಾರಿಯಲ್ಲಿನ ಲೋಪ ದೋಷಗಳು, ಸುರಕ್ಷತಾ ಕ್ರಮಗಳ ಬಗ್ಗೆ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಿಹರಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನೆ ನಿರ್ಮಾಣ, ಮೂಲಭೂತ ಸೌಕರ್ಯಗಳು, ಸುರಕ್ಷತಾ ಕ್ರಮಗಳ ಕುರಿತು ಪ್ರಾಧಿಕಾರ ವರದಿ ನೀಡಿದೆ. ಹೀಗಿದ್ದರೂ ಸದಸ್ಯರು ಉಲ್ಲೇಖಿಸಿರುವ ದೋಷಗಳ ಬಗ್ಗೆ ಸಂಬಂಧಪಟ್ಟವರ ಜೊತೆ ಸಭೆ ನಡೆಸಲಾಗುವುದು. ಸದರಿ ರಸ್ತೆಯಲ್ಲಿ ಈ ವರ್ಷದ ಜನವರಿ 23ರಿಂದ ಜೂನ್‌ 23ರವರೆಗೆ 512 ಅಪಘಾತವಾಗಿದ್ದು, 123 ಜನರು ಮೃತರಾಗಿದ್ದಾರೆ. 585 ಜನರು ಗಾಯಗೊಂಡಿದ್ದಾರೆ. ಅಪಘಾತಗಳಿಗೆ ಲೇನ್‌ ಶಿಸ್ತಿನ ಕೊರತೆ ಹಾಗೂ ಮಿತಿ ಮೀರಿದ ವೇಗದ ಚಾಲನೆ ಕಾರಣವಾಗಿರುತ್ತದೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ 3.4ರ ತೀವ್ರತೆಯ ಭೂಕಂಪ: ಬೆಚ್ಚಿಬಿದ್ದ ಜನತೆ

ಅಪಘಾತ ತಡೆಗಟ್ಟಲು ನಿಧಾನವಾಗಿ ಚಲಿಸುವ ವಾಹನಗಳು (2 ಮತ್ತು 3 ಚಕ್ರದ ವಾಹನಗಳು) ಮತ್ತು ಹೆಚ್ಚಿನ ವೇಗದ ವಾಹನಗಳ ನಡುವಿನ ಸಂಘರ್ಷ ತಪ್ಪಿಸಲು ಮುಖ್ಯ ರಸ್ತೆಯಲ್ಲಿ 2 ಮತ್ತು 3 ಚಕ್ರಗಳ ವಾಹನಗಳ ನಿಷೇಧಿಸುವ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪರಿಶೀಲನೆಯಲ್ಲಿದೆ. ಇದಲ್ಲದೇ ರಸ್ತೆ ಬಳಕೆದಾರರಿಗೆ ಅರಿವು ಮೂಡಿಸಲು ಮತ್ತು ಅಪಘಾತ ತಡೆಗಟ್ಟಲು ಅಲ್ಪಾವಧಿ ಕ್ರಮಗಳಾಗಿ ಸಂಚಾರ ನಿಯಮಗಳ ಬಗ್ಗೆ ತಿಳಿಸಲು ಸಂಕೇತಗಳು ಮತ್ತು ಗುರುತುಗಳ ಸಂಖ್ಯೆ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ ಎಂದು ಸಚಿವರು ವಿವರಿಸಿದರು.

click me!