ರಾಜಕೀಯದ ತೆವಲುಗಳಿಗೆ ಅಮಾಯಕರ ಜೀವದ ಜೊತೆ ಚೆಲ್ಲಾಟ: ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

By Govindaraj S  |  First Published Jul 6, 2023, 10:25 AM IST

ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ ನೌಕರ ವೆಂಟಿಲೇಟರ್‌ಲ್ಲಿದ್ದಾರೆ. ಈ ಸರಕಾರ ಬಂದು 50 ದಿನ ಆಗಿಲ್ಲ. ಆಗಲೇ ಇಷ್ಟು ದ್ವೇಷದ ರಾಜಕಾರಣ ಶುರುವಾಗಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. 


ಮೈಸೂರು (ಜು.06): ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ ನೌಕರ ವೆಂಟಿಲೇಟರ್‌ಲ್ಲಿದ್ದಾರೆ. ಈ ಸರಕಾರ ಬಂದು 50 ದಿನ ಆಗಿಲ್ಲ. ಆಗಲೇ ಇಷ್ಟು ದ್ವೇಷದ ರಾಜಕಾರಣ ಶುರುವಾಗಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ವರ್ಗಾವಣೆ ವಿರೋಧಿಸಿ ಕೆಎಸ್‌ಆರ್‌ಟಿಸಿ ನೌಕರ ಜಗದೀಶ್‌ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಸಂಬಂಧ ಪಟ್ಟಂತೆ ಮೈಸೂರಿನಲ್ಲಿ ಮಾತನಾಡಿದ ಅವರು, ದುಡ್ಡು ತೆಗೆದು ಕೊಂಡು ವರ್ಗಾವಣೆ ಅವರ ಛಾಳಿ. ಅದು ಅವರ ಹಣೆಬರಹ. ಆದರೆ ರಾಜಕೀಯ ಕಾರಣಕ್ಕಾಗಿ ಈ ರೀತಿ ಕಿರುಕುಳ ನಾವು ಸಹಿಸಲ್ಲ. ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಕುಟುಂಬ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು ಎಂದರು.

ಜಗದೀಶ್ ಪತ್ನಿ ಪಂಚಾಯಿತಿ ಸದಸ್ಯೆ. ಹೀಗಾಗಿ ಕಿರುಕುಳ ಕೊಡಲಾಗಿದೆ. ಸಚಿವರು, ಈ ಸರಕಾರ  ಏನೂ ಶಾಶ್ವತನಾ? ಅಧಿಕಾರದ ದರ್ಪ ಈ ಮಟ್ಟಕ್ಕೆ ಹೋಗಬಾರದು. ಕೃಷಿ ಸಚಿವರ ಛೇಲಾ ಅವನೂ ರೌಡಿ ಕೂಡ. ಅವನಿಂದ ಜಗದೀಶ್  ಕುಟುಂಬದ ಮೇಲೆ ಒತ್ತಡವಿದೆ. ಜಗದೀಶ್ ಪತ್ನಿಗೆ ಕಾಂಗ್ರೆಸ್‌ಗೆ ಬೆಂಬಲಿಸಲು ಒತ್ತಡ ಹೇರಲಾಗಿದೆ. ಡೆತ್ ನೋಟ್‌ನಲ್ಲಿ ನಾಗಮಂಗಲದ ಶಾಸಕರ ಒತ್ತಡವೇ ಕಾರಣ ಅಂತಾ ಬರೆದಿದ್ದಾನೆ. ಈ ಸರಕಾರಕ್ಕೆ ಮಾನ ಮರ್ಯಾದೆ ಇದ್ದರೆ ಇಂತಹ ಮಂತ್ರಿಯನ್ನು ಸರಕಾರದಿಂದ ಕಿತ್ತು ಹಾಕಲಿ. ಜಗದೀಶ್ ಇನ್ನೂ ಸತ್ತಿಲ್ಲ ಅದಕ್ಕೆ ಎಫ್ಐಆರ್ ಹಾಕಿಲ್ಲ ಅಂತಾರೆ ಪೊಲೀಸರು. ಹಣದ ದಂಧೆ ಆಯ್ತು. ಈಗ ರಾಜಕೀಯದ ತೆವಲುಗಳಿಗೆ ಜೀವದ ಜೊತೆ ಚೆಲ್ಲಾಟ ಶುರು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Tap to resize

Latest Videos

ಕೆಎಸ್‌ಆರ್‌ಟಿಸಿ ಬಸ್ ಚಾಲಕ ವಿಷ ಸೇವನೆ ಪ್ರಕರಣ: ಜಗದೀಶ್ ಸ್ಥಿತಿ ಚಿಂತಾಜನಕ, ಸಾರಿಗೆ ಸಿಬ್ಬಂದಿಗಳ ಆಕ್ರೋಶ

ಉದ್ಧಟತನದ ಕೃಷಿ ಮಂತ್ರಿಯನ್ನು ತಕ್ಷಣ ಸರಕಾರದಿಂದ ವಜಾ ಮಾಡಿ. ಸರಿಯಾದ ತನಿಖೆ ಮಾಡಿಸಿ. ಈ ಬಗ್ಗೆ ಇವತ್ತು ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ. ಇದಕ್ಕಿಂತಾ ಮುಖ್ಯ ವಿಚಾರ ಇನ್ನೇನಿದೆ ಹೇಳಿ? ಮಂತ್ರಿಗಳನ್ನು ಮೊದಲು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಿ. ವಿರೋಧ ಪಕ್ಷದ ಶಾಸಕರ ಮನೆ ಹಾಳಾಗಲಿ. ಕೆಲವು ಕಾಂಗ್ರೆಸ್ ಶಾಸಕರು ಮನೆ ಕೂಡ ಇಲ್ಲಿ ಹಾಳಾಗುತ್ತಿದೆ.  ದುಡ್ಡು ಕೊಡದೆ ಇದ್ದರೆ ಕಾಂಗ್ರೆಸ್ ಶಾಸಕರ ವರ್ಗಾವಣೆ ಕೂಡ ಆಗುತ್ತಿಲ್ಲ. ಇದುವರೆಗೂ ಆಗಿರುವ ಬಹುತೇಕ ವರ್ಗಾವಣೆಗಳಲ್ಲೂ ಹಣದ ವ್ಯವಹಾರ ನಡೆದಿದೆ. ಎಲ್ಲಾ ವರ್ಗಾವಣೆ ಗೂ ಹಣದ ರೇಟ್  ಫಿಕ್ಸ್ ಆಗಿದೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ ಇಬ್ಬರಿಗೂ ವಿರೋಧ ಪಕ್ಷದ ಸ್ಥಾನದಲ್ಲಿ ಜನ ಕೂರಿಸಿದ್ದಾರೆ. ಬಿಜೆಪಿಯಲ್ಲೂ ವಿರೋಧ ಪಕ್ಷದ ನಾಯಕರು ಆಗಲು ಹಲವರು ಸಮರ್ಥರಿದ್ದಾರೆ. ಯಾರಾದರೂ ಒಬ್ಬರು ಆಗುತ್ತಾರೆ. ನಮ್ಮ ಕುಟುಂಬದ ಆಸ್ತಿ ಬಗ್ಗೆ ಈ ಸರಕಾರ ಇಂಟರ್ ನ್ಯಾಷನಲ್ ತನಿಖಾ ಸಂಸ್ಥೆಯಿಂದ ಬೇಕಾದರೆ ತನಿಖೆ ಮಾಡಿಸಲಿ. ಪೆನ್ ಡ್ರೈವ್ ಒಳಗಿನ ಸತ್ಯ ಹೊರ ಬಂದರೆ ಮಂತ್ರಿ ರಾಜೀನಾಮೆ ಕೊಡಬೇಕಾಗುತ್ತದೆ. ಇನ್ನೂ ಯಾರು ಯಾರು ನನ್ನ ಬಗ್ಗೆ ಏನೇನೂ ಮಾತಾಡುತ್ತಾರೋ ಮಾತಾಡಲಿ. ಆ ನಂತರ ಪೆನ್ ಡ್ರೈವ್ ಸತ್ಯ ಹೊರಗೆ ಬಿಡುತ್ತೇನೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಟಾರ್ಗೆಟ್ ಆಗುತ್ತಿದೆ: ಇನ್ನು ಈ ವಿಚಾರವಾಗಿ ಮಾಜಿ ಶಾಸಕ ಸುರೇಶ್ ಗೌಡ ಆಸ್ಪತ್ರೆ ಬಳಿ  ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಶಾಸಕರಿಂದ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಟಾರ್ಗೆಟ್ ಆಗುತ್ತಿದೆ. ನಾಗಮಂಗಲದಲ್ಲಿ ಒಂದು ಸರ್ಕಾರವೇ ಇದೆ. ಎರಡು ತಿಂಗಳಿಂದ ಕಿರುಕುಳ ಆಗುತ್ತಿದೆ. ಜಗದೀಶ್ ಈ ಬಗ್ಗೆ ಆತನ ತಂದೆ ತಾಯಿ ಹಾಗೂ ನನ್ನ ಬಳಿಯೂ ಹೇಳಿಕೊಂಡಿದ್ದ. ಚುನಾವಣೆ ಆದ ಬಳಿಕ ಕ್ಷೇತ್ರದಲ್ಲಿ ಮೂರ್ನಾಲ್ಕು ಆತ್ಮಹತ್ಯೆಗಳಾಗಿದೆ. ಕ್ಷೇತ್ರದಲ್ಲಿ ದ್ವೇಷ, ಸ್ವಜನಪಕ್ಷಪಾತ ಶುರು ಆಗಿದೆ. ಒಂದು ರೀತಿ ಟ್ರಾನ್ಸ್ಫರ್ ಥ್ರೇಟ್ ಆಗಿದೆ ಎಂದರು.

ಪಿಎಸ್‌ಐ ಅಕ್ರಮ: ಕಳಂಕಿತರ ಬಿಟ್ಟು ಇತರರಿಗೆ ಮರು ಪರೀಕ್ಷೆ ಇಲ್ಲ

ಜಿಲ್ಲೆಯಲ್ಲಿ ಎಲ್ಲರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಯಾರು ಅವರ ವಿರುದ್ಧ ಕೆಲಸ ಮಾಡುತ್ತಾರೆ ಅವರ ಮೇಲೆ ಟಾರ್ಗೆಟ್ ಮಾಡಿದ್ದಾರೆ. ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಟಾರ್ಗೆಟ್ ಆಗಿದೆ. ಕ್ಷೇತ್ರದಲ್ಲಿ ದುರಂಕಾರ ಎನ್ನುವುದು ಮೇಲೆ ಹೋಗಿಬಿಟ್ಟಿದೆ. ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ತೊಂದರೆ ಆಗಿದೆ. ನಾಗಮಂಗಲ ಕ್ಷೇತ್ರದಲ್ಲಿ ಒಂದು ಸರ್ಕಾರವೇ ರಚನೆ ಆಗಿದೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.

click me!