ಬಿಗಿ ಪಟ್ಟು ಹಿಡಿದು ಕುಳಿತ ರೇವಣ್ಣ : ಪೇಚಿಗೆ ಸಿಲುಕಿದ ಅಧಿಕಾರಿಗಳು

Published : Nov 11, 2018, 01:56 PM IST
ಬಿಗಿ ಪಟ್ಟು ಹಿಡಿದು ಕುಳಿತ ರೇವಣ್ಣ : ಪೇಚಿಗೆ ಸಿಲುಕಿದ ಅಧಿಕಾರಿಗಳು

ಸಾರಾಂಶ

ಲೋಕೋಪಯೋಗಿ ಸಚಿವ ರೇವಣ್ಣ ಅವರು ಇದೀಗ ತಮ್ಮ ನಿರ್ಧಾರದಂತೆ ನಡೆದುಕೊಳ್ಳಲು ಬಿಗಿ ಪಟ್ಟು ಹಿಡಿದಿದ್ದು ಇದೀಗ ರೇವಣ್ಣ ಅವರ ಪಟ್ಟಿನಿಂದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ. 

ಬೆಂಗಳೂರು :  ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದ್ದುಮ  ಶುಭ ದಿನದಂದೇ ಅಧಿವೇಶನ ಆರಂಭಿಸಲು ಎಚ್.ಡಿ ರೇವಣ್ಣ ಪಟ್ಟು ಹಿಡಿದಿದ್ದಾರೆ. 

ಈಗಾಗಲೇ ಬೆಳಗಾವಿ ಅಧಿವೇಶನಕ್ಕೆ ನಿಗದಿಯಾಗಿದ್ದ ದಿನಾಂಕ ಬದಲಿಸುವಂತೆ ಅಧಿಕಾರಿಗಳಿಗೆ ಎಚ್.ಡಿ ರೇವಣ್ಣ ಸೂಚನೆ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಡಿಸೆಂಬರ್ 3 ರಿಂದ 10 ದಿನ ಅಧಿವೇಶನ ನಡೆಸಲು ನಿರ್ದೇಶನ ನೀಡಿದ್ದಾರೆ. 

ಆದರೆ ಡಿಸೆಂಬರ್ 3 ರ ಬದಲು 5 ರಂದು ಅಧಿವೇಶನ ಪ್ರಾರಂಭಿಸುವಂತೆ ಸೂಚನೆ ಎಚ್.ಡಿ ರೇವಣ್ಣ ಸೂಚನೆ ನೀಡಿದ್ದಾರೆ.  ಡಿಸೆಂಬರ್ 3 ರಂದು ದಿನ ಚೆನ್ನಾಗಿಲ್ಲ. ಹೀಗಾಗಿ 5 ರಂದೇ ಬೆಳಗಾವಿ ಅಧಿವೇಶನ ಆರಂಭವಾಗಬೇಕು ಎಂದು ಹೇಳಿದ್ದಾರೆ. 

ರೇವಣ್ಣ ಮುಹೂರ್ತ ಕೇಳಿ ವಿಧಾನಸಭೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದು, ಈಗಾಗಲೇ ಡಿ. 3 ರಂದು ದಿನಾಂಕ ನಿಗದಿಯಾಗಿದೆ. ಈಗ ದಿನಾಂಕ ಬದಲಿಸಲು ಹೋದರೆ 10 ದಿನ ಕಲಾಪ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. 

ಡಿ. 5 ರಿಂದ ಆರಂಭವಾದರೆ ಎರಡು ದಿನ ಕಡಿಮೆ ಆಗುತ್ತದೆ.  ಅಲ್ಲದೇ ಮೊದಲ ದಿನ ಸಂತಾಪ ಸೂಚನೆಗೆ ಮೀಸಲಾಗುತ್ತದೆ. ಶುಕ್ರವಾರ ಅರ್ಧ ದಿನಕ್ಕೆ ಕಲಾಪ ಮುಗಿಯುತ್ತದೆ. ಕೇವಲ 5 ದಿನ ಮಾತ್ರ ಕಲಾಪಕ್ಕೆ ಅವಕಾಶ ಸಿಗುವಂತಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೇವಣ್ಣ ಟೆನ್ಷನ್ ನಡುವೆ ನವೆಂಬರ್ 19 ರಂದು ಬೆಳಗಾವಿ ಅಧಿವೇಶನ ಕುರಿತು ಪೂರ್ವಬಾವಿ ಸಭೆ ನಡೆಸಲು ಸ್ಪೀಕರ್ ರಮೇಶ್ ಕುಮಾರ್ ನಿರ್ಧರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

CJP ಪ್ರತಿಭಟನಾಕಾರರಿಂದ ಕಲ್ಲು ತೂರಾಟ: ಗರ್ಭಿಣಿ ಪೊಲೀಸ್​ ಅಧಿಕಾರಿ ಮಗು ಸಾವು- ಏನಿದರ ಅಸಲಿಯತ್ತು
ಜನರನ್ನು ಮೂರ್ಖರನ್ನಾಗಿಸಬೇಡಿ, ನಾಟಕ ಬೇಡ: ರಾಹುಲ್ ಗಾಂಧಿ ವಿರುದ್ಧ ಸೋನಂ ವಾಂಗ್ಚುಕ್​ ಪತ್ನಿ ಕಿಡಿಕಿಡಿ