ರೇವಣ್ಣ ತುಂಬಾ ಕೆಲಸ ಮಾಡುತ್ತಾರೆ. ಅದರೆ ಅವರು ಜನರ ಜತೆ ಮಾತನಾಡುವಾಗ ಸ್ವಲ್ಪ ಕೋಪದಲ್ಲಿ ಮಾತನಾಡುತ್ತಾರೆ. ಅದನ್ನು ತಿದ್ದಿಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಸಭೆಯಲ್ಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬುದ್ಧಿ ಹೇಳಿದ ಪ್ರಸಂಗ ಬುಧವಾರ ನೆಡೆಯಿತು.
ಚನ್ನರಾಯಪಟ್ಟಣ (ಜ.25): ರೇವಣ್ಣ ತುಂಬಾ ಕೆಲಸ ಮಾಡುತ್ತಾರೆ. ಅದರೆ ಅವರು ಜನರ ಜತೆ ಮಾತನಾಡುವಾಗ ಸ್ವಲ್ಪ ಕೋಪದಲ್ಲಿ ಮಾತನಾಡುತ್ತಾರೆ. ಅದನ್ನು ತಿದ್ದಿಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಸಭೆಯಲ್ಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬುದ್ಧಿ ಹೇಳಿದ ಪ್ರಸಂಗ ಬುಧವಾರ ನೆಡೆಯಿತು. ಚನ್ನರಾಯಪಟ್ಟಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ರೇವಣ್ಣ ಅವರ ಕೆಲಸಕ್ಕೆ ಯಾವ ಮಂತ್ರಿಯೂ ಸಾಟಿ ಇಲ್ಲ. ಆದರೆ ಅವರ ಮುಂಗೋಪ ಬಿಟ್ಟರೆ ಎಲ್ಲವೂ ಸರಿಯಾಗುತ್ತೆ ಎಂದು ಗದರುತ್ತಾರೆ’ ಎಂದು ಹೇಳಿದರು.
‘ಹೇಮಾವತಿ ನೀರನ್ನು ಕಾವೇರಿ ಮೂಲಕ ತಮಿಳುನಾಡಿಗೆ ಬಿಡಿ ಎಂದು ಆದೇಶ ಆಗಿದೆ. ಈ ವಿಚಾರದಲ್ಲಿ ಹೋರಾಟ ಮಾಡುವ ಯೋಗ್ಯತೆ ಇಲ್ಲ. ಕಾವೇರಿ ವಿಚಾರ ಬಂದಾಗ ನಾನು ರಾಜ್ಯ ಸಭೆಯಲ್ಲಿ ಮುಷ್ಠಿ ಹಿಡಿದು ಟೇಬಲ್ ಗುದ್ದಿ ಮೇಲೆದ್ದು ಮಾತನಾಡಿದ್ದೇನೆ, ರಾಜಕೀಯ ದೇವೇಗೌಡರ ಕುಟುಂಬದ ಆಸ್ತಿಯಾ ಎಂದು ಕೇಳುತ್ತಾರೆ. ಹೌದು ಇದು ನನ್ನ ಆಸ್ತಿ ಅಲ್ಲಾ, ಮುಸ್ಲಿಮರಿಗೆ 4% ಮೀಸಲಾತಿ ತೆಗದಿದ್ದರು. ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಾಗ ಅದನ್ನು ವಾಪಾಸ್ ತೆಗೆಯುತ್ತೇವೆ ಎಂದರು. ಅಧಿಕಾರಕ್ಕೆ ಬಂದರಲ್ಲಾ ತೆಗೆದಿದ್ದಾರಾ?’ ಎಂದು ಪ್ರಶ್ನೆಸಿದರು.
undefined
ಅಯೋಧ್ಯ ರಾಮಮಂದಿರಕ್ಕೆ ಅಪಸ್ವರ ಬೇಡ: ಪ್ರಮೋದ್ ಮುತಾಲಿಕ್
‘ಈ ರಾಜ್ಯದಲ್ಲಿ ಇವತ್ತು ಏನಾಗಿದೆ. ಇದನ್ನು ರಾಜ್ಯ ಎಂದು ಕರೆಯುತ್ತಾರಾ? ಸಿದ್ದರಾಮಯ್ಯರನ್ನು ನಾನು ದೊಡ್ಡ ಸ್ಥಾನದಲ್ಲಿ ಇರಿಸಿದ್ದೆ. ಇಂದು ಅವರ ಆಡಳಿತದಲ್ಲಿ ಈ ಪರಿಸ್ಥಿತಿ ಬಂದಿದೆ. ನಾನು ಅವರ ಬಗ್ಗೆ ಕೆಟ್ಟದಾಗಿ ಮಾತಾಡಬೇಕು ಎಂದು ಹೇಳುತ್ತಿಲ್ಲ. ಕಾಂಗ್ರೆಸ್‌ಗೆ ಈ ಸ್ಥಿತಿ ಬರಬೇಕು ಅಂದ್ರೆ ಅವರೇ ಕಾರಣ’ ಎಂದು ಅಣಕವಾಡಿದರು.
‘ನಾವು ಅಧಿಕಾರ ಮಾಡಿದ್ದು ನಮ್ಮ ಕುಟುಂಬದ ಅಭಿವೃದ್ಧಿಗೆ ಅಲ್ಲಾ, ನಾನು ಒಂದು ಸಣ್ಣ ತಪ್ಪು ಮಾಡಿದ್ರೂ ಅಂಜುತ್ತಿದ್ದೆ, ಕಳೆದ ಬಾರಿ ಚುನಾವಣೆಯಲ್ಲಿ 44 ಸಾವಿರ ಮತ ಲೀಡ್ ಇತ್ತು. ಈ ಬಾರಿ ಎಂಎಲ್‌ಎ ಚುನಾವಣೆಯಲ್ಲಿ ಕೇವಲ 6.5 ಸಾವಿರ ಲೀಡ್‌ಗೆ ಬಂದಿದೆ. ನಿಮಗೆ ತಲೆಬಾಗಿ ನಮಸ್ಕಾರ ಮಾಡುತ್ತೇನೆ. ಪ್ರಜ್ವಲ್ ರೇವಣ್ಣಗೆ ಕಳೆದ ಬಾರಿ ಇದ್ದ 44 ಸಾವಿರ ಲೀಡನ್ನೇ ಕೊಡಬೇಕು’ ಎಂದು ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಮತ ಯಾಚನೆ ಮಾಡಿದರು.
ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಸರ್ಕಾರದ ಆದ್ಯತೆ: ಸಿದ್ದರಾಮಯ್ಯ ಹೇಳಿದ್ದೇನು?
ಕಾಂಗ್ರೆಸ್, ಸಿದ್ದು ವಿರುದ್ಧ ಹರಿಹಾಯ್ದ ದೇವೇಗೌಡರು: ‘ನಾನು ಪ್ರಧಾನಿ ಆಗಿ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುತ್ತಿದ್ದೆ, ಆದರೂ ಈ ಕಾಂಗ್ರೆಸ್‌ನವರು ಯಾಕೆ ತೆಗೆದ್ರು? ಕುಮಾರಸ್ವಾಮಿ ೧೩ ತಿಂಗಳು ಮುಖ್ಯಮಂತ್ರಿ ಆಗಿದ್ದರು. ಅವರನ್ನು ತೆಗೆದದ್ದು ಯಾರು’ ಎಂದು ಕಿಡಿಕಾರಿದರು.