ಫ್ರೀ ಕರೆಂಟ್‌ ಅಂತಾ ಫೋಟೋ ಹಾಕಿಸಿಕೊಂಡಿದ್ದೀರಿ, ದರ ಏರಿಕೆ ಮಾಡಿದ್ದಕ್ಕೂ ಹಾಕಿಕೊಳ್ಳಿ ಎಂದ ಕುಮಾರಸ್ವಾಮಿ!

By Santosh NaikFirst Published Jul 12, 2023, 4:27 PM IST
Highlights

ಬುಧವಾರ ರಾಜ್ಯಪಾಲದ ಭಾಷಣದ ಮೇಲೆ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
 

ಬೆಂಗಳೂರು (ಜು.12): ವಿಧಾನಸಭೆ ಆರಂಭವಾದ ದಿನದಿಂದಲೂ ಸರ್ಕಾರದ ಮೇಲೆ ಮುಗಿಬಿದ್ದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ, ಬುಧವಾರ ರಾಜ್ಯಪಾಲದ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲೂ ಸರ್ಕಾರವನ್ನು ವಿವಿಧ ವಿಚಾರಗಳಲ್ಲಿ ತರಾಟೆಗೆ ತೆಗೆದುಕೊಂಡರು. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಪರಿಣಾಮ ಹಾಗೂ ವರ್ಗಾವಣೆ ದಂಧೆಯ ಕುರಿತಾಗಿ ಅವರು ಮಾತನಾಡಿದರು.

'ಇನ್ನೂರು ಯುನಿಟ್ ಉಚಿತ ಅಂತಾ ಫೋಟೋ ಹಾಕಿಕೊಂಡಿದ್ದೀರಲ್ಲ. ಈಗ ವಿದ್ಯುತ್ ದರ ಏರಿಕೆ ಆಗಿದೆ ಅದರ ಕುರಿತಾಗಿಯೂ ನೀವು ಫೋಟೋ ಹಾಕಿಕೊಂಡು ಪ್ರಚಾರ ಮಾಡಬೇಕಲ್ವಾ? ಎಂದು ಕುಮಾರಸ್ವಾಮಿ ಹೇಳಿದ್ದಕ್ಕೆ,  ವಿದ್ಯುತ್‌ ದರ ಏರಿಕೆ ಮಾಡಿದ್ದಯ ನಾವಲ್ಲ ಅವರು ಎಂದು ಬಿಜೆಪಿ ಶಾಸಕರ ಕಡೆ ಕಾಂಗ್ರೆಸ್ ಶಾಸಕರು ಕೈತೋರಿಸಿದರು. ಈ ವೇಳೆ ಕುಮಾರಸ್ವಾಮಿ,  ಯಾರು ಜಾಸ್ತಿ ಮಾಡಿದ್ದಾರೋ ಅವರದ್ದೇ ಫೋಟೋ ಹಾಕಿ ಎಂದು ಹೇಳಿದರು. ಹಳ್ಳಿಗಳಲ್ಲಿ ಬಸ್ ಗಳ ಕೊರತೆ ಇದೆ. ಖಾಸಗಿ ಬಸ್ ಗಳಿಗೆ ಶಕ್ತಿ ಯೋಜನೆಯಿಂದ ತೊಂದರೆ ಆಗಿದೆ. ಆಟೋಗಳಿಗೆ ಇದರಿಂದ ತೊಂದರೆ ಆಗಿದೆ. ಅವರಿಗೆ ಏನು ಮಾಡಬೇಕು ಅಂತಾ ಸರ್ಕಾರ ಯೋಚಿಸಬೇಕು ಎಂದು ಹೇಳಿದರು.

ಇದೇ ವೇಳೆ ಸದನದಲ್ಲಿ ಕೂಪನ್ ಅನ್ನು ಎಚ್‌ಡಿಕೆ ಪ್ರದರ್ಶನ ಮಾಡಿದರು. ಇವತ್ತಿನ ಚುನಾವಣಾ ವ್ಯವಸ್ಥೆ ಈ ರೀತಿ ಇದೆ. ಚುನಾವಣೆ ಸಂಧರ್ಭದಲ್ಲಿ ಮತ ನೀಡಿದರೆ ಗಿಫ್ಟ್ ಕೊಡುವುದಾಗಿ ಈ ಕೂಪನ್ ಗಳನ್ನು ಹಂಚಿದ್ದಾರೆ. ನಿಮ್ಮ ಐದು ಗ್ಯಾರಂಟಿ ಗಳ ಜೊತೆ ಇದೊಂದು ಆರನೇ ಗ್ಯಾರಂಟಿ ಬಗ್ಗೆ ಹೇಳಿ ಎಂದಾಗ ನಾವು ಗಿಫ್ಟ್ ಅಂತಾ ಕೊಟ್ಟಿಲ್ಲ ಎಂದು ರಂಗನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕುಮಾರಸ್ವಾಮಿ, ರಂಗಸ್ವಾಮಿ ಅವರೇ ಕುಳಿತುಕೊಳ್ಳಿ, ನಾನು ನಿಮ್ಮ ಹೆಸರೇ ಹೇಳಿಲ್ಲ ಎಂದರು.

Latest Videos

Transfer Mafia: ಕಾಂಗ್ರೆಸ್ ವಿರುದ್ಧ ಪೆನ್‌ಡೈವ್‌ ದಾಖಲೆ ತೋರಿಸಿದ ಕುಮಾರಸ್ವಾಮಿ

ವರ್ಗಾವಣೆ ವಿಚಾರದಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ದಾಖಲೆ ಇದೆ. ಅದನ್ನು ನಿಮಗೆ ಕಳಿಸುತ್ತೇನೆ  ಈ ವಿಚಾರದಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಾ ಎಂದು ಸಭಾಧ್ಯಕ್ಷರಿಗೆ ಪ್ರಶ್ನೆ ಮಾಡಿದರು. ನಾನು ಯಾವ ಇಲಾಖೆ ಅಂತಾ ಹೇಳಲ್ಲ. ಆದರೆ ಈ ದಾಖಲೆಯನ್ನು ನಿಮಗೆ ಕಳಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಆದರೆ ಯಾವ ಇಲಾಖೆ, ಏನು ಭ್ರಷ್ಟಾಚಾರ ಅನ್ನೋ ಮಾಹಿತಿ ನೀಡಲು ನಿರಾಕರಿಸಿದರು.

News Hour: ಕಾಂಗ್ರೆಸ್,ವಿಪಕ್ಷಗಳ ನಡುವೆ YST & VST ಬೆಂಕಿ..!

click me!