'ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡ್ರು ಸಿದ್ಧ'

By Suvarna News  |  First Published Nov 15, 2021, 5:51 PM IST

* ಬಿಜೆಪಿ ಸರ್ಕಾರಗಳ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
* ಬಿಟ್ ಕಾಯಿನ್ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ ಕುಮಾರಸ್ವಾಮಿ
* ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ಕೊಟ್ಟ ಎಚ್‌ಡಿಕೆ


ಬೆಂಗಳೂರು, (ನ.15): ನಮ್ಮದು ಕುಟುಂಬ ರಾಜಕಾರಣ (Family Politics) ಎಂದು ಆರೋಪಿಸುತ್ತಾರೆ. ಕುಟುಂಬ ಸದಸ್ಯರು ರಾಜಕಾರಣಕ್ಕೆ ಬರಬಾರದು ಎಂದಿದೆಯಾ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.

ಇಂದು(ಸೋಮವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಎಚ್ ಡಿ ದೇವೇಗೌಡರ ಕಾಲದಲ್ಲಿ 2G ರೀತಿ ಸ್ಕ್ಯಾಂ ಇರಲಿಲ್ಲ. ಕುಟುಂಬ ರಾಜಕಾರಣ ವಿಚಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ, ನಮ್ಮ ಪಕ್ಷ ನಿಭಾಯಿಸುತ್ತೇವೆ ಅಂದರೆ ನಾವು ಬಿಟ್ಟುಕೊಡುತ್ತೇವೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡರು ಸಿದ್ಧ. ಇಲ್ಲಿ ಭಿಕ್ಷೆ ಬೇಡಿ ಪಕ್ಷ ಕಟ್ಟುವಂತಹ ಪರಿಸ್ಥಿತಿ ಇದೆ. ನನ್ನನ್ನು ಪದೇಪದೆ ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

undefined

ಕುಟುಂಬ ರಾಜಕಾರಣದಲ್ಲಿ ಬಿಜೆಪಿ ಎಲ್ಲ ಪಕ್ಷಗಳ ದಾಖಲೆ ಮುರಿದಿದೆ: ಪಟ್ಟಿ ನೀಡಿದ ಜೆಡಿಎಸ್

ಲೀ ಮೆರಿಡಿಯನ್ ಹೊಟೇಲ್ ದೇವೇಗೌಡರದ್ದು ಅಂದ್ರು, ಮೆಜೆಸ್ಟಿಕ್ ನಲ್ಲಿ ಗುಪ್ತಾ ಮಾರ್ಕೆಟ್ ನಮ್ಮದು ಅಂದ್ರು, ಆದ್ರೆ ಅದ್ಯಾವುದು ನಮ್ಮ ಕುಟುಂಬದಲ್ಲ.

ರಾಜಕಾರಣಿ ಮಕ್ಕಳು ರಾಜಕಾರಣಿ, ವೈದ್ಯರ ಮಕ್ಕಳು ವೈದ್ಯರು, ಅದೇ ರೀತಿ ನಮ್ಮ ಕುಟುಂಬದಲ್ಲಿ 14 ಜನರು ವೈದ್ಯರಿದ್ದಾರೆ. ಕುಟುಂಬ ರಾಜಕಾರಣ ವೈಭವೀಕರಿಸುವ ಅವಶ್ಯಕತೆ ಇಲ್ಲ. ದೇಶದಲ್ಲಿನ ಆಘಾತಕಾರಿ ವಿಚಾರಗಳ ಬಗ್ಗೆ ಗಮನಹರಿಸಲಿ. ನಾವು ಮಹಾನ್ ಅಪರಾಧ ಮಾಡಿದ್ದೇವೆಯೇ ಎಂದು ಪ್ರಶ್ನಿಸಿದರು.

ಕುಟುಂಬ ರಾಜಕಾರಣ ಬಿಜೆಪಿ ಮಾಡಿಲ್ವಾ? : ಎಚ್‌ಡಿಕೆ ತಿರುಗೇಟು

ತೌಡು ಕುಟ್ಟುವ ಕೆಲಸ 
ನಾವು ಸರ್ಕಾರದ ಮತ್ತು ಜನರ ಸಂಪತ್ತು ಲೂಟಿ ಹೊಡೆದಿಲ್ಲ. ಕಾರ್ಪೊರೇಟ್ ಕಂಪನಿಗಳಿಗೆ ದೇಶದ ಆಸ್ತಿ ಮಾರಾಟಮಾಡಿಲ್ಲ. ಬಿಟ್ ಕಾಯಿನ್ ವಿಚಾರದಲ್ಲಿ ಸುಮ್ಮನೇ ಪ್ರಚಾರ ಮಾಡಿದರು. ಸುಮ್ಮನೇ ಪ್ರಚಾರ ಮಾಡಿ ತೌಡು ಕುಟ್ಟುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಯಾರೂ ದೊಡ್ಡ ದೊಡ್ಡ ಹಗರಣಗಳಿಗೆ ಕೈ ಹಾಕುವುದಿಲ್ಲ. ಸಣ್ಣಪುಟ್ಟ ಹಗರಣಗಳ ಬಗ್ಗೆ ಮಾತ್ರ ಗಮನಹರಿಸುತ್ತಾರೆ. ದೇಶದ ಜನರ ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಳಸಬೇಕು. ತೆರಿಗೆ ಹಣ ಸಮರ್ಪಕ ಬಳಕೆ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಜನರ ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿದೆಯಾ? ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬಿಜೆಪಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಸರ್ಕಾರದ ಕಾರ್ಯ ವೈಖರಿ ಪ್ರಶ್ನಿಸುವುದನ್ನೂ ಜನ ಮರೆತಿದ್ದಾರೆ. ತೈಲ, ಅಗತ್ಯ ವಸ್ತುಗಳ ದರ ಏರಿಕೆಯಾಗಿದ್ದರೂ ಪ್ರಶ್ನಿಸುತ್ತಿಲ್ಲ. ನಾವು ತಲೆ ಹೊಡೆದು ಹಣ ಸಂಪಾದಿಸಿಲ್ಲ. ಪಕ್ಷ ಸಂಘಟಿಸಲು ದುಡಿಮೆ ಮಾಡಬೇಕು. ಬಿಜೆಪಿಯವರು ಈ ಹಿಂದೆ ಯಾವ ರೀತಿ ಇದ್ದರು. ಈಗ ಹೇಗಿದ್ದಾರೆ ಎಂದು ಗೊತ್ತಿದೆ. ಸ್ಕೂಟರ್ಗೆ ಪೆಟ್ರೋಲ್ ಹಾಕಿಸಲು ದುಡ್ಡು ಇಲ್ಲದೆ ಇದ್ದವರು ಈಗ ಹೇಗಿದ್ದಾರೆ ಎಂದು ಗೊತ್ತಿದೆ ಅಂತ ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕುಟುಂಬ ರಾಜಕಾರಣ ಕಾಂಗ್ರೆಸ್ನಲ್ಲೂ ದೊಡ್ಡ ಪಟ್ಟಿಯನ್ನೇ ಕೊಡಬಹುದು. ದೇವೇಗೌಡರ ಕಾಲದಲ್ಲಿ ಬಿಟ್ ಕಾಯಿನ್ ಹಗರಣ ಬಂದಿತ್ತಾ? ನಾನು ಸಿಎಂ ಆಗಿದ್ದಾಗ ಇಂತಹದ್ದು ಬಂದಿತ್ತಾ? ಅದ್ಯಾವುದೋ 150 ಕೋಟಿ ಆರೋಪ ಹೊರಿಸಿದ್ದರು. ಬಿಜೆಪಿಯವರು ಶಾಸಕರ ಖರೀದಿ ಮಾಡಿ ವ್ಯವಸ್ಥೆ ಹದಗೆಡಿಸುತ್ತಿದ್ದಾರೆ. ಇದು ಒಳ್ಳೆಯ ರಾಜಕಾರಣವಾ? ಎಂದರು.

ಸಿಂಹಗೆ ಕುಮಾರಸ್ವಾಮಿ ತಿರುಗೇಟು
ಇನ್ನು ಬಿಟ್ ಕಾಯಿನ್ ಹಗರಣದ ಬಗ್ಗೆ ಮಾತನಾಡಿದ ಕುಮಾರಸ್ವಾಮಿಗೆ ಮೊದಲು ಇಡಿ ನೋಟಿಸ್ ಕೊಟ್ಟು ತನಿಖೆ ನಡೆಸಬೇಕೆಂದಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಚ್‌ಡಿಕೆ ಕಿಡಿಕಾರಿದ್ದಾರೆ.

ಪ್ರತಾಪ್ ಸಿಂಹ ಎರಡು ಬಾರಿ ಎಂಪಿ‌‌ ಆದವರು. ಇಡಿ ಅವರು ನನಗೆ ಯಾಕೆ ನೋಟೀಸ್ ಕೊಡಬೇಕು. ಪ್ರಧಾನಿ ‌ಮೋದಿ, ಗೃಹಸಚಿವರು ಇದ್ದಾರೆ. ಹೊರಗಡೆ ಜನಧನ್ ಅಕೌಂಟ್ ‌ನಲ್ಲಿ ಹಣ ಎತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಅದು ಸತ್ಯವೋ ಸುಳ್ಳೋ ಅಂತ ಅವರು ತನಿಖೆ ಮಾಡಿಸಬೇಕು. ಸರ್ಕಾರ ಇದರ ಸತ್ಯಾಸತ್ಯತೆ ಹೊರಗಿಡಬೇಕು ಎಂದು ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟರು.

click me!