ಎರಡು ವರ್ಷಗಳ ಸರಣಿ ಸುಲಿಗೆ, ಯುಗಾದಿ ಹಬ್ಬಕ್ಕೆ ಬೆಲೆ 'ಏರಿಕೆ ಹೋಳಿಗೆ. ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು!. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ದರ ಏರಿಕೆಯನ್ನು ಖಂಡಿಸಿದ ರೀತಿ. ಒಂದೇ ಟ್ವೀಟ್ ಮೂಲಕ ಹೆಚ್‌ಡಿಕೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.
ಬೆಂಗಳೂರು(ಮಾ.28) ಹಾಲಿನ ದರ ಮೂರನೇ ಬಾರಿ ಏರಿಕೆ, ವಿದ್ಯುತ್ ದರ ಏರಿಕೆ ಸೇರಿದಂತೆ ರಾಜ್ಯದಲ್ಲಿನ ದುಬಾರಿ ದುನಿಯಾ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರ ತಿವಿದಿದ್ದಾರೆ. ಗ್ಯಾರೆಂಟಿ ನೀಡಿ ಇತರ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಹೈನುಗಾರಿಗೆ ಬಗ್ಗೆ ಕಾಳಜಿ ಇದ್ದರೆ ಅವರಿಗೂ ಒಂದು ಗ್ಯಾರೆಂಟಿ ಘೋಷಿಸಿ. ಇದರ ಬದಲು ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಹೋಳಿಗೆಯನ್ನು ಕಾಂಗ್ರೆಸ್ ನೀಡಿದೆ ಎಂದಿದ್ದಾರೆ. ಇಷ್ಟೇ ಅಲ್ಲ ವಿದ್ಯುತ್ ದರ ಏರಿಕೆ ಶಾಕ್‌ನಿಂದ ಮಹಾದೇವಪ್ಪನಿಗೂ ಶಾಕು-ಕಾಕಾ ಪಾಟೀಲಗೂ ಶಾಕು ಎಂದು ಟ್ವೀಟ್ ಮಾಡಿದ್ದಾರೆ
ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಸರಣಿ ಸುಲಿಗೆ ಮಾಡುತ್ತಿದೆ. ಜನಸಾಮಾನ್ಯರಿಗೆ ಕರ್ನಾಟಕದಲ್ಲಿ ದಿನ ದೂಡುವುದು ಪ್ರಯಾಸವಾಗಿದೆ ಎಂದು ಹೆಚ್‌ಡಿಕೆ ಟ್ವೀಟ್ ಮೂಲಕ ಹೇಳಿದ್ದಾರೆ. ಹಾಲು ಹಾಲಾಹಲ, 3ನೇ ಸಲ ದರ ಏರಿಕೆ ಎಂದಿದ್ದಾರೆ. 2023ರ ಆಗಸ್ಟ್ ತಿಂಗಳಲ್ಲಿ 3 ರೂಪಾಯಿ ಏರಿಕೆ, ಬಳಿಕ 2024ರ ಜೂನ್ ತಿಂಗಳಲ್ಲಿ 2 ರೂಪಾಯಿ ಇದೀಗ 4 ರೂಪಾಯಿ ಏರಕೆ ಮಾಡಲಾಗಿದೆ. ಇನ್ನು ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ವಿದ್ಯುತ್ ಶಾಕ್ ನೀಡಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಈಗ ಎಲ್ಲರಿಗೂ ಪ್ರತೀ ಯೂನಿಟ್ಟಿಗೆ ₹36 ಪೈಸೆ ಬರೆ. ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು ಎಂದು ಕಾಂಗ್ರೆಸ್ ನಾಯಕರ ಗ್ಯಾರೆಂಟಿ ಡೈಲಾಗ್‌ನ್ನೇ ತಿರುಗಾಬಣವಾಗಿ ಬಿಟ್ಟಿದ್ದಾರೆ.
.ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ ಟೀ ದರವೂ ಹೆಚ್ಚಳ ! ಕಾಂಗ್ರೆಸ್ ನಂಬಿದ ಜನಸಾಮಾನ್ಯರಿಗೆ ಬರೆ ಮೇಲೆ ಬರೆ!
ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನ. ಹಾಲು, ವಿದ್ಯುತ್ ದರ ಏರಿಕೆ ಖಂಡನೀಯ. ನೆಪ ರೈತರದು, ಲಾಭ ಕೆಎಂಎಫ್ ಗೆ. ಕಾಂಗ್ರೆಸ್ ಸರ್ಕಾರ ಕಂಪನಿ ಆಡಳಿತ ನಡೆಸುತ್ತಿದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಮೊಸರು ದರ ₹4 ಏರಿಕೆ ಮಾಡಿದ್ದೀರಿ. ಈ ಹಣ ಏನು ಮಾಡುತ್ತೀರಿ? ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ತಾನೇ ಉಳಿಸಿಕೊಳ್ಳಲಿದೆಯೋ? ಸ್ಪಷ್ಟಪಡಿಸಿ ಎಂದು ಕುಮಾರಸ್ವಾಮಿ ಪ್ರಶ್ನಸಿದ್ದಾರೆ.
ಎರಡು ವರ್ಷಗಳ ಸರಣಿ ಸುಲಿಗೆ!
ಯುಗಾದಿ ಹಬ್ಬಕ್ಕೆ ಬೆಲೆ 'ಏರಿಕೆ ಹೋಳಿಗೆ!!'
🔺 ಹಾಲು ಹಾಲಾಹಲ; 3ನೇ ಸಲ ದರ ಏರಿಕೆ!
2023 ಆಗಸ್ಟ್ ₹3
2024 ಜೂನ್ ₹2
2025 ಮಾರ್ಚ್, ಅಂದರೆ ಈಗ ₹4
🔺 ವಿದ್ಯುತ್ ಶಾಕ್!
ಈಗ ಎಲ್ಲರಿಗೂ ಪ್ರತೀ ಯೂನಿಟ್ಟಿಗೆ ₹36 ಪೈಸೆ ಬರೆ. ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು!!
ಒಂದು ಕೈಯಲ್ಲಿ ಕೊಟ್ಟು…
ಇದು ಪ್ರಜಾಪ್ರಭುತ್ವ ಸರಕಾರವಲ್ಲ. ದರ ಏರಿಕೆ, ತೆರಿಗೆ ಹೇರಿಕೆ ಸರಕಾರ, ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ. ಸುಲಿಗೆಯಷ್ಟೇ ನಿತ್ಯಕೃತ್ಯ. ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ. ಈಸ್ಟ್ ಇಂಡಿಯಾ ಕಾಂಗ್ರೆಸ್ ಎಂದು ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಹಾಲಿನ ದರ ಬರೋಬ್ಬರಿ 4 ರೂಪಾಯಿ ಏರಕೆಯಾದ ಬೆನ್ನಲ್ಲೇ ಆಕ್ರೋಶ ಹೆಚ್ಚಾಗುತ್ತಿದೆ. ಗ್ಯಾರೆಂಟಿಯಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಗ್ಯಾರೆಂಟಿಯಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಅನ್ನೋ ಕೂಗನ್ನು ಸ್ವತಃ ಕಾಂಗ್ರೆಸ್ ಶಾಸಕರೇ ಹೊರಹಾಕಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಗ್ಯಾರೆಂಟಿ ಹೊರೆಯಾಗುತ್ತಿದೆ ಎಂದು ಇತ್ತ ಬಿಜೆಪಿ ಆರೋಪ ಮಾಡುತ್ತಿದೆ. ಇದರ ನಡುವೆ ಬೆಲೆ ಏರಿಕೆ ಬಿಸಿ ಕಾಂಗ್ರೆಸ್ ಸರ್ಕಾರಕ್ಕೆ ನಂಗುಲಾರದ ತುತ್ತಾಗಿ ಪರಿಣಿಮಿಸಿದೆ. ಹಿಮಾಚಲ ಸರ್ಕಾರದ ಇದೇ ರೀತಿ ಗ್ಯಾರೆಂಟಿ ಘೋಷಣೆಯಿಂದ ದಿವಾಳಿಯಾಗಿದೆ. ದೇವಸ್ಥಾನ ಹಣವನ್ನು ಬಳಸಿಕೊಳ್ಳಲು ಮುಂದಾಗುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಇದರ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಂತ ಹಂತವಾಗಿ ಬೆಲೆ ಏರಿಕೆ ನಿರ್ಧಾರಗಳು ಜನರ ಆಕ್ರೋಶ ಹೆಚ್ಚಿಸುತ್ತಿದೆ.
ಕಾಂಗ್ರೆಸ್ ಸರ್ಕಾರದಿಂದ 3ನೇ ಬಾರಿಗೆ ₹4 ಹಾಲಿನ ದರ ಏರಿಕೆ! 20 ತಿಂಗಳಲ್ಲಿ 9 ರೂ. ಹೆಚ್ಚಳ!