ಲೋಕಸಭಾ ಚುನಾವಣೆ: ಮಂಡ್ಯದಿಂದ ಸ್ಪರ್ಧೆ ಸುಳಿವು ನೀಡಿದ ಎಚ್‌ಡಿ ಕುಮಾರಸ್ವಾಮಿ! ಹೇಳಿದ್ದೇನು?

By Ravi JanekalFirst Published Feb 26, 2024, 2:02 PM IST
Highlights

ಇಂಥ ಕೆಟ್ಟ ಸರ್ಕಾರ ನಾನು ನೋಡಿಲ್ಲ. ಕಾಂಗ್ರೆಸ್ಸಿನದು ಕೆಟ್ಟ ಆಡಳಿತ ತೆಗಿಬೇಕಾಗಿದೆ. ಬಜೆಟ್‌ನಲ್ಲಿ ಜಾಹೀರಾತು ಕೊಡೋಕೆ 200 ಕೋಟಿ ಅನುದಾನ ಪಡೆಯುತ್ತಾರೆ. ರೈತರು ನಷ್ಟದಲ್ಲಿದ್ದಾರೆ. ಪರಿಹಾರ ಕೊಡೋಕೆ ಹಣ ಇಲ್ಲ. ರೈತರಿಗೆ ತಲಾ 2 ಸಾವಿರ ಕೊಡ್ತೀವಿ ಅಂತಾ 620 ಕೋಟಿ ಮೀಸಲಿಟ್ಟಿದ್ದಾರೆ. ಅದರಲ್ಲಿ 75 ಪರ್ಸೆಂಟ್ ಕೇಂದ್ರದ್ದು, 25 ಪರ್ಸೆಂಟ್ ರಾಜ್ಯದ್ದು. ಆದರೆ ಜಾಹೀರಾತು ಕೊಡೋಕೆ 200 ಕೋಟಿ ಹಣ ಪಾಸ್ ಮಾಡ್ತಾರೆ. ಜಾಹಿರಾತಿನಲ್ಲಿ ಇರುವ ಕಲ್ಲರ್ ಫೋಟೋ ನೋಡಿದ್ರೆ ಹೇಸಿಗೆ ಆಗುತ್ತೆ ಎಂದರು.

ಕೋಲಾರ (ಫೆ.26): ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್ ಸ್ಪರ್ಧೆ ಮಾಡೋದಿಲ್ಲ ಈಗಾಗಲೇ ಅವನೇ ಸ್ಪಷ್ಟನೆ ನೀಡಿದ್ದಾನೆ. ಅದರೂ ಪದೇಪದೆ ಅದೇ ಪ್ರಶ್ನೆ ಕೇಳ್ತಿರಿ, ನಿಖಿಲ್ ಸ್ಪರ್ಧೆ ಬಗ್ಗೆ ಎಷ್ಟು ಬಾರಿ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಮಾಧ್ಯಮದವರ ಮೇಲೆ ಸಿಡಿಮಿಡಿಗೊಂಡ ಘಟನೆ ನಡೆಯಿತು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಮಾಡುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ಪರ್ಧೆ ಮಾಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಅವರು ದೊಡ್ಡವರು ಇದ್ದಾರೆ. ಅವರ ಬಗ್ಗೆ ನಾನು ಏನು ಮಾತನಾಡಲಿ? ನಮ್ಮದು ಸಣ್ಣ ಪಕ್ಷ,ನಾವು ಏನೂ ಮಾಡಬೇಕೋ ಮಾಡ್ತೀವಿ. ರಾತ್ರಿ 1.30 ರವರೆಗೂ ಮಂಡ್ಯ ಚುನಾವಣೆ ಬಗ್ಗೆ ಸಭೆ ಮಾಡಿದ್ದೇನೆ ಈ ಮಧ್ಯೆ ಏನೇನೋ ಬೆಳವಣಿಗೆ ಆಗ್ತಿದೆ ಎಂದರು.

ನಮಗೆ ಜೆಡಿಎಸ್ ಬಿಜೆಪಿ ಭಯ ಇಲ್ಲ; ಕೆಲಸದ ಒತ್ತಡದಿಂದ ರಿಲ್ಯಾಕ್ಸ್ ಬೇಕಿತ್ತು ರೆಸಾರ್ಟ್‌ಗೆ ಬಂದಿದ್ದೇವೆ: ಸಚಿವ ಚಲುವರಾಯಸ್ವಾಮಿ

ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ?

ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೊಲ್ಲ. ಆದರೆ ಕಾರ್ಯಕರ್ತರು ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ನನ್ನ ಸ್ಪರ್ಧೆ ಬಗ್ಗೆ ನೋಡೋಣ ಎನ್ನುವ ಮೂಲಕ ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸುವ ಕುರಿತು ಸುಳಿವು ನೀಡಿದರು.

ಇನ್ನು ಕೋಲಾರದಲ್ಲಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ ಹೆಸರು ಸಹ ಕೇಳಿಬರ್ತಿದೆ. ಈ ಬಾರಿ ಕೋಲಾರ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಸೀಟ್ ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಬೇಕು. ಸಂಸದ ಮುನಿಸ್ವಾಮಿ ಸಹ ನಿರೀಕ್ಷೆ ಇಟ್ಟಿದ್ದಾರೆ, ಅಂತಿಮವಾಗಿ ಪಟ್ಟಿ ಬರಲಿದೆ. ಮುನಿಸ್ವಾಮಿ ಸಹ ಸಮರ್ಥರು ಇದ್ದಾರೆ. ಹೈಕಮಾಂಡ್ ಯಾರ ಹೆಸರು ಕೊಡುತ್ತದೋ ನೋಡಬೇಕು ಎಂದರು.

ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ:

ಇಂಥ ಕೆಟ್ಟ ಸರ್ಕಾರ ನಾನು ನೋಡಿಲ್ಲ. ಕಾಂಗ್ರೆಸ್ಸಿನದು ಕೆಟ್ಟ ಆಡಳಿತ ತೆಗಿಬೇಕಾಗಿದೆ. ಬಜೆಟ್‌ನಲ್ಲಿ ಜಾಹೀರಾತು ಕೊಡೋಕೆ 200 ಕೋಟಿ ಅನುದಾನ ಪಡೆಯುತ್ತಾರೆ. ರೈತರು ನಷ್ಟದಲ್ಲಿದ್ದಾರೆ. ಪರಿಹಾರ ಕೊಡೋಕೆ ಹಣ ಇಲ್ಲ. ರೈತರಿಗೆ ತಲಾ 2 ಸಾವಿರ ಕೊಡ್ತೀವಿ ಅಂತಾ 620 ಕೋಟಿ ಮೀಸಲಿಟ್ಟಿದ್ದಾರೆ. ಅದರಲ್ಲಿ 75 ಪರ್ಸೆಂಟ್ ಕೇಂದ್ರದ್ದು, 25 ಪರ್ಸೆಂಟ್ ರಾಜ್ಯದ್ದು. ಆದರೆ ಜಾಹೀರಾತು ಕೊಡೋಕೆ 200 ಕೋಟಿ ಹಣ ಪಾಸ್ ಮಾಡ್ತಾರೆ. ಜಾಹಿರಾತಿನಲ್ಲಿ ಇರುವ ಕಲ್ಲರ್ ಫೋಟೋ ನೋಡಿದ್ರೆ ಹೇಸಿಗೆ ಆಗುತ್ತೆ ಎಂದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ಬೇಕಾದ್ರೆ ಇನ್ನು 2 ಸಾವಿರ ಹೆಚ್ಚಿಗೆ ಕೊಡಲಿ ಅಭ್ಯಂತರ ಇಲ್ಲ. ಸರ್ಕಾರ ಗ್ಯಾರಂಟಿ ಬಗ್ಗೆ ಕನವರಿಕೆ ಮಾಡಿ ಖಜಾನೆ ಖಾಲಿ ಮಾಡಿಕೊಳ್ತಿದ್ದಾರೆ. ಸರ್ಕಾರ ಯಾರಪ್ಪನ ದುಡ್ಡಲ್ಲಿ ಜಾಹಿರಾತು ಕೊಡ್ತಿದ್ದಾರೆ. ನನ್ನ ಆಡಳಿತದ ಅವಧಿಯಲ್ಲಿ ರೈತರ ಸಾಲಮನ್ನ ಮಾಡಿದ ಬಳಿಕ ನಾನು ಜಾಹೀರಾತು ಎಲ್ಲೂ ಹಾಕಿರಲಿಲ್ಲ. ಇವರು ಬಜೆಟ್‌ ನಲ್ಲೇ 200 ಕೋಟಿ ಜಾಹೀರಾತಿಗೆ  ಲೂಟಿ ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೋಗ್ತಾ ಇರ್ತಾರೆ, ಬರ್ತಾರೆ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಡಿಕೆಶಿ ಗೆ ಹಣ ಹಾಗೂ ಧಮ್ಕಿ ನಲ್ಲಿ ಪೈಪೋಟಿ ಕೊಡೋಕೆ ಆಗುತ್ತಾ ? ಸೆಟಲ್‌ಮೆಂಟ್ ರಾಜಕಾರಣದಲ್ಲಿ ಪೈಪೋಟಿ ಕೊಡೋಕೆ ನಮ್ಮಿಂದ ಆಗಲ್ಲ. ಗಿಫ್ಟ್ ಹಂಚೋರು ಮೂರು ಬಿಟ್ಟಿದ್ದಾರೆ ಅದರ ಬಗ್ಗೆ ನಾನು ಮಾತಾಡಲ್ಲ. ಚೈನಾದಿಂದ ಖರೀದಿ ಮಾಡಿರುವ ಕುಕ್ಕರ್ ಹಾಗೂ ಡೈನಿಂಗ್ ಸೆಟ್ ಹಂಚುತ್ತಿದ್ದಾರೆ. ಕಾಂಗ್ರೆಸ್ ನವ್ರು 55 ವರ್ಷಗಳಿಂದ ಮತದಾರರನ್ನ ಇದೆ ಪರಿಸ್ಥಿತಿಯಲ್ಲಿಟ್ಟಿದ್ದಾರೆ. ಲೂಟಿ ಹೊಡೆದಿರುವುದನ್ನೇ ಗಿಫ್ಟ್ ನಲ್ಲಿ ಹಂಚಲಾಗ್ತಿದೆ. ಒಳ್ಳೆ ಕೆಲಸ ಮಾಡಿದ್ರೆ ಗಿಫ್ಟ್ ಯಾಕೆ ಕೊಡ್ತಾರೆ. ಜನರಿಗೆ ಆಮಿಷೆ ತೋರಿಸಿಯೇ ಹಿಂದೆ ಅವರು ಅಧಿಕಾರಕ್ಕೆ ಬಂದಿದ್ದು ಹೊರತು ಅವರು ಒಳ್ಳೆ ಕಾರ್ಯ ಮಾಡಿದ್ದರಿಂದ ಅಲ್ಲ ಎಂದರು.

click me!