ಕೆಲಸದ ಒತ್ತಡದಲ್ಲಿದ್ದೇವೆ. ಒಂದು ದಿನದ ರಿಲ್ಯಾಕ್ಸ್ ಬೇಕಿತ್ತು ಹಾಗಾಗಿ ರೆಸಾರ್ಟ್‌ಗೆ ಹೋಗುತ್ತಿದ್ದೇವೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಅಡ್ಡಮತ ಬೀತಿಯಿಂದ ಶಾಸಕರನ್ನು ರೆಸಾರ್ಟ್ ಶಿಫ್ಟ್ ಮಾಡಲಾಗುತ್ತದೆಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮಂಡ್ಯ (ಫೆ.26): ಕೆಲಸದ ಒತ್ತಡದಲ್ಲಿದ್ದೇವೆ. ಒಂದು ದಿನದ ರಿಲ್ಯಾಕ್ಸ್ ಬೇಕಿತ್ತು ಹಾಗಾಗಿ ರೆಸಾರ್ಟ್‌ಗೆ ಹೋಗುತ್ತಿದ್ದೇವೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಅಡ್ಡಮತ ಬೀತಿಯಿಂದ ಶಾಸಕರನ್ನು ರೆಸಾರ್ಟ್ ಶಿಫ್ಟ್ ಮಾಡಲಾಗುತ್ತದೆಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಮಗೆ ಜೆಡಿಎಸ್, ಬಿಜೆಪಿ ಬಗ್ಗೆ ಭಯ ಅನ್ನೋದೆ ಇಲ್ಲ. ಸಂಖ್ಯೆ ಇಲ್ಲದೆ ಇರೋರು ಪರದಾಡ್ತಾರೆ. ನಾವು ಹೆಚ್ಚು ಸಂಖ್ಯೆಯಲ್ಲಿದ್ದೇವೆ. ಬಿಜೆಪಿ ಶಾಸಕ ಸೋಮಶೇಖರ್ ಸಹ ನಮ್ಮ ಜೊತೆಗೆ ವಿಶ್ವಾಸದಿಂದ ಇದ್ದಾರೆ ಎಂದರು.
undefined
ಇನ್ನು ಮಂಡ್ಯ ಶಾಸಕರ ಕುರಿತು ಪುಟ್ಟರಾಜು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪುಟ್ಟರಾಜು ಮಹಾರಾಜರ ವಂಶಸ್ಥರು. ಅವರ ಜೊತೆಗೆ ನಾವು ಹೋಲಿಕೆ ಮಾಡಲಾಗುತ್ತದ? ಎಂದರು, ಮುಂದುವರಿದು ಮಂಡ್ಯ ಲೋಕಸಭಾ ಟಿಕೆಟ್ ವಿಚಾರ ಎಲ್ಲ ಚರ್ಚೆ ಆಗಿ, ಫೈನಲ್ ಆಗೋಗಿದೆ. ಆದರೆ ಚುನಾವಣೆ ಕಮಿಟಿ ಪ್ರಕಟ ಮಾಡ್ತಾರೆ. ಸ್ಟಾರ್ ಚಂದ್ರು ಹೆಸರು ಫೈನಲ್ ಅದೇ ಫಿಕ್ಸ್. ಹೀಗಾಗಿ ಅವರು ಸಿಎಂ ಕಾರ್ಯಕ್ರದಿಂದಲೇ ಓಡಾಡ್ತಿದ್ದಾರೆ. ಈಗಾಗಲೇ ಚುನಾವಣೆ ಕೆಲಸ ಆರಂಭಿಸಲಾಗಿದೆ. ಆದ್ರೆ ಪಕ್ಷ ಇನ್ನು ಅಧಿಕೃತವಾಗಿ ಪ್ರಕಟ ಮಾಡುವುದಷ್ಟೇ ಬಾಕಿ ಎಂದರು.
ಮಂಡ್ಯ ಜಿಲ್ಲೆಗೆ ‘ನೆಂಟರ’ ಅವಶ್ಯಕತೆ ಇಲ್ಲ, ‘ಮಗನ’ ಅವಶ್ಯಕತೆ ಇದೆ: ಕೃಷಿ ಸಚಿವ ಚಲುವರಾಯಸ್ವಾಮಿ
ಮುಂದಿನ ತಿಂಗಳು 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯ ಜಿಲ್ಲೆಗೆ ಬರಲಿದ್ದಾರೆ. ಬಹುಶಃ ಅಂದಿನಿಂದಲೇ ಚುನಾವಣೆಗೆ ಅಧಿಕೃತ ಪ್ರಚಾರ ಆರಂಭವಾಗಬಹುದು ಎಂದರು.