Karnataka Politics: ನಿಮ್ಮ ಸ್ಥಾನದ ಗೌರವ ಅರಿತು ಮಾತನಾಡಿ: ಸ್ಪೀಕರ್‌ ಕಾಗೇರಿಗೆ ಎಚ್‌ಡಿಕೆ ಸಲಹೆ

By Girish Goudar  |  First Published Mar 26, 2022, 4:25 AM IST

*   ಸಭಾಧ್ಯಕ್ಷರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ
*  ವೀರಾವೇಶದ ಭಾಷಣ ಮಾಡುವವರು ಅಲ್ಲಿ ಸುಮ್ಮನೆ ಕುಳಿತಿದ್ದರು
*  ದೇಶದ ಸಾಮರಸ್ಯ ಕೆಡಿಸುವ ಕೆಲಸ ಶುರುವಾಗಿದೆ 
 


ಹುಬ್ಬಳ್ಳಿ(ಮಾ.26): ತಾವು ಕುಳಿತ ಜಾಗದ ಗೌರವ ಏನು ಅಂತ ತಿಳಿಯದೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಆರ್‌ಎಸ್‌ಎಸ್‌ ಪರ ಮಾತನಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy)  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೀಠಾಧ್ಯಕ್ಷರಾಗಿ ಕಾಗೇರಿ ಅವರು ಆರ್‌ಎಸ್‌ಎಸ್‌(RSS) ಪರವಾದ ಅರ್ಥದಲ್ಲಿ ಮಾತನಾಡಿದರು. ಕಾಂಗ್ರೆಸ್‌(Congress) ನಾಯಕರಿಗೆ ರೋಷ ಏನಾದರೂ ಇದ್ದಿದ್ದರೆ ಅಲ್ಲಿ ಪ್ರತಿಭಟನೆ ಮಾಡಬೇಕಾಗಿತ್ತು. ವೀರಾವೇಶದ ಭಾಷಣ ಮಾಡುವವರು ಅಲ್ಲಿ ಸುಮ್ಮನೆ ಕುಳಿತಿದ್ದರು. ದೇಶದ ಸಾಮರಸ್ಯವನ್ನು ಕೆಡಿಸುವ ಕೆಲಸ ಶುರುವಾಗಿದೆ ಎಂದರು.

Tap to resize

Latest Videos

ಕೋಮು ಸಂಘರ್ಷದಿಂದ ರಾಜಕೀಯ ಲಾಭ ಪಡೆಯುವ ಹುನ್ನಾರ

ಮುಸ್ಲಿಂರಿಗೆ ಹಿಂದೂ(Hindu) ದೇವಸ್ಥಾನಗಳಲ್ಲಿ(Temples) ವ್ಯಾಪಾರ ಬ್ಯಾನ್‌ ವಿಚಾರ ಮಾತನಾಡಿ, ಈ ರೀತಿ ವಾತಾವರಣದಿಂದ ಯಾವ ಸಾಧನೆ ಮಾಡಿದಂತಾಗುತ್ತದೆ? ಅಧಿಕಾರಕ್ಕಾಗಿ ರಕ್ತದೋಕುಳಿ ಅಡಬೇಕಾ? ಸಾಮರಸ್ಯ ಕೆಡಿಸಿ ಬದುಕುವುದಾದರೂ ಎಷ್ಟುದಿನ? ಹಿಜಾಬ್‌(Hijab) ಕುರಿತು ಕೋರ್ಟ್‌ ತೀರ್ಪಿನ ಬಗೆಗೆ ಮುಸಲ್ಮಾನರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಹೆಸರಿನಲ್ಲಿ ನಾಲ್ಕು ದಿನ ಅಧಿಕಾರ ಪಡೆಯಬಹುದು. ಆದರೆ ಇದು ಯಾರಿಗೂ ಶ್ರೇಯ ತರುವುದಿಲ್ಲ. ಜನರ ರಕ್ತದ ಮೇಲೆ ಅಧಿಕಾರ ಮಾಡಬೇಕಾದ ಪರಿಸ್ಥಿತಿ ಇದೆಯೇ? ಸಾವಿರಾರು ಜನರ ಸಮಾಧಿ ಮೇಲೆ ಯಾಕೆ ಧರ್ಮ ಕಟ್ಟುವ ಕೀಳು ಮನಸ್ಥಿತಿ ಯಾಕೆ ಬೇಕು? ಎಂದು ಪ್ರಶ್ನಿಸಿದರು.

ಹಿಜಾಬ್‌ ಕುರಿತು ಹೇಳುವ ಭರದಲ್ಲಿ ಸಿದ್ದರಾಮಯ್ಯ ಸ್ವಾಮೀಜಿಗಳ ಹೇಳಿಕೆಗೆ ನಾನು ಮಹತ್ವ ಕೊಡುವುದಿಲ್ಲ. ರಾಜ್ಯದ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕಲಾಪದದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಸಲಹೆ ನೀಡಿದ್ದೆ. ಆದರೆ ಸಿದ್ದರಾಮಯ್ಯ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ತಿಳಿಸುವ ಬದಲಾಗಿ ಸ್ವಾಮೀಜಿಗಳನ್ನು ಮಧ್ಯೆ ಎಳೆತಂದು ವಿಷಯದ ದಿಕ್ಕುತಪ್ಪಿಸಿದ್ದಾರೆ. ಇನ್ನು ಈ ವಿವಾದವನ್ನು ಮುಂದುವರಿಸುವ ಅಗತ್ಯವೇ ಇಲ್ಲ ಎಂದರು.

ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನ ಸಮಸ್ಯೆ ಉಂಟಾದಾಗ ದೇವೇಗೌಡರು ತೆಗೆದುಕೊಂಡ ನಿರ್ಧಾರದಿಂದ ಜನತೆ ನೆಮ್ಮದಿಯಿಂದ ಬದುಕುವಂತಾಯಿತು. ರಾಜ್ಯದಲ್ಲಿ ಮತ್ತೆ ಹಿಂದಿನ ಆತಂಕದ ವಾತಾವರಣ ನಿರ್ಮಿಸಲು ಕೆಲ ಸಂಘಟನೆಗಳು ಮುಂದಾದರೆ ಅದನ್ನು ಸರ್ಕಾರ ತಡೆಯಬೇಕು. ಬಿಜೆಪಿ ಸಂಘಟನಾತ್ಮಕ ದೃಷ್ಟಿಯಿಂದ ಏನಾದರೂ ಹೇಳಿಕೆ ಕೊಡಲಿ. ಆದರೆ ಆರೂವರೆ ಕೋಟಿ ಜನರ ಒಳಿತಿಗಾಗಿ ಇರುವ ಸರ್ಕಾರವಾಗಿ ನಾಡಿನ ನೆಮ್ಮದಿ ಕಾಪಾಡಬೇಕು ಎಂದರು.

ಮೋದಿ ಆಡಳಿತದಲ್ಲಿ ಜನ ಸಂಪತ್ಭರಿತರಾಗಿದ್ದಾರೆಂದು HDK ವ್ಯಂಗ್ಯ

ಬೆಂಗಳೂರು: ಪ್ರಧಾನಿ ಮೋದಿ (Narendra Modi) ಆಡಳಿತದಲ್ಲಿ ಜನ ಸಂಪತ್ ಭರಿತರಾಗಿದ್ದಾರೆ. ಹೀಗಾಗಿ ಜನ ಬೆಲೆ ಏರಿಕೆ (Price Hike) ಬಗ್ಗೆ ತಲೆಕೆಡಿಸಿಕೊಳ್ತಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ ಭರಿತವಾಗಿ ಮಾತಾಡಿದ್ದಾರೆ. 

Mekedatu project ತಮಿಳುನಾಡು ವಿಧಾನಸಭೆ ನಿರ್ಣಯಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ ಎಂದ HDK

ಬೆಲೆ ಏರಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು  ಬೆಲೆ ಏರಿಕೆ ಬಗ್ಗೆ ಈಗ ಜನ ಪ್ರತಿಭಟನೆ ಮಾಡ್ತಾ ಇಲ್ಲ. ನಾವು ಸಂಘಟನೆ ಮಾಡಿ ಹೋರಾಟ ಮಾಡಬೇಕಿದೆ ಎಂದ ಅವರು,ಜನ ಸ್ವಯಂ ಪ್ರೇರಣೆಯಿಂದ ಹೋರಾಟ ಮಾಡ್ತಾನೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನ ಇನ್ನೂ ಎಚ್ಚೆತ್ತುಕೊಳ್ಳದೆ ಇದ್ರೆ ಮುಂದೆನು ದುರಂತ ಕಾದಿದೆಯೊ ಗೊತ್ತಿಲ್ಲ ಆತಂಕ ವ್ಯಕ್ತಪಡಿಸಿದರು. ಜನರಿಗೆ ಬೆಲೆ ಏರಿಕೆ ವಿಚಾರವೇ ಬೇಡವಾಗಿದೆ. ನಮ್ಮದೇನೊ‌ ಕಿರು ದನಿಯಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಬಿಜೆಪಿ ಭಾವನಾತ್ಮಕ ವಿಚಾರದಲ್ಲಿ ರಾಜಕೀಯ:  

ಮುಸ್ಲಿಂ ವ್ಯಾಪಾರಸ್ಥರಿಗೆ (Muslim Traders)  ಅವಕಾಶ ನೀಡದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿಸ ಹೆಚ್ ಡಿ ಕುಮಾರಸ್ವಾಮಿ ಅವರು, ಬಿಜೆಪಿಯವರು (BJP) ಭಾವನಾತ್ಮಕ ವಿಚಾರ ತರ್ತಾರೆ ಎಂದು ನಾನು ಮೂರು ತಿಂಗಳ ಹಿಂದೆಯೆ ಹೇಳಿದ್ದೆ.ಮಂಗಳೂರಲ್ಲಿ ಹುಟ್ಟಿದ ವಿಷಯವನ್ನು ರಾಜ್ಯವ್ಯಾಪಿ ತರಲು ಹೊರಟಿದ್ದಾರೆ. ಇನ್ನು ಒಂದು ವರ್ಷದಲ್ಲಿ ಚುನಾವಣೆ ಅದರೊಳಗೆ ಇನ್ನು ಏನೆಲ್ಲಾ ಮಾಡ್ತಾರೊ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.  ಬಿಜೆಪಿ ಕೋಮು ಸಂಘರ್ಷದಿಂದ ರಾಜಕೀಯ ಲಾಭ ಪಡೆಯಲು ಹೊರಟಿದೆ ಎಂದು ಆರೋಪಿಸಿದ ಹೆಚ್ ಡಿಕೆ , ಬಿಜೆಪಿ ಮತ್ತು ಅಂಗಸಂಸ್ಥೆ (RSS) ಭಾವನಾತ್ಮಕ ವಿಚಾರಗಳನ್ಮು ಸಾರ್ವಜನಿಕವಾಗಿ ತೆಗೆದುಕೊಂಡು ಹೋಗುತ್ತಿದೆ ಎಂದು ಆರೋಪಿಸಿದರು.
 

click me!