ನಮಗೆ ಕೊಟ್ಟ ಕಿರುಕುಳ ಜನತೆ ಅನುಭವಿಸಬೇಕಿದೆ, ಹಿಂದೂ ಯುವಕರಿಗೆ ಕೈ ಮುಗಿದು ಮನವಿ ಮಾಡಿದ HDK

By Suvarna News  |  First Published Mar 29, 2022, 4:14 PM IST

* ಕರ್ನಾಟಕದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷ
* ಹಿಂದೂ ಯುವಕರಿಗೆ ಕೈ ಮುಗಿದು ಮನವಿ ಮಾಡಿದ ಎಚ್‌ಡಿಕೆ
* ಮಗೆ ಕೊಟ್ಟ ಕಿರುಕುಳ ರಾಜ್ಯದ ಜನತೆ ಅನುಭವಿಸಬೇಕಿದೆ ಎಂದ ಕುಮಾರಣ್ಣ


ವರದಿ: ಶರತ್ ಕಪ್ಪನಹಳ್ಳಿ

ಬೆಂಗಳೂರು, (ಮಾ.29): ಮುಸ್ಲಿಂ ವರ್ತಕರ ಅಂಗಡಿಗಳಲ್ಲಿ ಹೋಗಿ ವ್ಯಾಪರ (Muslim Traders) ಮಾಡದೇ ಕೇವಲ ಹಿಂದು ಅಂಗಡಿಗಳಿಗೆ ಹೋಗಿ ವ್ಯಾಪಾರ ವಹಿವಾಟು ಮಾಡಿ ಎಂದು ವಾಟ್ಸಪ್‌ ಗಳಲ್ಲಿ ಅಭಿಯಾನ ಶುರುವಾಗಿದ್ದು, ಇದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಈ ಬಗ್ಗೆ ಇಂದು(ಮಂಗಳವಾರ) ವಿಧಾನಸೌಧದಲ್ಲಿ ಮಾತನಾಡಿದ ಕುಮಾರಸ್ವಾಮಿ (HD Kumaraswamy), ಕೆಲ ಹಿಂದು  ಸಂಘಟನೆಗಳ ನಡುವಳಿಕೆ ಹಾಗೂ ರಾಜ್ಯ ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ್ರು. 

"

ಕರ್ನಾಟಕದಲ್ಲಿ ಧರ್ಮ ದ್ವೇಷ, ಸಿಎಂ ಬೊಮ್ಮಾಯಿಗೆ ಬುದ್ಧಿಜೀವಿಗಳಿಂದ ಮಹತ್ವದ ಪತ್ರ

ಇವರು ದೇಶ ಉಳಿಸುವವರಲ್ಲ... ಅಮಾಯಕರು ದೇಶ ಉಳಿಸಿದ್ರು. ಯುವಕರಿಗೆ ಹೇಳುತ್ತೇನೆ ಯಾರು ಯುವಕರು ಇದಕ್ಕೆ ಬಲಿಯಾಗಬೇಡಿ. ಇದರಿಂದ ನಿಮ್ಮ ಭವಿಷ್ಯ ರೂಪಿಸಲು ಆಗಲ್ಲ. ಹಿಂದು ಯುವಕರಿಗೆ ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ಅವರು ಮಣ್ಣಿಗೆ ಹೋಗುವವರು, ನಾವು ಮಣ್ಣಿಗೆ ಹೋಗುವವರೇ... ಕರ್ನಾಟಕ ಶಾಂತಿಯ ತೋಟ ಹಾಳು ಮಾಡಬೇಡಿ. ಇಂತಹ ವ್ಯಕ್ತಿಗಳನ್ನು ಕರ್ನಾಟಕದ ಜನರು ಬಹಿಷ್ಕಾರ  ಮಾಡಬೇಕು. ಬಹಿಷ್ಕಾರ ಮಾಡಿಲ್ಲಾಂದ್ರೆ ಮುಂದೆ ಕರ್ನಾಟಕಕ್ಕೆ ಒಳ್ಳೆಯ ದಿನಗಳು ಬರಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಸರ್ಕಾರದ ಇದ್ಯಾ ?
ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಈ ರಾಜ್ಯದಲ್ಲಿ ಸರ್ಕಾರ ಇದ್ಯಾ..? ಏನು ಮಾಡ್ತಿದೆ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ರು.

ಮುಖ್ಯಮಂತ್ರಿಗಳ ವಿರುದ್ಧ ಮಾತಾಡಿದ್ದಕ್ಕೆ ಒಬ್ಬನನ್ನು ಅರೆಸ್ಟ್ ಮಾಡಿದ್ರಿ...ಈ ರೀತಿಯ ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ. ಈ ರೀತಿಯಲ್ಲಿ ಪ್ರಚೋದನೆ ಮಾಡಿದ್ರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಅರೆಸ್ಟ್ ಮಾಡಿ ಎಂದು ಆಗ್ರಹಿಸಿದರು.

"

 ಈ ರೀತಿಯ ಪರಿಸ್ಥಿತಿ ಬರಲಿಕ್ಕೆ ಕಾಂಗ್ರೆಸ್ ಕಾರಣ
ಈಗ ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಬರಲಿಕೆ ಜೆಡಿಎಸ್ ಆಗಲಿ ಅಥವಾ ಕುಮಾರಸ್ವಾಮಿ ಕಾರಣ ಅಲ್ಲ. ಕಾಂಗ್ರೆಸ್ ಕಾರಣ ಎಂದು ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಈ ಕಾಂಗ್ರೆಸ್ ನಾಯಕರ ತೀರ್ಮಾನಗಳು ಮತ್ತು ನಮಗೆ ಕಾಂಗ್ರೆಸ್ ನವರು ಜೆಡಿಎಸ್ ಗೆ ಕೊಟ್ಟ ಕಿರುಕುಳ ಕಾರಣ. ಈ ನಾಡಿನ ಜನರು ಈ ಪರಿಸ್ಥಿತಿ ಅನುಭವಿಸಲಿಕ್ಕೆ ಒಂದು ಕಡೆ ಕಾಂಗ್ರೆಸ್... ಮತ್ತೊಂದು ಕಡೆ  ಬಿಜೆಪಿಯವರು ಕಾರಣ ಎಂದು ಗುಡುಗಿದರು.

ಯಾವ ಈದ್ಗಾ ಮೈದಾನದ ಹೆಸರಲ್ಲಿ ಹಲವಾರು ಮಕ್ಕಳನ್ನ ಬಲಿ ತಗೊಂಡ್ರಿ. ದೇವೇಗೌಡರು ಸಿಎಂ ಆಗೋತನಕ ಪ್ರತಿವರ್ಷ ಒಬ್ಬರು , ಇಬ್ಬರನ್ನ ಬಲಿ ಪಡೆಯುತ್ತಾ ಇದ್ದಿರಿ.. ಈದ್ಗಾ ವಿಚಾರವನ್ನ ದೇವೇಗೌಡರು ಸರಿ ಮಾಡಿದ್ರು. ಇವರು ಹೀಗೆ ಮಾಡಲು ಕಾಂಗ್ರೆಸ್ ಕಾರಣ. ಈ ಸರ್ಕಾರ ಬರಲು ಕಾಂಗ್ರೆಸ್ ಕಾರಣ ಎಂದು ವಾಗ್ದಾಳಿ ನಡೆಸಿದರು...

 ಅನೈತಿಕ ಸರ್ಕಾರ ಅಂತ ಮೊನ್ನೆ ಭಾಷಣ ಮಾಡ್ತಿರೋದು ನೋಡಿದೆ...ಯಾರಪ್ಪ ಕಾರಣ ಈ ಅನೈತಿಕ ಸರ್ಕಾರ ಬರೋದಕ್ಕೆ ಎರಡು ಬಾರಿನೂ ಕಾಂಗ್ರೆಸ್ ಗೆ ಬೆಂಬಲ ಕೊಟ್ಟಿದ್ದೇವೆ..ಈ ಬಾರಿ ನೀವೆ ಯಾರಾದರೂ ಸಿಎಂ ಆಗಿ ಎಂದು ಅವರ ಮುಖಕ್ಕೆ ಹೇಳಿದ್ರು ದೇವೆಗೌಡರು..ಇಂತಹ ಪರಿಸ್ಥಿತಿ ಉದ್ಭವ ಆಗಲು ಕಾಂಗ್ರೆಸ್ ನವರು. ನಮಗೆ ಕೊಟ್ಟ ಕಿರುಕುಳ ಈಗ ರಾಜ್ಯದ ಜನತೆ ಅನುಭವಿಸಬೇಕಿದೆ. ಕನ್ನಡಿಗರೇ ದಾರಿ ತಪ್ಪಬೇಡಿ. ದೇಶಕ್ಕೆ ಮಾಹನ್ ಸಂದೇಶ ಕಡೋಕೆ ಹೊರಟಿದ್ದಾರೆ ಎಂದರು.

ಹೊಟ್ಟೆಗೆ ತಿನ್ನೋಕೆ ಏನೂ ಕೊಡಬೇಡಿ ಸರ್ಕಾರದಿಂದ ಏನು ಕೊಡಬೇಡಿ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು  ದಿನಾ‌ ಸ್ಮರಿಸಿಕೊಳ್ಳಿ ..ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರ?. ದೇವಸ್ಥಾನ ಕಟ್ಟುವರು ಓಬಿಸಿ , ದಲಿತರು, ದೇವಸ್ಥಾನದ ಒಳಗೆ ಕೂತುಕೊಳ್ಳೋರು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು ಎಂದು ಟೀಕಿಸಿದರು. ಇದ್ರ ಬಗ್ಗೆ ಸದನದಲ್ಲಿ ಚರ್ಚೆ ಮಾಡ್ತೀನಿ ಎಂದ ಎಂದು ಹೇಳಿದರು.

click me!