ಬಿಜೆಪಿ ಕಾರ್ಯಕಾರಣಿ ವೇದಿಕೆಯಲ್ಲಿ ಹಂಪಿ ಕಲಾ ವೈಭವ: ವಿಜ​ಯ​ನ​ಗ​ರ​ದಿಂದಲೇ ಚುನಾ​ವಣಾ ರಣಕಹ​ಳೆ

By Girish Goudar  |  First Published Mar 29, 2022, 8:01 AM IST

*  10 ಎಕರೆ ಬಯಲಲ್ಲಿ ಟೆಂಟ್‌ ನಿರ್ಮಾಣ
*  ಏ.16, 17ಕ್ಕೆ ಹೊಸಪೇಟೆಯಲ್ಲಿ ಕಾರ್ಯಕಾರಿಣಿ
*  ಹಂಪಿ ವೈಭವ ಸೃಷ್ಟಿ 
 


ಕೃಷ್ಣ ಎನ್‌.ಲಮಾಣಿ

ಹೊಸಪೇಟೆ(ಮಾ.29):  ವಿಜಯನಗರದ(Vijayanagara) ನೆಲದಲ್ಲಿ ಏ.16, 17ರಂದು ನಡೆಯಲಿರುವ ಬಿಜೆಪಿ(BJP) ರಾಜ್ಯ ಕಾರ್ಯಕಾರಿಣಿ ಹಲವು ವಿಶೇ​ಷ​ತೆ​ಗ​ಳಿಗೆ ಸಾಕ್ಷಿ​ಯಾ​ಗ​ಲಿ​ದೆ. ಮಾಮೂ​ಲಿ​ಯಂತೆ ಹೋಟೆಲ್‌, ರೆಸಾರ್ಟ್‌ಗಳ ಬದಲು ಹಂಪಿಯ(Hampi) ಕಲಾ ವೈಭ​ವ​ವನ್ನು ಬಿಂಬಿ​ಸುವ ಜರ್ಮನ್‌ ಟೆಂಟ್‌ನ ಸಭಾಂಗ​ಣ​ ಹಾಗೂ ಭವ್ಯ ವೇದಿ​ಕೆ​ಯಲ್ಲಿ ಈ ಬಾರಿಯ ಕಾರ್ಯ​ಕಾ​ರಿಣಿ ನಡೆ​ಯ​ಲಿ​ದೆ.

Tap to resize

Latest Videos

undefined

ಹೊಸಪೇಟೆಯ(Hosapete) ಭಟ್ರಹಳ್ಳಿ ಆಂಜನೇಯ ದೇಗುಲ ಸಮೀ​ಪದ ಸುಮಾರು 10 ಎಕರೆ ಬಯಲು ಪ್ರದೇ​ಶ​ದಲ್ಲಿ ಕಾರ್ಯ​ಕಾ​ರಿ​ಣಿ​ಗೆಂದೇ ಅಗತ್ಯ ಸಿದ್ಧ​ತೆ​ಗ​ಳನ್ನು ನಡೆ​ಸ​ಲಾ​ಗು​ತ್ತಿದೆ. ಬೃಹತ್‌ ಹವಾನಿಯಂತ್ರಿತ ಜರ್ಮನ್‌ ಟೆಂಟ್‌ ನಿರ್ಮಿಸಲಾಗುತ್ತಿದ್ದು, ಇದ​ರೊ​ಳಗೆ ಕಾರ್ಯಕಾರಿಣಿಗಾಗಿ 80 ಅಡಿ ಉದ್ದ ಮತ್ತು 40 ಅಡಿ ಅಗಲದ ವೇದಿಕೆ ನಿರ್ಮಾಣಗೊಳ್ಳಲಿದೆ. ವೇದಿಕೆ ಹಿಂಭಾಗದಲ್ಲಿ 30 ಅಡಿ ಎತ್ತರದ ಬ್ಯಾಕ್‌ಡ್ರಾಪ್‌ ಇರಲಿದೆ. ಇದರಲ್ಲಿ ಹಂಪಿಯ ವಾಸ್ತು ಶಿಲ್ಪ ಅನಾ​ವ​ರ​ಣ​ಗೊ​ಳ್ಳ​ಲಿ​ದೆ. ಈ ಶಿಲ್ಪಗಳ ಮಧ್ಯೆ ಕಮಲದ ಚಿಹ್ನೆ ಕಂಗೊಳಿಸಲಿದೆ. ಹಂಪಿ ಉತ್ಸವ, ವಿಜಯನಗರ ಉತ್ಸವದಲ್ಲಿ ವಿಶೇಷ ವೇದಿಕೆ ನಿರ್ಮಿಸಿ ಮೆಚ್ಚು​ಗೆ​ಗೆ ಪಾತ್ರ​ವಾ​ಗಿ​ರುವ ಬೆಂಗಳೂರಿನ(Bengaluru) ಎಂ.ವಿ. ಕನ್ಸಲ್ಟಂಟ್‌ ಸಂಸ್ಥೆಯೇ ಬಿಜೆಪಿ ಕಾರ್ಯ​ಕಾ​ರಿ​ಣಿಯ ವೇದಿ​ಕೆ​ಯನ್ನೂ ನಿರ್ಮಿ​ಸಲಿದೆ. ಸದ್ಯ​ದಲ್ಲೇ ಸಂಸ್ಥೆಯ ತಂತ್ರಜ್ಞರು ಸ್ಥಳಕ್ಕೆ ಆಗ​ಮಿಸಿ, ವೇದಿಕೆ ನಿರ್ಮಾಣ ಕಾರ್ಯ​ ಆರಂಭಿ​ಸಲಿದ್ದಾ​ರೆ.

"

Karnataka BJP: ವಿಜಯನಗರಕ್ಕೆ ಒಲಿದ ಬಿಜೆಪಿ ಕಾರ್ಯಕಾರಣಿ ಯೋಗ

750 ಆಸನಗಳು:

ಹವಾನಿಯಂತ್ರಿತ ಜರ್ಮನ್‌ ಮಾದರಿಯ ಟೆಂಟ್‌ನಲ್ಲಿ 750 ಆಸನಗಳ ವ್ಯವಸ್ಥೆ ಇರ​ಲಿದೆ. ಇದ​ರಲ್ಲಿ ಗಣಾತಿಗಣ್ಯರಿಗೆ ಪ್ರತ್ಯೇ​ಕ ಕೊಠಡಿ, ಗ್ರೀನ್‌ ರೂಂ, ಭೋಜನಾಲಯ ಕೂಡ ಇರ​ಲಿದೆ. ಯುಗಾದಿ ಬಳಿಕ ವೇದಿಕೆ ನಿರ್ಮಾಣದ ಕಾಮಗಾರಿ ಆರಂಭಗೊಳ್ಳಲಿದ್ದು, 200ಕ್ಕೂ ಅಧಿಕ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಈ ಕಾರ್ಯ​ದಲ್ಲಿ ತೊಡ​ಗಿ​ಕೊ​ಳ್ಳ​ಲಿ​ದ್ದಾ​ರೆ.

ಸ್ಟಾಲ್‌ಗಳು:

ಸಭಾಂಗಣದ ಸುತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಪ್ರತಿಬಿಂಬಿಸುವ ಸ್ಟಾಲ್‌ಗಳೂ ಇರ​ಲಿವೆ. ಇವುಗಳಲ್ಲೂ ವಿಜಯನಗರದ ನೆಲದ ಕಲಾವೈಭವ, ಸೊಬಗು ಅನಾವರಣಗೊಳ್ಳಲಿದೆ. ನೂತನ ಜಿಲ್ಲೆಯಾದ ವಿಜ​ಯ​ನ​ಗ​ರ​ದಲ್ಲಿ ಬಿಜೆಪಿ ರಾಜ್ಯಕಾರ್ಯ​ಕಾ​ರಿಣಿ ನಡೆ​ಯು​ತ್ತಿ​ರು​ವುದು ಇದೇ ಮೊದ​ಲು. ಈ ಹಿನ್ನೆ​ಲೆ​ಯ​ಲ್ಲಿ ಈ ಬಾರಿ ಅದ್ಧೂರಿ ಹಾಗೂ ವಿಭಿ​ನ್ನ​ವಾಗಿ ಸಭಾಂಗ​ಣ​ವನ್ನು ನಿರ್ಮಿ​ಸ​ಲಾ​ಗು​ತ್ತಿ​ದೆ.

ವೇದಿಕೆ ಹೇಗಿರುತ್ತೆ? ಹಂಪಿ ವೈಭವ ಸೃಷ್ಟಿ:

ಹಂಪಿಯ ವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ತೇರು, ಸಾಸಿವೆಕಾಳು ಗಣಪ, ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯ, ವಿಜಯ ವಿಠ್ಠಲ ದೇಗುಲದ ಸಪ್ತಸ್ವರ ಹೊರಡಿಸುವ ಕಲ್ಲಿನ ಕಂಬಗಳು, ಉಗ್ರ ನರಸಿಂಹ ಸೇರಿ ವಿವಿಧ ಸ್ಮಾರಕಗಳ ಸೊಬಗು ವೇದಿಕೆಯಲ್ಲಿ ಕಂಗೊಳಿಸಲಿದೆ. ವೇದಿಕೆ ಸುತ್ತಲೂ ಕೃತಕ ಸ್ಮಾರಕಗಳನ್ನು ಸೃಷ್ಟಿ​ಸ​ಲಾ​ಗು​ತ್ತದೆ. ಈ ಭವ್ಯ ಸಭಾಂಗಣದಲ್ಲಿ ಎರಡು ದ್ವಾರಗಳಿರ​ಲಿ​ದ್ದು, ಅಲ್ಲೂ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಕಲಾ ಪ್ರಪಂಚ ಅನಾವರಣಗೊಳ್ಳಲಿ​ದೆ.

ವಿಜಯನಗರದ ನೆಲದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿರುವುದರಿಂದ ಹಂಪಿಯ ಕಲಾ ಸೌಂದ​ರ್ಯ​ವನ್ನು ವೇದಿಕೆ ಮತ್ತು ಸಭಾಂಗಣದ ಸುತ್ತ ಅನಾವರಣಗೊಳಿಸಲಾಗುವುದು ಅಂತ ಎಂ.ವಿ. ಕನ್ಸಲ್ಟಂಟ್‌ ಸಂಸ್ಥೆ ಬೆಂಗಳೂರು ಎಚ್‌.ವಿ. ವಾಸು ತಿಳಿಸಿದ್ದಾರೆ. 

ಈಗ ಸೋತರೂ, ಮುಂದೆ ಗೆಲುವು, ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್‌ ಅತೀ ಅಗತ್ಯ: ಬಿಜೆಪಿಗನ ಅಚ್ಚರಿಯ ಹೇಳಿಕೆ

ವಿಜ​ಯ​ನ​ಗ​ರ​ದಿಂದ ಚುನಾ​ವಣಾ ರಣಕಹ​ಳೆ​: ಆನಂದ್‌ ಸಿಂಗ್‌

ಹೊಸಪೇಟೆ: ಬಿಜೆಪಿ ರಾಜ್ಯ ವಿಧಾನಸಭೆ ಚುನಾವಣೆಗೆ(Karnataka Assembly Election) ವಿಜಯನಗರದಿಂದಲೇ ವಿಜಯೋತ್ಸವದ ರಣಕಹಳೆ ಮೊಳಗಿಸಲಾಗುವುದು. ನಾವು ಬೇರೆ ಪಕ್ಷ​ದ​ವ​ರಂತೆ ಚುನಾವಣೆ ಸಮಯದಲ್ಲಿ ದುಡ್ಡು ಕೊಟ್ಟು ಜನರನ್ನು ಕರೆತರುವುದಿಲ್ಲ. ನಾವು ಕಾರ್ಯಕರ್ತರ ಪಡೆಯನ್ನೇ ಕಟ್ಟುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದರು.

ಸೋಮ​ವಾ​ರ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿ(Hubballi) ನಂತರ ಇಲ್ಲಿ ಕಾರ್ಯಕಾರಿಣಿ ನಡೆ​ಸಲು ತೀರ್ಮಾನಿಸ​ಲಾ​ಗಿ​ದೆ. ಈ ಕಾರ್ಯ​ಕಾ​ರಿ​ಣಿ ಎರಡು ಬಾರಿ ಕೆಲ ಕಾರಣಗಳಿಂದಾಗಿ ಮುಂದೂಡಲಾಗಿದೆ. ಇದೀಗ ಏಪ್ರಿಲ್‌ನಲ್ಲಿ ನಡೆ​ಯ​ಲಿ​ರುವ ಕಾರ್ಯ​ಕಾ​ರಿ​ಣಿಗೆ 130ರಿಂದ 150 ಶೆಡ್‌ ನಿರ್ಮಾಣ ಮಾಡಲಾಗುವುದು. ಸರ್ಕಾರದ ಸಾಧನೆ, ಯೋಜನೆಗಳ ಬಗ್ಗೆ ಜಾಗೃತಿ, ವಸ್ತು ಪ್ರದರ್ಶನ, ಮಾಹಿತಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.
 

click me!