* ಕರ್ನಾಟಕದಲ್ಲಿ ಸಾಲು-ಸಾಲು ವಿವಾದಗಳು
* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ
* ಇದೇನಾ ನೀವು ಆಡಳಿತ ನಡೆಸುವ ರೀತಿ, ಬೊಮ್ಮಾಯಿ ವಿರುದ್ಧ ಎಚ್‌ಡಿಕೆ ಕೆಂಡ
ವರದಿ - ಸುರೇಶ್ ಎ ಎಲ್.
ಬೆಂಗಳೂರು, (ಏ.05): ರಾಜ್ಯದಲ್ಲಿ ಇತ್ತೀಚಿಗೆ ಕೋಮು ಸಾಮರಸ್ಯ ಕದಡುವ ರೀತಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರವಾಗಿ ಕಿಡಿಕಾರಿದ್ದಾರೆ. ರಾಮನ ಹೆಸರಿನಲ್ಲಿ ನೀವು ನಡೆಸುತ್ತಿರುವ ಈ ಚಟುವಟಿಕೆಗಳು ಯಾರಿಗೂ ಶೋಭೆ ತರುವಂತದ್ದಲ್ಲಾ, ಇಂತಾ ಕೃತ್ಯಗಳನ್ನು ನಡೆಸುವಂತಿದ್ದರೆ ರಾವಣನ ಹೆಸರನ್ನು ಇಟ್ಟುಕೊಳ್ಳಿ, ಆಗ ನಿಮ್ಮ ಅಜೆಂಡಾ ಗಳಿಗೆ ಸರಿ ಹೊಂದುತ್ತದೆ ಎಂದಿದ್ದಾರೆ.
ಸಂವಿಧಾನದ ಹೆಸರಿನಲ್ಲಿ, ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತೇನೆ ಎಂದು ಪ್ರಮಾಣವಚನ ತೆಗೆದುಕೊಂಡು ಇದೇನಾ ನೀವು ಆಡಳಿತ ನಡೆಸುವ ರೀತಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿ ಒಳಗೆ ಹೋಗಿದ್ದು ನೀವೇನಾ.? ನಿಮ್ಮ ಅಂಗಸಂಸ್ಥೆಯನ್ನು ಮೆಚ್ಚಿಸಲು ಇವೆಲ್ಲಾ ಮಾಡ್ತಿದೀರಾ.? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸಹಕಾರ ಕೊಡದಿದ್ರೆ ನಿಮ್ಮನ್ನು ಯಾರು ಮೂಸುತ್ತಿರಲಿಲ್ಲ, ಎಚ್‌ಡಿಕೆಗೆ ತಿವಿದ ರೇಣುಕಾಚಾರ್ಯ
ಬಹಳ ಹಿಂದಿನಿಂದಲೂ ದೇವಸ್ಥಾನ, ಮಸೀದಿ,ಚರ್ಚ್ ಗಳಲ್ಲಿ ಪ್ರಾರ್ಥನೆ ಹಾಕುವ ಪದ್ದತಿ ಇದೆ. ಆಗಿನಿಂದ ಇಲ್ಲದ್ದು ಈಗ ಹೊಸದಾಗಿ ಶಬ್ದ ಮಾಲಿನ್ಯ ಆಗ್ತಾ ಇದೆಯಾ.? ಹಲಾಲ್ ವಿಚಾರ ಮುಗಿಯಿತು ಅಂತಾ ಈಗ ಹೊಸದಾಗಿ ಅಜಾನ್ ವಿಚಾರ ತೆಗೆಯುತ್ತಿದ್ದೀರಾ.? ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಸಂಜೆ ಹೊತ್ತಿನಲ್ಲಿ ದೇವರ ನಾಮ ಹಾಡಿಕೊಂಡು ಗಂಟೆ ಭಾರಿಸುತ್ತಾ ಭಜನೆ ಮಾಡುತ್ತಾ ದೀಪ ಹಿಡಿದು ಊರಿನ ದಾರಿಗಳಲ್ಲಿ ಹೋಗ್ತಾ ಇದ್ದೆವು. ಆಗ ಗಂಟೆಗ ಸದ್ದಿಗೆ ರೋಮಾಂಚನ ಆಗ್ತಿತ್ತು. ಸಂಜೆ ಹೊತ್ತಿನಲ್ಲಿ ಸೆಕೆಂಡ್ ಶೋ ಸಿನಿಮಾ ಆರಂಭವಾಗುವ ವೇಳೆಯಲ್ಲಿ ನಮೋ ವೆಂಕಟೇಶ ಅಂತಾ ಹಾಡು ಹಾಕ್ತಾ ಇದ್ದರು. ಆ ಹಾಡು ಊರಿನಲ್ಲಿ ಎಲ್ಲಾ ಕಡೆ ಕೇಳ್ತಾ ಇತ್ತು. ಸಿನಿಮಾ ಆರಂಭವಾಗುತ್ತದೆ ಎಂಬುದಕ್ಕೆ ಅದು ಸಿಗ್ನಲ್ ಆಗಿತ್ತು. ಈಗ ಇವರಿಗೆ ಇದ್ದಕ್ಕಿದ್ದ ಹಾಗೇ ಶಬ್ದ ಮಾಲಿನ್ಯ ಆಗುತ್ತೆ ಅನಿಸಬಿಟ್ಟಿದೆ.ಎಂದು ಸರ್ಕಾರದ ವಿರುದ್ದ ಎಚ್ಡಿಕೆ ಕಿಡಿ ಕಾರಿದರು.
ಸಂಪ್ರದಾಯದ ಹೆಸರಿನಲ್ಲಿ ರಾಜ್ಯ ಹಾಳು ಮಾಡ್ತಾ ಇದೀರಾ?
ದೇವರ ನಾಮ ಹಾಕಿ ಮಕ್ಕಳನ್ನು ಬೇಗ ಏಳಿಸಿ ಸಂಜೆ ಆರು ಗಂಟಗೇ ದೇವರ ನಾಮ ಹಾಕಿ ಈ ಮುಖಾಂತರ ಸಮಾಜಕ್ಕೆ ಸಂದೇಶ ಕೊಡಬೇಕು ಆದರೆ ಈಗ ನೀವೇ ನಿಮ್ನ ಸಂಸ್ಕೃತಿಗೆ ಅವಮಾನ ಮಾಡಿಕೊಳ್ತಾ ಇದ್ದೀರಾ ಅಷ್ಟೆ ಆಗ ನಮೋ ವೆಂಕಟೇಶ ಅಂತ ಹಾಕೋವ್ರು ಟೆಂಟ್ ನಲ್ಲಿ ,ಆಗ ಶಬ್ದ ಮಾಲಿನ್ಯ ಕಾಣ್ತಾ ಇರಲಿಲ್ವಾ ಇದೇನು ಸಂಸ್ಕೃತಿನಾ, ದೇಶ ಕಟ್ಟೋವ್ರ ನೀವು ರಾಮನ ಹೆಸರಲ್ಲಿ ದೇಶ ಆಳು ಮಾಡಬೇಡಿ ಇದೆಲ್ಲದರ ಹಿಂದೆ ಪೊಲಿಟಿಕಲ್ ಅಜೆಂಡಾ ಇದೆ ನರೇಂದ್ರ ಮೋದಿ ಸಂಸತ್ ನಲ್ಲಿ ಅಡ್ಡ ಬೀಳ್ತಾರೆ ವಿಧಾನಸೌಧದ ಮುಂಬಾಗದಲ್ಲಿ ಬೊಮ್ಮಾಯಿ ನಮಸ್ಕಾರ ಮಾಡಿದ್ದಾ..? ಏನು ಮಾಡ್ತಾ ಇದ್ದೀರಾ ಬೊಮ್ಮಾಯಿಯವರೇ ಈ ರಾಜ್ಯಕ್ಕೆ ಬೆಂಕಿ ಇಡೋ ಕೆಲಸ ಮಾಡೋದಿಕ್ಕೆ ಅಡ್ಡಬಿದ್ರಾ ಅನೇಕರಿಗೆ ಬದುಕು ಕಟ್ಟಿಕೊಟ್ಟಿಲ್ಲ ಇದನ್ನು ಇಟ್ಟುಕೊಂಡಾ ಚುನಾವಣೆ ಮಾಡ್ತೀರಾ..? ಮೌನಿ ಬಾಬಗಳಾಗಿದ್ದೀರಾ ಏನು ಮಾಡಕಾಗ್ತಾ ಇಲ್ಲ ಈ ರಾಜ್ಯದಲ್ಲಿ ಸಿಎಂ ಇದಾರಾ ಅನ್ನೋದೆ ಡೌಟ್ ಸರ್ಕಾರ ಇದೆಯಾ ಅನ್ನೋದು ಡೌಟ್ ಯಾರೋ ನಡೆಸ್ತಾ ಇದ್ದಾರೆ ಸರ್ಕಾರನಾ ಎಂದು ಎಚ್ಡಿಕೆ ಕಿಡಿ ಕಾರಿದ್ದಾರೆ.
ತೆಲಂಗಾಣ ಸರ್ಕಾರ ಕರೆದಿದ್ದರಲ್ಲಿ ತಪ್ಪೇನಿದೆ.?
ತೆಲಂಗಾಣ ಸರ್ಕಾರದ ಮಂತ್ರಿ ಯೊಬ್ಬರು ,ರಾಜ್ಯದಲ್ಲಿನ ಕಂಪನಿಗಳಿಗೆ ಆಹ್ವಾನ ಕೊಟ್ಟಿದ್ದಾರೆ. ಇಂತಹಾ ಇಶ್ಯೂ ಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ ವಾಗುತ್ತೆ. ಹಾಗಾಗಿಯೇ ರಾಜ್ಯದ ಕಂಪನಿ ಗಳಿಗೆ ತೆಲಂಗಾಣ ಸರ್ಕಾರ ನಮ್ಮ ರಾಜ್ಯಕ್ಕೆ ಬನ್ನಿ ಸೂಕ್ತ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಆಹ್ವಾನ ಕೊಟ್ಟಿದೆ. ಇದರಲ್ಲಿ ತಪ್ಪೇನಿದೆ.? ಇದಕ್ಕೆ ರಾಜ್ಯದ ಮಂತ್ರಿಗಳು ಅವರ ಮೇಲೆ ಮುಗಿ ಬೀಳಲು ಹೊರಟಿದ್ದಾರೆ. ಮೊದಲು ನಿಮ್ಮ ಮನೆ ಸರಿಪಡಿಸಿಕೊಳ್ಳಿ, ನಿಮ್ಮ ಮನೆ ಸರಿ ಇದ್ದಿದ್ದರೆ ಇಂತಾ ಸ್ಥಿತಿ ಬರುತ್ತಾ ಇರಲಿಲ್ಲ.ಇನ್ವೆಸ್ಟ್ ಮೀಟ್ ಮಾಡಿ ಎಲ್ಲರನ್ನೂ ಬನ್ನಿ ಅಂತಾ ಕರೆಯೋದಷ್ಟೇ ಅಲ್ಲ,ಅವರಿಗೆ ಸೂಕ್ತ ವ್ಯವಸ್ಥೆ ಯನ್ನು ಕೂಡಾ ಮಾಡಿಕೊಡಬೇಕು. ಇಲ್ಲದಿದ್ರೆ ಇಂತಹಾ ಸ್ಥಿತಿ ಬರುತ್ತದೆ. ಎಂದಿದ್ದಾರೆ.