10 ಕೋಟಿ ರೂ ಹಣ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಗುರು-ಶಿಷ್ಯನ ನಡುವಿನ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.
ಬೀದರ್, (ಏ.07): ಬಸವಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಿರುವುದು ಮತಗಳನ್ನು ಹೊಡೆಯಲು 10 ಕೋಟಿ ಹಣ ಪಡೆದಿದ್ದಾರೆ ಎನ್ನುವ ಆರೋಪಕ್ಕೆ ಕುಮಾರಸ್ವಾಮಿ, ಜಮಿರ್ ಅಹ್ಮದ್ ಖಾನ್‌ಗೆ ತಿರುಗೇಟು ಕೊಟ್ಟಿದ್ದಾರೆ.
ಇಂದು (ಬುಧವಾರ) ಬಸವಕಲ್ಯಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಅಲ್ಲಾ ಮೇಲೆ ಗೌರವ ಇದ್ದರೆ 10 ಕೊಟಿ ಪಡೆದದ್ದನ್ನು ಸಾಬೀತು ಪಡಿಸಲಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಸವಾಲು ಹಾಕಿದರು.
undefined
ಜಮೀರ್ ಗೆಲ್ಲಿಸಲು ಹಣ ಕೊಟ್ಟಿದ್ಯಾರು?: ಎಚ್‌ಡಿಕೆ
ಜಮೀರ್ ಅಹ್ಮದ್ ಗೆ ಪಕ್ಷಕಟ್ಟುವುದು ಮುಖ್ಯವಲ್ಲ. ಯಾರ ಯಾರನ್ನೋ ಹಿಡಿದು ರಾಜಕಾರಣ ಮಾಡುವುದು ಮುಖ್ಯ. ಹಿಂದೆ ಚಾಮರಾಜನಗರದಲ್ಲಿ ಬಿಜೆಪಿ ಗೆಲ್ಲಿಸಲು ಇವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದೆವಾ? ಅಲ್ಲಾ ಮೇಲೆ ಗೌರವ ಇದ್ದರೆ 10 ಕೋಟಿ ಪಡೆದಿದ್ದು ಸಾಬೀತು ಪಡಿಸಲಿ. ದೇವರೇ ಎಲ್ಲರನ್ನೂ ನೋಡಿಕೊಳ್ಳುತ್ತಾನೆ ಎಂದರು.
ಉಪಚುನಾವಣೆಗಳಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷವೇ ಗೆಲುವು ಸಾಧಿಸುತ್ತದೆ. ಈ ಹಿಂದೆ ಕಾಂಗ್ರೆಸ್ ಕೂಡ ಎರಡು ಉಪಚುನಾವಣೆಯಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಕೂಡ ಹಣ ಚೆಲ್ಲಿ ಚುನಾವಣೆ ನಡೆಸಿತ್ತು. ಉಪಚುನಾವಣೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದು ಸಾಮಾನ್ಯ ಎಂದು ಹೇಳಿದರು.