'ಯುವಕರು ಕೆಲಸ ಕೇಳಿದ್ರೆ ಲಂಚ ಕೇಳ್ತಾರೆ, ಯುವತಿಯರು ಕೆಲಸ ಕೇಳಿದ್ರೆ ಮಂಚಕ್ಕೆ ಕರೀತಾರೆ'

By Suvarna News  |  First Published Apr 7, 2021, 7:59 PM IST

ಬೀದರ್​ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಬೀದರ್, (ಏ.07):  ಯುವಕರು ಕೆಲಸ ಕೇಳಿದರೆ ಲಂಚ ಕೇಳುತ್ತಾರೆ. ಯುವತಿಯರು ಕೆಲಸ ಕೇಳಿದರೆ ಮಂಚಕ್ಕೆ ಕರಿತಾರೆ. ಇಂತಹ ಲಂಚ, ಮಂಚದ ಸರ್ಕಾರ ಬೇಕಾ..? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬೀದರ್​ನ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಯಾವಾಗ ನಿಮ್ಮ ಓಟು ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ ಹಾಗೂ ಧರ್ಮಸಿಂಗ್ ಅವರಿಗೆ ಬಿತ್ತೋ ಆಗ ಕಲಂ 371 ಜಾರಿಗೆ ಬಂತು. ಆದರೆ ನಾವು ಇವತ್ತು ಎನಾದರೂ ಅನುದಾನ ಕೇಳಿದರೆ ಲಂಚ ಕೇಳ್ತಾರೆ. ಯುವಕ, ಯುವತಿಯರು ಕೆಲಸ ಕೇಳಿದರೆ ಮಂಚಕ್ಕೆ ಕರಿತಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ  ವಾಗ್ದಾಳಿ ನಡೆಸಿದರು.

Latest Videos

undefined

BSY ಮತ್ತು ವಿಜಯೇಂದ್ರಗೆ ಯತ್ನಾಳ್ ಮತ್ತೊಂದು ಸವಾಲು.. ನಿಜ ಬಣ್ಣ ಬಯಲು!

ಹೈದ್ರಾಬಾದ್ ಕರ್ನಾಟಕದ ಜನ ಆರ್ಟಿಕಲ್ 371ಜೆ ಗೆ ಬೇಡಿಕೆ ಇಟ್ಟಿದ್ರೋ ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಎಲ್ ಕೆ ಅಡ್ವಾಣಿ ಡೆಪ್ಯುಟಿ ಪ್ರೈಮ್ ಮಿನಿಸ್ಟರ್ ಆಗಿದ್ರು. ಆಗ ಲಿಖಿತ ರೂಪದಲ್ಲಿ ಬರೆದು ಕಳುಹಿಸುತ್ತಾರೆ ಆರ್ಟಿಕಲ್ 371 ಕೊಡಲು ಸಾಧ್ಯವಿಲ್ಲ ಅಂತ ತಿರಸ್ಕಾರ ಮಾಡಿ ಕಳಿಸ್ತಾರೆ ಎಂದು ಕಿಡಿಕಾರಿದರು.

click me!