ಗುಬ್ಬಿ ವಿಧಾನಸಭಾ ಅಖಾಡದಲ್ಲಿ ಮೆಗಾ ಟೆಸ್ಟ್ , ಮನವೊಲಿಕೆ ಕುಮಾರಸ್ವಾಮಿ ಕಸರತ್ತು

Published : May 27, 2022, 01:26 PM IST
ಗುಬ್ಬಿ ವಿಧಾನಸಭಾ ಅಖಾಡದಲ್ಲಿ ಮೆಗಾ ಟೆಸ್ಟ್ , ಮನವೊಲಿಕೆ ಕುಮಾರಸ್ವಾಮಿ ಕಸರತ್ತು

ಸಾರಾಂಶ

* ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಗೆ ಕರೆ ಮಾಡಿದ ಕುಮಾರಸ್ವಾಮಿ * ಅಸಮಧಾನಿತ ಶಾಸಕರ ಮನವೊಲಿಕೆ ಕುಮಾರಸ್ವಾಮಿ ಕಸರತ್ತು * ಕಾದು ನೋಡುವ ತಂತ್ರಕ್ಕೆ ಶರಣಾದ ಶಾಸಕ ಎಸ್.ಆರ್. ಶ್ರೀನಿವಾಸ್

ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು, (ಮೇ.26)
: ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Eletions 2023) ಹತ್ತಿರವಾಗುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಶುರುವಾಗಿವೆ. ಅದರಲ್ಲೂ ಜೆಡಿಎಸ್‌, ಪಕ್ಷದಿಂದ ಹೊರ ಹೋಗುತ್ತಿರುವವರನ್ನ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದೆ

ಹೌದು...ರಾಜ್ಯರ ಗಮನಸೆಳೆದಿರುವ ಗುಬ್ಬಿ ವಿಧಾನಸಭಾ ಅಖಾಡದಲ್ಲಿ ಮೆಗಾ ಟೆಸ್ಟ್ ಸಿಕ್ಕಿದೆ . ಜೆಡಿಎಸ್‌ನಿಂದ ಹೊರಗೆ ಕಾಲಿಟ್ಟಿರುವ ಶಾಸಕ ಎಸ್ . ಆರ್ ಶ್ರೀನಿವಾಸ್‌ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ಮಾಡಿದ್ದಾರೆ . ಜತೆಗೆ ಜೆಡಿಎಸ್‌ ಘೋಷಿತ ಅಭ್ಯರ್ಥಿ ಬಿ.ಎಸ್.ನಾಗರಾಜು ಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ . ಶಾಸಕ ಎಸ್.ಆರ್.ಶ್ರೀನಿವಾಸ್ ಬಹುಕಾಲದಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ . ಬಹಿರಂಗವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಗುಡುಗಿದ್ದರು . ಅಷ್ಟೇ ಅಲ್ಲದ ಗುಬ್ಬಿ ತಾಲ್ಲೂಕಿನ ಸಿ.ಎಸ್ ಪುರ ಮೂಲದ ಬಿ.ಎಸ್.ನಾಗರಾಜು ಎಂಬುವರನ್ನು  ಗುಬ್ಬಿ  ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದರು. ಆದರೆ , ಇದೀಗ ಚಿತ್ರಣ ಬದಲಾಗುವ ಸಾಧ್ಯತೆ  ಕಂಡುಬಂದಿದೆ .

Karnataka Politics ಎಚ್‌ಡಿಕೆ ಸರಿಯಾಗಿ ನಡೆಸಿಕೊಂಡಿದ್ರೆ ಯಾರು ಹೋಗ್ತಿರಲಿಲ್ಲ, ಜೆಡಿಎಸ್ ರೆಬೆಲ್ ಶಾಸಕ ಸಿಡಿಮಿಡಿ

 ಶ್ರೀನಿವಾಸ್‌ಗೆ ಎಚ್‌ಡಿಕೆ ಕರೆ
ಎಸ್.ಆರ್ . ಶ್ರೀನಿವಾಸ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಎಚ್‌.ಡಿ.ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ . ಶಾಸಕ  ಶ್ರೀನಿವಾಸ್ ಗೆ  ಎಚ್‌ಡಿಕೆ ಎರಡು ಬಾರಿ ಪೋನ್ ಕರೆ ಮಾಡಿದ್ದಾರೆಂದು ಖುದ್ದು ಎಸ್.ಆರ್.ಶ್ರೀನಿವಾಸ್‌ ತಿಳಿಸಿದ್ದಾರೆ. ಆದರೆ ಶ್ರೀನಿವಾಸ್ ಪಕ್ಷ ಉಳಿವ ಅಥವಾ ಬೇರೊಂದು ಪಕ್ಷಕ್ಕೆ ಸೇರ್ಪಡೆಯಾಗುವ  ವಿಚಾರದಲ್ಲಿ ಯಾವುದೇ ದೃಢ ನಿರ್ಧಾರ ತೆಗೆದುಕೊಂಡಿಲ್ಲ, ಡಿಸೆಂಬರ್‌ವರೆಗೆ ಕಾದುನೋಡುವುದಾಗಿ ತಿಳಿಸಿದ್ದಾರೆ
 
ಈ‌ ಹಿಂದೆ ಎಸ್ . ಆರ್.ಶ್ರೀನಿವಾಸ್  ಕಾಂಗ್ರೆಸ್ ಗೆ ಹೆಜ್ಜೆ ಹಾಕುವ ಸೂಚನೆ ಸಿಗುತ್ತಿದ್ದಂತೆ ಗುಬ್ಬಿಯಲ್ಲಿ ಬೃಹತ್ ಸಮಾವೇಶ ಮಾಡಿ ಬಿ.ಎಸ್.ನಾಗರಾಜು ಅವರನ್ನು ಪಕಕ್ಕೆ ಸೇರಿಸಿಕೊಂಡು  ಎಚ್. ಡಿ.ದೇವೇಗೌಡ , ಸಂಘಟನೆ ಹೊಣೆ ನೀಡಿ ಸ್ವತಃ ಎಚ್‌.ಡಿ.ಕುಮಾರ ಸ್ವಾಮಿ ಯವರೇ ಪಕ್ಷದ ಟಿಕೆಟ್ ಘೋಷಿಸಿದ್ದರು . ಅಂತೆಯೇ ನಾಗರಾಜು , ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ . 

ಈಗ  ಎಸ್.ಆರ್.ಶ್ರೀನಿವಾಸ್‌ಗೆ ಎಚ್.ಡಿ.ಕೆ ಕರೆ ಮಾಡಿರುವುದು ಗೊತ್ತಾಗುತ್ತಿದ್ದಂತೆ ಸಂಚಲನ ಸೃಷ್ಟಿಯಾಗಿದೆ . ಕೂಡಲೇ ನಾಗರಾಜು ಎಚ್‌ಡಿಕೆಗೆ ಕರೆ ಮಾಡಿದ್ದು , ಎಚ್‌ಡಿಕೆ ನಾಗರಾಜುಗೆ ಅಭಯ ನೀಡಿ ಸಂಘಟನೆ ಕೆಲಸವನ್ನು ಮುಂದುವರೆಸುವಂತೆ ತಿಳಿಸಿದ್ದಾರಂತೆ . ಹೀಗೆ ಎಚ್‌.ಡಿ.ಕುಮಾರಸ್ವಾಮಿ ಎಸ್.ಆರ್.ಶ್ರೀನಿವಾಸ್‌ಗೆ ಕರೆ ಮಾಡಿರುವುದು ಹಾಗೂ ಬಿ.ಎಸ್.ಹಾಗರಾಜುಗೂ ಸಂಘಟನೆ ಕೆಲಸ ಆಸೆಯನ್ನು ಮುಂದುವರೆಸಲು ತಿಳಿಸಿ ಟಿಕೆಟ್ ಜೀವಂತವಾಗಿರಿಸುವ ಮೂಲಕ ಗೊಂದಲ ಸೃಷ್ಟಿ ಮಾಡಿದ್ದಾರೆ .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್