ಸಿದ್ದು ಅವ​ಧಿ​ಯಲ್ಲಿ ಸಾಲ​ಮನ್ನಾ ಅಕ್ರ​ಮ: ಎಚ್‌​ಡಿ​ಕೆ ಆರೋಪ!

By Kannadaprabha NewsFirst Published Oct 10, 2020, 7:51 AM IST
Highlights

ಸಿದ್ದು ಅವ​ಧಿ​ಯಲ್ಲಿ ಸಾಲ​ಮನ್ನಾ ಅಕ್ರ​ಮ: ಎಚ್‌​ಡಿ​ಕೆ| ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಆಗ್ರಹ| ನನ್ನ ಅವ​ಧಿ​ಯಲ್ಲಿ ಅವ್ಯವಹಾರ ಆಗಿ​ಲ್ಲ

ಬೆಂಗಳೂರು(ಅ.10): ‘ರೈತರ ಸಾಲ ಮನ್ನಾ ವಿಚಾರ ಸಂಬಂಧ ನನ್ನ ಆಡಳಿತಾವಧಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಅವ್ಯವಹಾರವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಲಮನ್ನಾ ಯೋಜನೆಯನ್ನು ಸಹಕಾರಿ ಬ್ಯಾಂಕ್‌ಗಳು ರೈತರಿಗೆ ತಲುಪಿಸಬೇಕು. ಸಿದ್ದರಾಮಯ್ಯ ಕಾಲದಲ್ಲಿ ಸಾಲಮನ್ನಾ ಯೋಜನೆಯಲ್ಲಿ ಅವ್ಯವಹಾರವಾಗಿದೆ. ಕೆಲವು ಸಹಕಾರ ಬ್ಯಾಂಕ್‌ಗಳು ಅವ್ಯವಹಾರ ನಡೆಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

"

‘ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜಕೀಯ ಮಾಡುತ್ತಾ ಕುಳಿತಿರಲಿಲ್ಲ. ಪ್ರಾಮಾಣಿಕವಾಗಿ ರೈತರ ಸಾಲಮನ್ನಾ ಮಾಡಲಾಗಿದೆ. ಅಧಿಕಾರಿಗಳ ಜತೆ ಚರ್ಚೆ ಮಾಡಿ ಕೆಲವು ದಾಖಲಾತಿ ನಿಗದಿಪಡಿಸಲಾಗಿತ್ತು. ಅದರಂತೆಯೇ ರೈತರು ದಾಖಲಾತಿ ನೀಡಿ ಸಾಲಮನ್ನಾ ಪಡೆದರು. ಕೆಲವರು ಕೊಡದೆ ಓಡಿ ಹೋದರು. ರೈತರಿಗೆ ಪ್ರಾಮಾಣಿಕ ಯೋಜನೆ ತಲುಪಿಸಬೇಕು ಎಂಬ ಉದ್ದೇಶದಿಂದ ಕ್ರಮ ಕೈಗೊಂಡಿದ್ದ ಕಾರಣ ಯಾವುದೇ ಅವ್ಯವಹಾರವಾಗಿಲ್ಲ. ಆದರೆ, ಸಿದ್ದರಾಮಯ್ಯ ಆಡಳಿತದಲ್ಲಿ ಮಧ್ಯವರ್ತಿಗಳ ಹಾವಳಿ, ಕೆಲ ಬ್ಯಾಂಕ್‌ಗಳಿಂದ ಅವ್ಯವಹಾರವಾಗಿದೆ. ಇದರಲ್ಲಿ ಕೆಲವು ರಾಜಕಾರಣಿಗಳ ಕೈವಾಡವೂ ಇದೆ. ಕೂಲಂಕಷವಾಗಿ ತನಿಖೆ ನಡೆಸಿದರೆ ಸತ್ಯ ಬೆಳಕಿಗೆ ಬರಲಿದೆ’ ಎಂದರು.

click me!