ಕುಮಾರಸ್ವಾಮಿ-ಸುಮಲತಾ ಮಾತಿನ ಸಮರಕ್ಕೆ ದೇವೇಗೌಡ್ರ ಮೊದಲ ಪ್ರತಿಕ್ರಿಯೆ

By Suvarna NewsFirst Published Jul 7, 2021, 4:52 PM IST
Highlights

* ಎಚ್‌ಡಿ ಕುಮಾರಸಸ್ವಾಮಿ ಹಾಗೂ ಸುಮಲತಾ ಮಾತಿನ ಸಮರ
* ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಪ್ರತಿಕ್ರಿಯೆ
* ಸುಮಲತಾ ಏನಾದರೂ ಜ್ಯೋತಿಷಿಯೇ ? ಎಂದ ಎಚ್‌ಡಿಡಿ

ಬೆಂಗಳೂರು, (ಜುಲೈ. 07): ಕೆಆರ್‌ಎಸ್ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮಧ್ಯೆ ಮಾತಿನ ಸಮರ ತಾರಕಕ್ಕೇರಿದೆ.

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಪ್ರತಿಕ್ರಿಯಿಸಿದ್ದು, ಸುಮಲತಾ ಏನಾದರೂ ಜ್ಯೋತಿಷಿಯೇ ? ಜ್ಯೋತಿಷಿಯಾಗಿ ಹೇಳಿದ್ದರೆ ತುಂಬಾ ಸಂತೋಷ.. ಆ ಯಮ್ಮನ ಬಗ್ಗೆ ನನ್ನ ಬಳಿ ಯಾಕೆ ಮಾತನ್ನಾಡ್ತೀರಿ..? ಎಂದು ಸುಮಲತಾ ಬಗ್ಗೆ ದೇವೇಗೌಡ ಟಾಂಗ್ ಕೊಟ್ಟರು.

ಸುಮಲತಾ ವಿರುದ್ಧ ರಾಜಕೀಯ ರಣಕಹಳೆ ಮೊಳಗಿಸಿದ ಕುಮಾರಸ್ವಾಮಿ

ನನಗೆ ಎಲ್ಲಾ ವಿಷಯ ಗೊತ್ತಿದೆ. ಆದ್ರೆ ಈ ಬಗ್ಗೆ ನಾನು ಹೆಚ್ಚಿಗೆ ಏನೂ ಮಾತನ್ನಾಡುವುದಿಲ್ಲ. ಇದರಲ್ಲಿ ನಾನು ಮಧ್ಯಪ್ರವೇಶಿಸುವುದೂ ಇಲ್ಲ. ಇಡೀ ಮಂಡ್ಯ 2023 ಹಾಗೂ 2024ಕ್ಕೆ ಏನಾಗಲಿದೆ? ಮುಂದೆ ಕರ್ನಾಟಕದಲ್ಲಿ ಏನಾಗಲಿದೆ ಅನ್ನೋದನ್ನ ಇಲ್ಲಿ ಕುಳಿತು ಹೇಳಲು ಸಾಧ್ಯವಿಲ್ಲ ಎಂದರು.

ಅಕ್ರಮ ಗಣಿಗಾರಿಕೆಯಿಂದ ಡ್ಯಾಂ ಬಿರುಕು ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅಕ್ರಮ ಗಣಿಗಾರಿಕೆ ವಿಷಯ ಗೊತ್ತಿದೆ. ಅದರ ಬಗ್ಗೆ ಈಗ ಯಾಕೆ ಚರ್ಚೆ? ಇದರ ಬಗ್ಗೆ ಯಡಿಯೂರಪ್ಪ ಸರ್ಕಾರದಲ್ಲಿ ದೊಡ್ಡ ಚರ್ಚೆಯಾಗಿದೆ. ಕ್ರಮಕೈಗೊಳ್ಳುವುದಾಗಿ ಭರವಸೆಯನ್ನೂ ನೀಡಿದ್ದಾರೆ ಎಂದು ಹೇಳಿದರು.

ಇನ್ನು ಇದೇ ವೇಳೆ ಪಕ್ಷ ಸಂಘಟನಾ ಸಭೆ ಬಗ್ಗೆ ಪ್ರತಿಕ್ರಿಯಿಸಿ, ನಾನು ನಾಲ್ಕು ತಿಂಗಳಿನಿಂದ ಪಕ್ಷದ ಕಚೇರಿಗೆ ಬರಲು ಸಾಧ್ಯವಾಗಿರಲಿಲ್ಲ ಈಗ ಪಕ್ಷದ ಕಚೇರಿಗೆ ಬಂದಿದ್ದೇನೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ನನ್ನ ಅಭಿಪ್ರಾಯವನ್ನ ಮಂಡಿಸುತ್ತೇನೆ ಎಂದರು.

click me!