ಬಿಜೆಪಿ ನಿರ್ಧಾರವನ್ನು ಖಡಕ್ ವಿರೋಧಿಸಿದ ದೇವೇಗೌಡ್ರು

By Suvarna News  |  First Published Dec 15, 2020, 12:31 PM IST

ಬಿಜೆಪಿಯ ಈ ನಿರ್ಧಾರವನ್ನು ಖಡಕ್ ಆಗಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು ವಿರೋಧಿಸಿದ್ದಾರೆ. ಇದಕ್ಕೆ ತಮ್ಮ ಬೆಂಬಲ ಇಲ್ಲವೆಂದು ಹೇಳಿದ್ದಾರೆ. 


ಬೆಂಗಳೂರು (ಡಿ.15):  ಗೋ ಹತ್ಯಾ ನಿಷೇಧ ವಿಧೇಯಕ ವನ್ನು ಜೆಡಿಎಸ್ ವಿರೋಧಿಸುತ್ತದೆ. ಎಂದಿಗೂ ಇದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಹಿರಿಯ ಮುಖಂಡ ಎಚ್ ಡಿ ದೇವೇಗೌಡ ಹೇಳಿದ್ದಾರೆ.

2010 ರಲ್ಲಿ ಬಿಜೆಪಿ ಸರ್ಕಾರ ಈ ಕಾಯ್ದೆ ಜಾರಿಗೆ ಮುಂದಾಗಿತ್ತು. ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ತರಲು ಹೊರಟಿದ್ದಕ್ಕೆ ನಾವು ವಿರೋಧ ಮಾಡಿದ್ದೆವು ಎಂದು ದೇವೇಗೌಡ ಹೇಳಿದ್ದಾರೆ. 

Tap to resize

Latest Videos

ಆ ನಾಯಕನನ್ನು ಭೇಟಿ ಮಾಡಿದ ಸಾ.ರಾ.ಮಹೇಶ್ : ಏನಿದು ಕುತೂಹಲದ ರಾಜಕೀಯ..? .

 ರಾಜ್ಯಪಾಲರು, ಹಾಗೂ ರಾಷ್ಟ್ರಪತಿ ಗಳಿಗೆ ಪತ್ರ ಬರೆದು ಈ ಮಸೂದೆಗೆ ಒಪ್ಪಿಗೆ ನೀಡಬಾರದು ಎಂದು ಮನವಿ ಮಾಡಿದ್ದೆವು. ನಂತರ ಸರ್ಕಾರ ಬದಲಾಗಿ ಈ ಮಸೂದೆ ವಾಪಸ್ ಪಡೆಯಲಾಗಿತ್ತು.

ಈಗ ಮತ್ತೊಮ್ಮೆ ರಾಜ್ಯದಲ್ಲಿ  ಗೋ ಹತ್ಯಾ ನಿಷೇಧದ ಮಸೂದೆಯನ್ನು ತರಲು ಬಿಜೆಪಿ ಸರ್ಕಾರ ಹೊರಟಿದೆ. ಇದಕ್ಕೆ ಜೆಡಿ ಎಸ್ ಪಕ್ಷ ದ ವಿರೋಧವಿದೆ ಎಂದು ಎಚ್ ದೇವೇಗೌಡರು ಹೇಳಿಕೆ ನೀಡಿದ್ದಾರೆ.  

click me!