ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಹ ಮತ್ತೊಂದು ಘಟನೆ ನಡೆದಿದೆ. ರಾಯಚೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯತ್ವ ಸ್ಥಾನವನ್ನು ಹರಾಜು ಪ್ರಕರಣದಲ್ಲಿ ದೂರು ದಾಖಲಾಗಿದೆ.
ರಾಯಚೂರು, (ಡಿ.14): ರಾಜ್ಯದಲ್ಲಿ ಡಿಸೆಂಬರ್ 23 ಮತ್ತು 27 ರಂದು ಎರಡು ಹಂತದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತ್ತೊಂದೆಡೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಹ ಘಟನೆಗಳು ನಡೆಯುತ್ತಿವೆ.
ಹೌದು...ರಾಜ್ಯದ ಹಲವು ಗ್ರಾಮಗಳಲ್ಲಿ ಪಂಚಾಯಿತಿ ಸದಸ್ಯರನ್ನು ಹರಾಜು ಪ್ರಕ್ರಿಯೆಗಳು ನಡೆಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಡತ್ತಿದೆ.
undefined
ರಾಯಚೂರು ಜಿಲ್ಲೆಯಲ್ಲೂ ಒಂದು ಗ್ರಾಮದಲ್ಲಿ ಪಂಚಾಯಿತಿ ಸದಸ್ಯತ್ವ ಹರಾಜು ನಡೆದಿದ್ದು, ಈ ಬಗ್ಗೆ 9 ಜನರ ವಿರುದ್ಧ ದೂರು ದಾಖಲಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಯಾವೆಲ್ಲಾ ದಾಖಲೆಗಳು ಬೇಕು? ಇಲ್ಲಿದೆ ನೋಡಿ..
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಇ.ಜೆ.ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ದುರುಗಮ್ಮ ದೇವಾಸ್ಥಾನದಲ್ಲಿ ಅವಿರೋಧ ಆಯ್ಕೆ ಮಾಡುವ ಸಂಬಂಧ 10,00,000 ರೂ.ಗಳಿಗೆ ಬಹಿರಂಗ ಹರಾಜು ನಡೆಸಲಾಗಿತ್ತು. ಇದರ ವಿಡಿಯೋ ವೈರಲ್ ಗೊಂಡಿತ್ತು.
ಚುನಾವಣೆ ನೀತಿ ವಿರೋಧ ಕಾರ್ಯ ಹಿನ್ನೆಲೆಯಲ್ಲಿ 9 ಜನರ ವಿರುದ್ಧ ಸಿಂಧನೂರು ತಾಪಂ ಇಒ ಬಾಬು ರಾಠೋಡ್ ಅವರು ನೀಡಿದ ದೂರಿನ ಮೇರೆಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಹರಾಜು ಮೂಲಕ ಅವಿರೋಧವಾಗಿ ಆಯ್ಕೆಗೊಂಡವ ಬಗ್ಗೆ ಚುನಾವಣೆ ಆಯೋಗ ಗಂಭೀರವಾಗಿದ್ದು, ಅಂತ ಸದಸ್ಯತ್ವವನ್ನು ರದ್ದುಗೊಳಿಸುವುದಾಗಿ ಚುನಾವಣೆ ಆಯೋಗ ಖಡಕ್ ಆಗಿ ಹೇಳಿದೆ.