ಕಮಲ್‌ರಿಂದ ತಮಿಳುನಾಡು ರಾಜಕಾರಣದ ದಿಕ್ಕು ಬದಲಿಸುವ ಘೋಷಣೆ!

Published : Dec 14, 2020, 09:47 PM IST
ಕಮಲ್‌ರಿಂದ ತಮಿಳುನಾಡು ರಾಜಕಾರಣದ ದಿಕ್ಕು ಬದಲಿಸುವ ಘೋಷಣೆ!

ಸಾರಾಂಶ

ತಮಿಳುನಾಡಿನ ರಾಜಕಾರಣಕ್ಕೆ ಸಂಬಂಧಿಸಿ ಕಮಲ್ ಮಹತ್ವದ ಘೋಷಣೆ/ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ/ ಮೈತ್ರಿ ಬಗ್ಗೆ ಗುಟ್ಟು ಬಿಡದ ಕಮಲ್/ ತಮಿಳುನಾಡಿನಲ್ಲಿ ಗರಿಗೆದರುತ್ತಿರುವ ರಾಜಕಾರಣ 

ಚೆನ್ನೈ (ಡಿ. 14) ನೂತನ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದಕ್ಕೆ ತಕರಾರು ತೆಗೆದಿದ್ದ ಕಮಲ್ ಹಾಸನ್ ಇದೀಗ ಪಕ್ಕಾ ರಾಜಕಾರಣದ ಮಾತುಗಳನ್ನು ಆಡಿದ್ದಾರೆ.

ಮಕ್ಕಳ್ ನೀದಿ ಮೈಯಂ ಪಕ್ಷದ ಸ್ಥಾಪಕ, ದಕ್ಷಿಣ ಭಾರತದ ಹೆಸರಾಂತ ನಟ ಕಮಲ್ 2021 ರ ತಮಿಳುನಾಡು ವಿಧಾನಸಭಾ  ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. 

ಮೋದಿಗೆ ಸವಾಲು ಹಾಕಿದ ಕಮಲ್... ಹೊಸ ಸಂಸತ್ ಭವನ ಬೇಕಿತ್ತಾ? 

ಏಕಾಂಗಿ ಹೋರಾಟಕ್ಕೆ ಮುಂದಾದ ಕಮಲ್ ಹಾಸನ್ ಸುದ್ದಿಗಾರೊಂದಿಗೆ ಮಾತನಾಡಿದ ಕಮಲ್ ವಿಚಾರವನ್ನು ತಿಳಿಸಿದರು. ಈಗಾಗಲೇ ತಮಿಳುನಾಡಿನಲ್ಲಿ ರಾಜಕಾರಣ ಕಳೆಕಟ್ಟುತ್ತಿದ್ದು ಅಲ್ಲಲ್ಲಿ ಮೈತ್ರಿಯ ಮಾತುಗಳು ಕೇಳಿಬಂದಿವೆ. ಕಮಲ್ ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎಂಬುದನ್ನು ಸ್ಪಷ್ಟ ಮಾಡಿಲ್ಲ.

ಫೆಬ್ರವರಿ 21, 2018ರಂದು ಕಮಲ್ ತಮ್ಮ ಪಕ್ಷವನ್ನು ಲೋಕಾರ್ಪಣೆ ಮಾಡಿದ್ದರು. ಮುಂದಿನ ವಿಧಾನಸಭಾ ಚುನಾವಣೆಗೆ ಓವೈಸಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಮಾತುಗಳು ರಾಝಕಾರಣದ ವಲಯದಲ್ಲಿ ಕೇಳಿಬಂದಿದ್ದು ಯಾವುದು ಸ್ಪಷ್ಟವಾಗಿಲ್ಲ. 

ಮಿಳುನಾಡಿನಲ್ಲಿಯೂ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ.  ಮಕ್ಕಳ್ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್  ಸಹ ಈ ಬಾರಿ ಅದೃಷ್ಟ ಪರೀಕ್ಷೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿತ್ತು. ಇನ್ನೊಂದು ಕಡೆ  ರಜನೀಕಾಂತ್ ಸಹ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರೆ ಬಿಜೆಪಿ ನಿರಂತರವಾಗಿ ಪಕ್ಷ ಸಂಘಟನೆ ಕೆಲಸ ಮಾಡುತ್ತಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?