ಕೆಲಸ ಮಾಡಿದ್ದೇನೆ, ಕೂಲಿ ಕೊಡಿ : ದೇವೇಗೌಡ

By Kannadaprabha NewsFirst Published Oct 26, 2021, 7:19 AM IST
Highlights
  • ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನನ್ನ ಪಕ್ಷ ಉಳಿಸಿಕೊಳ್ಳಲು ಹೋರಾಡುತ್ತೇನೆ. 
  • ಕೂಲಿ ಕೊಡಿ ಎಂದು ಕೇಳಲು ಬಂದಿದ್ದೇನೆ ಎಂದ ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ 

ವಿಜಯಪುರ (ಅ.26):  ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನನ್ನ ಪಕ್ಷ ಉಳಿಸಿಕೊಳ್ಳಲು ಹೋರಾಡುತ್ತೇನೆ. ಕೆಲಸ ಮಾಡಿದ್ದೇನೆ, ಕೂಲಿ ಕೊಡಿ ಎಂದು ಕೇಳಲು ಬಂದಿದ್ದೇನೆ ಎಂದು ಜೆಡಿಎಸ್‌ (JDS) ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda) ಹೇಳಿದರು.

ಸೋಮವಾರ ನಗರದಲ್ಲಿ ಹಾಸನಕ್ಕೆ ಹೋಗುವ ಮುನ್ನ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹಾಸನದಿಂದ ನಾಳೆ ಮತ್ತೆ ವಿಜಯಪುರಕ್ಕೆ (Vijayapura) ಮರ​ಳು​ತ್ತೇ​ನೆ. ಇನ್ನೂ ಎರಡು ದಿನಗಳ ಕಾಲ ಸಿಂದಗಿ (Sindagi) ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತೇನೆ ಎಂದರು.

ತುಮಕೂರಲ್ಲಿ ಗೌಡರ ಸೋಲಿಗೆ ಕಾರಣ JDS ಮುಖಂಡ : ಎಚ್‌ಡಿಕೆ

ಕೆಲವರು ನಮ್ಮ ಪಕ್ಷ ಮುಗಿಸಿಯೇ ಬಿಡುತ್ತಾರೆ ಎಂದು ಹೇಳುತ್ತಿದ್ದಾರೆ. ಅವರು ಜೆಡಿಎಸ್‌ ಮುಗಿಸುತ್ತಾರೆಯೋ ಇಲ್ಲವೋ ಎಂಬುವುದನ್ನು ನೋಡಲು ಇಲ್ಲಿಗೆ ಬಂದಿದ್ದೇನೆ ಎಂದು ವಿರೋಧಿಗಳಿಗೆ ಸವಾಲು ಎಸೆದ ಅವರು, ಮಹಾನುಭಾವರು ನಾವು ಇಲ್ಲದಿದ್ದರೆ ಪಕ್ಷ ಇಲ್ಲ ಎಂದು ಹೇಳುತ್ತಾರೆ. ಅಂತ​ಹ​ವ​ರು ಬಿಜೆಪಿ, ಕಾಂಗ್ರೆಸ್‌ (Congress) ಕಡೆಗೆ ಹೋಗಿದ್ದಾರೆ. ಅವರು ಯಾರ ಹತ್ತಿರ ಬರುತ್ತಾರೆಯೋ ಇಲ್ಲವೋ ಅದು ನನಗೆ ಸಂಬಂಧವಿಲ್ಲ ಎಂದು ತಿಳಿಸಿದರು.

ನನ್ನ ಪಕ್ಷ ಉಳಿಸಿಕೊಳ್ಳಲು ಹೋರಾಡುತ್ತೇನೆ. 45 ವರ್ಷದ ದುಡಿಮೆ ಇದೆ. 89 ವರ್ಷದ ವ್ಯಕ್ತಿ ಮನೆ ಬಾಗಿಲಿಗೆ ಬಂದು ಮತ ಭಿಕ್ಷೆ ಕೇಳುತ್ತಿದ್ದಾನೆ ಎಂದು ಮತದಾರರಿಗೆ ಕನಿಕರ ಬರುತ್ತದೆ. ಅದರಿಂದ ಒಳ್ಳೆಯ ಫಲ ಬರುವ ನಿರೀಕ್ಷೆ ಇದೆ ಎಂದರು.

ಜೆಡಿಎಸ್‌ ಪಕ್ಷ ಉಳಿಸಲು 2023ರವರೆಗೂ ಕೆಲಸ ಮಾಡುತ್ತೇನೆ. ಮನೆಯಲ್ಲಿ ಕೂಡಲ್ಲ. 30 ಜಿಲ್ಲೆ ಸುತ್ತಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ಪ್ರಾದೇಶಿಕ ಪಕ್ಷವನ್ನು ಉಳಿಸಬೇಕಿದೆ ಎಂದರು.

ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ

ಕಾಂಗ್ರೆಸ್ಸಿಗೆ (Congress) ಯೋಗ್ಯ ಅಭ್ಯರ್ಥಿ ಸಿಗದೆ ಜೆಡಿಎಸ್‌ (JDS) ಅಭ್ಯರ್ಥಿಯನ್ನು ತೆಗೆದುಕೊಂಡು ಹೋಗಿದೆ. ಅದು ನಂಬಿಕೆ ದ್ರೋಹಿಗಳ ಪಕ್ಷ ಎಂದು ಶಾಸಕ ಎಚ್‌.ಡಿ.ರೇವಣ್ಣ (Revanna) ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜೆಡಿಎಸ್‌ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ. ಸೂಟ್‌ಕೇಸ್‌ ಸಂಸ್ಕೃತಿ ಜೆಡಿಎಸ್‌ಗೆ ಬೇಕಿಲ್ಲ. ಅದು ಕಾಂಗ್ರೆಸ್‌ ಸಂಸ್ಕೃತಿ ಎಂದು ತಿಳಿಸಿದರು. 

ಎಲೆಕ್ಷನ್‌ ಬಂದಾಗ ಮಾತ್ರ ಬಿಎಸ್‌ವೈಗೆ ಮುಸ್ಲಿಮರು ನೆನಪಾಗ್ತಾರೆ: ಖಾದರ್‌

ದೇವೇಗೌಡ (HD Devegowda), ಕುಮಾರಸ್ವಾಮಿ (HD Kumaraswamy), ಜೆಡಿಎಸ್‌ಗೆ ಬೈಯದೇ ಇದ್ದರೆ ಕಾಂಗ್ರೆಸ್ಸಿಗರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಕಾಂಗ್ರೆಸ್‌ ನಂಬಿಕೆದ್ರೋಹಿಗಳ ಪಕ್ಷ ಎಂದು ಜರಿದರು. 2023ರಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಲಿದ್ದು, ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ  ಕಸ ಹೊಡೆಯುತ್ತಿದ್ದರು ಎಂಬ ಜಮೀರ್‌ (zameer) ಹೇಳಿಕೆ ಪ್ರಸ್ತಾಪಿಸಿದ ಅವರು, ನಾವು ರೈತರು, ಜಮೀನಿನಲ್ಲಿ ಕಸ ಹೊಡಿತೀವಿ. ಎಲ್ಲ ಕೆಲಸವನ್ನು ಮಾಡುತ್ತೇವೆ. ಜಮೀರ್‌ ಹಾಗೇ ನಾವಲ್ಲ ಎಂದರು.

click me!