ಆಡಿಯೋ ಹಗರಣ: ಯಡಿಯೂರಪ್ಪಗೆ ಅರ್ಧ ರಿಲಿಫ್!

By Web Desk  |  First Published Feb 22, 2019, 11:09 AM IST

ಆಪರೇಶನ್ ಕಮಲ ಆಡಿಯೋ ಪ್ರಕರಣ| ಯಡಿಯೂರಪ್ಪ ಅವರಿಗೆ ಅರ್ಧ ರಿಲೀಫ್ ನೀಡಿದ ನ್ಯಾಯಾಲಯ| ದೇವದುರ್ಗ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಮಧ್ಯಂತರ ತಡೆ| ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ| ಯಡಿಯೂರಪ್ಪ ಸೇರಿ ನಾಲ್ವರಿಗೆ ಬಿಗ್ ರಿಲೀಫ್|


ಬೆಂಗಳೂರು(ಫೆ.22): ಮಹತ್ವದ ಬೆಳವಣಿಗೆಯೊಂದರಲ್ಲಿ ಆಪರೇಶನ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊಂಚ ನಿರಾಳತೆ ದೊರೆತಿದೆ. 

ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ, ಯಡಿಯೂರಪ್ಪ ಸೇರಿದಂತೆ ಇತರ ನಾಲ್ವರ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿ ಆದೇಶ ನೀಡಿದೆ.

Tap to resize

Latest Videos

ಆಪರೇಷನ್‌ ಕಮಲ ಆಡಿಯೋ ಬಾಂಬ್‌ ಪ್ರಕರಣದ ರದ್ದತಿ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನ್ಯಾ.ಪ್ರಲ್ಹಾದ್‌ ಗೋವಿಂದರಾವ್‌ ಮಾಲೀಪಾಟೀಲ್‌, ದೇವದುರ್ಗ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿದ್ದಾರೆ.

click me!