ದೆಹಲಿ ಹೋರಾಟಕ್ಕೆ ಹೋಗದ್ದಕ್ಕೆ ಸಚಿವ ಲಮಾಣಿ ಪುತ್ರ, ಹಾವೇರಿ ಯುವ ಕಾಂಗ್ರೆಸ್ ಅಧ್ಯಕ್ಷ ಸೇರಿ 6 ಮಂದಿ ಅಮಾನತು

Kannadaprabha News   | Kannada Prabha
Published : Nov 07, 2026, 06:46 AM IST
Haveri Youth Congress President

ಸಾರಾಂಶ

ದೆಹಲಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಸೇರಿ 6 ಮಂದಿಯನ್ನು ಅಮಾನತುಗೊಳಿಸಲಾಗಿದೆ. ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನಕುಮಾರ ಲಮಾಣಿ ಕೂಡ ಅಮಾನತುಗೊಂಡವರಲ್ಲಿ ಸೇರಿದ್ದಾರೆ.

ಹಾವೇರಿ (ನ.7): ದೆಹಲಿ(Delhi)ಯಲ್ಲಿ ರಾಹುಲ್‌ ಗಾಂಧಿ(Rahul Gandhi) ನೇತೃತ್ವದಲ್ಲಿ ಈಚೆಗೆ ನಡೆದ ಹೋರಾಟಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ(Haveri youth congress president) ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ(Minister Rudrappa lamani) ಪುತ್ರ ದರ್ಶನಕುಮಾರ ಲಮಾಣಿ(Darshan kumar lamani) ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

ಹಾವೇರಿ, ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೇರಿ 6 ಮಂದಿ ಅಮಾನತು

ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ಈ ಅಮಾನತು ಆದೇಶ ಹೊರಡಿಸಿದೆ. ದೆಹಲಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಎಸ್ಐಆರ್ ವಿರೋಧಿಸಿ ಹೋರಾಟ(Anti-SIR protest), ಸಂಸತ್ ಚಲೋ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಗೈರು ಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಾಯಕತ್ವ, ಮುಂದಿನ ಆದೇಶದವರೆಗೆ ದರ್ಶನಕುಮಾರ ಲಮಾಣಿ ಸೇರಿದಂತೆ ಆರು ಪದಾಧಿಕಾರಿಗಳನ್ನು ಅಮಾನತಿನಲ್ಲಿಡಲು ನಿರ್ಧರಿಸಿದೆ.

ಅಮಾನತುಗೊಂಡವರಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ಅಜೀಜ್, ಸೂರಜ್ ಆವಟಿ, ಪವನ ಸಾಲಿಯಾನ್, ಅಭಿಷೇಕ ಸಿ.ಹಾಗೂ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನಕುಮಾರ ಲಮಾಣಿ ಮತ್ತು ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಸಿರ್ಸಿಕರ ಸೇರಿದ್ದಾರೆ.

ಕೆಪಿವೈಸಿಸಿ ಅಧ್ಯಕ್ಷ ಮಂಜುನಾಥ ಎಚ್.ಎಸ್., ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕೆಪಿವೈಸಿಸಿ ಸಹ ಉಸ್ತುವಾರಿ ತಾರಿಕ ಬಾಗ್ವಾನ ಮತ್ತು ಶ್ರೀನಿವಾಸ ರಾಠೋಡ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಂದೂರಿ ಚಿಕನ್​ ತಿಂದು ಬಾಯಿ ಸುಟ್ಟುಕೊಂಡ ಸೋನಿಯಾ ಗಾಂಧಿ: ಕುತೂಹಲ ದಿನಗಳ ವಿವರ ಆತ್ಮಚರಿತ್ರೆಯಲ್ಲಿ
'ಪ್ರಿಯಾಂಕ್ ಖರ್ಗೆ ನೀನು ಬಲಿತ ದಲಿತ, ನಿನಗೆ ಮೇಲ್ಜಾತಿಯವರ ಹುಡುಗಿ ಬೇಕಾ?: ಡಾ. ಚಿ.ನಾ. ರಾಮು ತೀವ್ರ ವಾಗ್ದಾಳಿ!