ಹಾಸನ ಪೆನ್‌ಡ್ರೈವ್ ಪ್ರಕರಣ: ಇದರ ಬಗ್ಗೆ ಕುಮಾರಣ್ಣ, ಅಶೋಕಣ್ಣ ಹೇಳಬೇಕು -ಡಿಕೆ ಶಿವಕುಮಾರ

By Ravi JanekalFirst Published Apr 27, 2024, 8:01 PM IST
Highlights

 ಪೆನ್‌ಡ್ರೈವ್ ಬಗ್ಗೆ ಕುಮಾರಸ್ವಾಮಿಗೆ ಗೊತ್ತಿರುತ್ತೆ. ಅವರೇ ಕೆಲ ತಿಂಗಳ ಹಿಂದೆ ಜೇಬಿನಲ್ಲಿಟ್ಟುಕೊಂಡು ತಿರುಗಾಡ್ತಿದ್ರು. ಪೆನ್‌ಡ್ರೈವ್ ರಿಲೀಸ್ ಮಾಡ್ತೇನೆ ಅಂತಾ ಹೇಳ್ತಾ ಇದ್ರಲ್ಲ ಈಗ ಗೊತ್ತಾಯ್ತು ನಂಗೆ ಆ ಪೆನ್ ಡ್ರೈವ್ ಬಗ್ಗೆ. ಇದೀಗ ರಿಲೀಸ್ ಆಗಿರೋದು ಅದೇ ಪೆನ್‌ಡ್ರೈವ್ ಗೊತ್ತಿಲ್ಲ..  ಎಂದು ಹಾಸನ ಪೆನ್‌ಡ್ರೈವ್ ಪ್ರಕರಣ ಸಂಬಂಧ ಕುಮಾರಣ್ಣ ಅಶೋಕಣ್ಣ ಉತ್ತರಿಸಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಆಗ್ರಹಿಸಿದರು

 ಬೆಂಗಳೂರು (ಏ.27): ಲೋಕಸಭಾ ಚುನಾವಣೆ ನಡುವೆ ಹಾಸನ ಸಂಸದನ ಪೆನ್‌ಡ್ರೈವ್ ಭಾರೀ ಚರ್ಚೆಯಾಗ್ತಿದೆ. ಪೆನ್‌ಡ್ರೈವ್ ವಿಚಾರ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಪ್ರತಿಕ್ರಿಯಿಸಿದ್ದಾರೆ.

ಇಂದು ಕರ್ನಾಟಕ ಬರಪರಿಹಾರ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಪೆನ್ ಡ್ರೈವ್ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಿನಿಮಾದ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಪೆನ್‌ಡ್ರೈವ್ ಬಗ್ಗೆ ಕುಮಾರಣ್ಣ, ಅಶೋಕಣ್ಣ ಮಾತನಾಡಬೇಕು. ಈ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರನ್ನು ಕೇಳಬೇಕು ಎಂದರು.

ಲೋಕಸಭಾ ಚುನಾವಣೆ ಹೊತ್ತಲ್ಲಿ ಹಾಸನದಲ್ಲಿ ಪೆನ್‌ಡ್ರೈವ್ ಸದ್ದು! ಅಭ್ಯರ್ಥಿ ಬೆಂಬಲಿಗರಿಂದ ಸೈಬರ್‌ ಕ್ರೈಂಗೆ ದೂರು

ಪೆನ್‌ಡ್ರೈವ್ ಬಗ್ಗೆ ಕುಮಾರಸ್ವಾಮಿಗೆ ಗೊತ್ತಿರುತ್ತೆ. ಅವರೇ ಕೆಲ ತಿಂಗಳ ಹಿಂದೆ ಜೇಬಿನಲ್ಲಿಟ್ಟುಕೊಂಡು ತಿರುಗಾಡ್ತಿದ್ರು. ಪೆನ್‌ಡ್ರೈವ್ ರಿಲೀಸ್ ಮಾಡ್ತೇನೆ ಅಂತಾ ಹೇಳ್ತಾ ಇದ್ರಲ್ಲ ಈಗ ಗೊತ್ತಾಯ್ತು ನಂಗೆ ಆ ಪೆನ್ ಡ್ರೈವ್ ಬಗ್ಗೆ. ಇದೀಗ ರಿಲೀಸ್ ಆಗಿರೋದು ಅದೇ ಪೆನ್‌ಡ್ರೈವ್ ಗೊತ್ತಿಲ್ಲ. ಅವರು NDA ಸಂಸದರಾಗಿರೋದ್ರಿಂದ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಡಬೇಕು. ಇದಕ್ಕೂ ಮೊದಲು ಇದರ ಬಗ್ಗೆ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಆರ್ ಅಶೋಕ್ ಮಾತಾಡಬೇಕು. ಅಶ್ವಥ್ ನಾರಾಯಣ ಗಂಡಸ್ತನ ಬಗ್ಗೆ ಮಾತಾಡ್ತಿದ್ರಲ್ವ ಈಗ ಏನು ಹೇಳ್ತಾರೆ? ಎಂದು ಪ್ರಶ್ನಿಸಿದರು. ಇದೇ ವೇಳೆ ರಾಜ್ಯಕ್ಕೆ ಇದರ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.

ಕೇಂದ್ರದಿಂದ ಬರ ಪರಿಹಾರ ಹಣ ಇನ್ನೂ ಬಂದಿಲ್ಲ, ಯಾವ ಬ್ಯಾಂಕ್‌ಗೆ ಜಮಾ ಆಗುತ್ತೋ ಗೊತ್ತಿಲ್ಲ: ಡಿಕೆಶಿ

ಪೆನ್‌ಡ್ರೈವ್ ಘಟನೆ ಬಗ್ಗೆ ಈಗಾಗಲೇ ಪೊಲೀಸ್, ಗೃಹ ಸಚಿವರಿಗೆ, ಸಿಎಂಗೆ ಮಹಿಳಾ ಆಯೋಗದವರು ಪತ್ರ ಬರೆದಿದ್ದಾರೆ. ಹಾಸನ ಸಂಸದನ ವಿರುದ್ದ ತನಿಖೆ ಸಿಎಂ ಹೇಳಬೇಕು, ನೀವು ಯಾಕೆ ಮೌನವಾಗಿದ್ದೀರಿ? ಇಂಥ ದೊಡ್ಡ ದೊಡ್ಡ ವಿಚಾರಗಳನ್ನ ಮುಚ್ಚಿಟ್ರೆ ನಿಮಗೂ ಶೋಭೆ ತರಲ್ಲ. ಮಹಿಳೆಯರ ಮಾನ ಹರಣ ಮಾಡಿದವರು ಯಾರು? ಕುಮಾರಸ್ವಾಮಿ ನನ್ನ ಹೆಸರು ಹೇಳಿ ಮಾತಾಡ್ಲಿ. ನನ್ನ ಪುರಾಣ, ನನ್ನ ನುಡಿಮುತ್ತು ಆಮೇಲೆ ಬರುತ್ತೆ.ಹೆಣ್ಣು ಮಕ್ಕಳ ಮಾನ ಹರಣ ಆಯ್ತು ಇದನ್ನ ಕುಮಾರಸ್ವಾಮಿ ಸಮರ್ಥನೆ ಮಾಡಿಕೊಳ್ತಾರಾ? ನನಗೂ ಆ ಕ್ಲಿಪ್ಪಿಂಗ್ಸ್ ಎರಡ್ಮೂರು ಸಲ ಯಾರೋ ಕಳಿಸಿದ್ರು. ನಾನೂ ಕೂಡ ನೋಡಿದ್ದೇನೆ. ಸಂತ್ರಸ್ತೆಯರ ಕಂಪ್ಲೇಂಟ್ ಬಗ್ಗೆ ತಿಳಿದುಕೊಂಡು ನಾನು ಮಾತಾಡ್ತೀನಿ ಎಂದರು.

click me!