ಭಾರತ ಮಾತೆಗೆ ಜೈಕಾರ ಹಾಕಿ ಮೋದಿ ವಿರುದ್ಧ ಲಕ್ಷ್ಮಣ ಸವದಿ ವಾಗ್ದಾಳಿ!

By Ravi Janekal  |  First Published Apr 27, 2024, 6:29 PM IST

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಶಾಸಕ ಲಕ್ಷ್ಮಣ ಸವದಿ ಮತ್ತೊಮ್ಮೆ ಭಾರತ ಮಾತೆ ಘೊಷಣೆ ಕೂಗಿದ್ದಾರೆ. ಭಾರತ್ ಮಾತಾ ಕೀ ಜೈ ಎನ್ನುತ್ತಲೇ ಭಾಷಣ ಆರಂಭಿಸಿದ ಶಾಸಕ ಲಕ್ಷ್ಮಣ್ ಸವದಿ, ದೇಶಭಕ್ತಿಯನ್ನು ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಬಾಗಲಕೋಟೆ (ಏ.27): ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಶಾಸಕ ಲಕ್ಷ್ಮಣ ಸವದಿ ಮತ್ತೊಮ್ಮೆ ಭಾರತ ಮಾತೆ ಘೊಷಣೆ ಕೂಗಿದ್ದಾರೆ. 

ಭಾರತ್ ಮಾತಾ ಕೀ ಜೈ ಎನ್ನುತ್ತಲೇ ಭಾಷಣ ಆರಂಭಿಸಿದ ಶಾಸಕ ಲಕ್ಷ್ಮಣ್ ಸವದಿ, ದೇಶಭಕ್ತಿಯನ್ನು ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸವದಿ ಜೋರಾಗಿ ಎಲ್ಲರೂ ಒಮ್ಮೆ ಭಾರತ್ ಮಾತಾಕೀ ಜೈ ಹೇಳಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಈ ವೇಳೆ ಜನರಿಂದಲೂ ಭಾರತ್ ಮಾತಾಕೀ ಜೈ ಎಂಬ ಘೊಷಣೆ ಕೇಳಿಬಂತು. ಬಳಿಕ ಇದರ ವಿಡಿಯೋ ಮಾಡಿ ಮೋದಿ ಸಾಹೇಬ್ರಿಗೆ ಕಳಿಸಿಕೊಡಿ ಎಂದರು.

Tap to resize

Latest Videos

undefined

ತವೆಯಲ್ಲಿ ಹಾಕಿದ್ದ ರೊಟ್ಟಿ ಹೊತ್ತಲಿಕ್ಕತ್ತಿದೆ ಅದನ್ನೊಂದು ಸಾರಿ ತಿರುವಿ ಹಾಕಿ ಎನ್ನುವ ಮೂಲಕ ಪರೋಕ್ಷವಾಗಿ ಸಂಸದ ಸ್ಥಾನದಿಂದ ಗದ್ದಿಗೌಡರನ್ನ ಕಿತ್ತುಹಾಕಿ ಎಂದರು. ನಮಗೆ ಮತ ಕೇಳಲು ನೈತಿಕ ಹಕ್ಕಿದೆ. ಆದರೆ ಈ ಬಿಜೆಪಿಯವರಿಗೆ ಮತ ಕೇಳಲು ಯಾವುದೇ ನೈತಿಕ ಹಕ್ಕಿಲ್ಲ. ಮತ ಕೇಳುವ ಹಕ್ಕು ಕಳೆದುಕೊಂಡಿದೆ. 2014ರಲ್ಲಿ ಹೊಸ ಕನಸು ಬಿತ್ತಿದ್ರು. ಇಡೀ ದೇಶದಲ್ಲಿ ನದಿ ಜೋಡಣೆ ಮಾಡ್ತೀವಿ ಅಂದ್ರು, ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದ್ರು, ಆದರೆ ದ್ವಿಗುಣ ಆಗಿದ್ದು ಗೊಬ್ಬರದ ಬೆಲೆಗಳು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯಿಂದ ದೇಶಭಕ್ತಿ ಪಾಠ ಕಲಿಯಬೇಕಿಲ್ಲ: ಲಕ್ಷ್ಮಣ ಸವದಿ

click me!