ಸಂಸದ ಪ್ರಜ್ವಲ್, ನಿತ್ಯಾನಂದ ಸ್ವಾಮಿ ದೇಶಕ್ಕೆ ಸೇರಲು ಪ್ರಯತ್ನಿಸುತ್ತಿದ್ದಾರೆ; ಮೈಸೂರು ಲಕ್ಷ್ಮಣ್!

By Sathish Kumar KH  |  First Published May 10, 2024, 8:03 PM IST

ನನಗಿರುವ ಮಾಹಿಯ ಪ್ರಕಾರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಕೇಸ್‌ನ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ನಿತ್ಯಾನಂದಸ್ವಾಮಿ ದೇಶಕ್ಕೆ ಸೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ. 


ಮೈಸೂರು (ಮೇ 10): ನನಗಿರುವ ಮಾಹಿಯ ಪ್ರಕಾರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಕೇಸ್‌ನ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸಿನಲ್ಲಿ ದೇಶ ಬಿಟ್ಟು ಹೋಗಿ ಮತ್ತೊಂದು ಹೊಸ ದೇಶವನ್ನೇ ಕಟ್ಟಿಕೊಂಡಿರುವ ನಿತ್ಯಾನಂದ ಸ್ವಾಮಿ ಇರುವ ಜಾಗಕ್ಕೆ ಸೇರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರೂ ಆಗಿರುವ ಮೈಸೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಬಿಡದಿಯ ನಿತ್ಯಾನಂದ ಪ್ರಕರಣ ಏನಾಯಿತು ಎಲ್ಲರಿಗೂ ಗೊತ್ತಿದೆ. ನನಗಿರುವ ಮಾಹಿತಿ ಪ್ರಕಾರ ಅತ್ಯಾಚಾರ ಕೇಸಿನ ಆರೋಪಿ ನಿತ್ಯಾನಂದಸ್ವಾಮಿ ಯಾರ ಕೈಗೂ ಸಿಗದೇ ತನ್ನದೇ ದೇಶ ಕಟ್ಟಿಕೊಂಡು ವಾಸವಾಗಿದ್ದಾನೆ. ಪ್ರಜ್ವಲ್ ರೇವಣ್ಣ ಕೂಡ ನಿತ್ಯಾನಂದ ಇರುವ ಜಾಗಕ್ಕೆ ಸೇರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನೀವೆಲ್ಲರೂ ರಾಜ್ಯದಲ್ಲಿ ಪ್ರೆಸ್‌ಮೀಟ್‌ಗಳನ್ನು ಮಾಡಿ, ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದೀರಿ ಎಂದು ನೇರವಾಗಿ ಆರೋಪ ಮಾಡಿದರು. 

Tap to resize

Latest Videos

ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ನಮ್ಮ ರಾಜ್ಯದ ಪೊಲೀಸರು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ ತನಿಖೆ ಮಾಡುವ ಸಾಮರ್ಥ್ಯ ಹೊಂದಿದ್ದರೂ ಸಿಬಿಐಗೆ ಕೊಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿ ಬಂದಿದ್ದಾರೆ. ಆದರೆ, ಸಿಬಿಐ ತನಿಖೆಗೆ ವಹಿಸಿದರೆ ಕೆಂದ್ರ ಗೃಹ ಸಚಿವ ಅಮಿತ್ ಶಾ ಪ್ರಜ್ವಲ್‌ನ ಕೇಸ್ ಮುಚ್ಚಿ ಹಾಕುವ ಭರವಸೆ ನಿಡಿದ್ದಾರಾ? ನಿಮಗೆ ಯಾಕೆ ಸಿಬಿಐ ಬಗ್ಗೆ ನಿಮಗೆ ಅಷ್ಟು ಪ್ರೀತಿ? ಇಲ್ಲಿರುವ ಅಧಿಕಾರಿಗಳು ಕೂಡ ಸಮರ್ಥರು. ಬಿಜೆಪಿಯ ಸ್ಕ್ರಿಪ್ ನೀವು ಓದುತ್ತಿದ್ದೀರಾ ಎಂದು ಆರೋಪಿಸಿದರು.

ಪಾಪ ಪ್ರಜ್ವಲ್, ಎಲ್ರೂ ನೋಡ್ಲಿ ಅಂತ ಅಶ್ಲೀಲ ವಿಡಿಯೋ ಹಂಚಿಕೊಂಡ; ಪೊಲೀಸರು ಬಂದ್ರು, ಎತ್ತಾಕೊಂಡ್ ಹೋದ್ರು!

ಮುಖ್ಯವಾಗಿ ಈ ಪ್ರಕರಣದಲ್ಲಿ ಪೆನ್ ಡ್ರೈವ್ ಹಂಚಿದ್ದು ಯಾರು ಆಮೇಲೆ ನೋಡಣ. ಆದರೆ, ವಿಡಿಯೋ ಮಾಡಿದ್ದು ಯಾರು? ನಿಮ್ಮ ಅಣ್ಣನಾ ಮಗ ಪ್ರಜ್ವಲ್ ಅಲ್ವಾ? ಹೆಣ್ಣು ಮಕ್ಕಳನ್ನು ರೇಪ್ ಮಾಡಿ ವಿಡಿಯೋ ಮಾಡಿದ್ದು ಆತನೇ ತಾನೇ? ರಾಜ್ಯದ ಮಾನ ಮರ್ಯಾದೆಯನ್ನು ರಾಷ್ಟ್ರದ ಮಟ್ಟದಲ್ಲಿ ಹಾಳು ಮಾಡಿದ್ದೀರಿ. ಬೆಂಗಳೂರಿನ ಮಾನ ಮರ್ಯಾದೆ ಹರಾಜು ಹಾಕಿದ್ದೀರಿ. ಮೊದಲು ಪ್ರಜ್ವಲ್‌ನನ್ನು ನಮ್ಮ ದೇಶಕ್ಕೆ ಕರೆದುತನ್ನಿ. ನೀರವ ಮೋದಿ, ವಿಜಯ ಮಲ್ಯ ಯಾರನ್ನೂ ಬಿಜೆಪಿ ಸರ್ಕಾರ ಕರೆ ತರಲಿಲ್ಲ. ಪ್ರಜ್ವಲ್ ರೇವಣ್ಣನ ವಿಚಾರದಲ್ಲೂ ಇದೇ ಆಗಲಿದೆ ಎಂದು ವಾಗ್ದಾಳಿ ಮಾಡಿದರು.

ಇನ್ನು ವಕೀಲ ದೇವರಾಜೇಗೌಡ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಹೊಂದಿರುವ ವ್ಯಕ್ತಿಯಾಗಿದ್ದಾನೆ. ಆತ ಕೊಟ್ಟ ಪೆನ್ ಡ್ರೈವ್ ನೋಡಿಲ್ಲ ಅಂತೀರ? ನಿಮ್ಮ ನಿಲುವು ಸ್ಪಷ್ಟ ಪಡಿಸಿ. ನಾನು ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ದೇವರಾಜೇಗೌಡನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ. ಆತ ದುಡ್ಡು ಮಾಡಲು ಇದೆಲ್ಲ ಮಾಡಿದ್ದಾನೆ. ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ. ಜೊತೆಗೆ, ಈ ಕೇಸಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಿಕ್ಕಿಸುವಿದಕ್ಕೆ ಹುನ್ನಾರ ಮಾಡುತ್ತಿದ್ದೀರಾ? ಕುಮಾರಸ್ವಾಮಿ ಅವ್ರೆ ಜನರ ದಿಕ್ಕು ತಪ್ಪಿಸುವ ಕೆಲ್ಸ ನಿಲ್ಲಿಸಿ ಎಂದು ಆಕ್ರೋಶ ಹೊರಹಾಕಿದರು.

ಹಾಸನ ಪೆನ್‌ಡ್ರೈವ್ ಕೇಸ್‌ಗೆ ಮತ್ತೊಂದು ಟ್ವಿಸ್ಟ್; ಪ್ರಜ್ವಲ್ ಬೆನ್ನಲ್ಲೇ, ವಕೀಲ ದೇವರಾಜೇಗೌಡ ನಾಪತ್ತೆ?

ಮಾಸ್ ರೇಪಿಸ್ಟ್ (ಪ್ರಜ್ವಲ್ ರೇವಣ್ಣ) ಪರ ಮೋದಿ ಕ್ಯಾಂಪೇನ್ ಮಾಡಿದ್ದಾರೆ ಎಂದು ಆಸ್ಟ್ರೇಲಿಯಾ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಕುಮಾರಸ್ವಾಮಿಯವರೇ ಹಾಸನದಲ್ಲಿ ಪ್ರಜ್ವಲ್ ಕೈ ಎತ್ತಿ ತಪ್ಪು ಮಾಡಿದ್ದಾನೆ ಕ್ಷಮಿಸಿ ಎಂದು ಚುನಾವಣೆ ಸಮಯದಲ್ಲಿ ಯಾಕೆ ಹೇಳಿದ್ರಿ? ಎಸ್‌ಐಟಿ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿದೆ. ಜನರ  ದಿಕ್ಕು ತಪ್ಪಿಸುವ ಕೆಲ್ಸ ಮಾಡ್ಬೇಡಿ ಎಂದು ಟೀಕೆ ಮಾಡಿದರು.

click me!