2 ಟ್ರಾಲಿ ಬ್ಯಾಗ್ ಹಿಡಿದು ಮ್ಯೂನಿಚ್‌ ನಿಲ್ದಾಣದಲ್ಲಿ ಬೆಂಗಳೂರಿಗೆ ಫ್ಲೈಟ್‌ ಹತ್ತಿದ ಪ್ರಜ್ವಲ್ ರೇವಣ್ಣ

By Gowthami K  |  First Published May 30, 2024, 3:25 PM IST

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ  ಅವರು ಇಂದು ಭಾರತಕ್ಕೆ ಬರುವುದು ಖಚಿತ. ಎರಡು ಟ್ರಾಲಿ ಬ್ಯಾಗ್‌ಗಳನ್ನು ಹಿಡಿದು  ಈಗಾಗಲೇ ಜರ್ಮನಿಯ  ಮ್ಯೂನಿಚ್‌ ವಿಮಾನ ನಿಲ್ದಾಣದಿಂದ ಹೊರಟಿದ್ದಾರೆ.


ಬೆಂಗಳೂರು (ಮೇ.30): ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ  ಅವರು ಇಂದು ಭಾರತಕ್ಕೆ ಬರುವುದು ಖಚಿತ.  ಎರಡು ಟ್ರಾಲಿ ಬ್ಯಾಗ್‌ ಗಳ ಜೊತೆಗೆ  ಜರ್ಮನಿಯ ಮ್ಯೂನಿಚ್‌ ವಿಮಾನ ನಿಲ್ದಾಣಕ್ಕೆ ಚೆಕ್‌ ಇನ್‌ ಆದ ಪ್ರಜ್ವಲ್ ರೇವಣ್ಣ ಲುಫ್ತಾನ್ಸಾ ಏರ್‌ಲೈನ್ಸ್‌  ಹತ್ತಿ ಬಿಸಿನೆಸ್‌ ಕ್ಲಾಸ್‌ ಸೀಟ್‌ ನಂಬರ್ 8Gಯಲ್ಲಿ ಕುಳಿತಿದ್ದು, ವಿಮಾನ ಈಗಾಗಲೇ ಭಾರತಕ್ಕೆ ಹೊರಟಿದೆ.  ಈ ಬಗ್ಗೆ  ಸುವರ್ಣನ್ಯೂಸ್ ಗೆ  ಮಾಹಿತಿ ಲಭ್ಯವಾಗಿದೆ.

ಎಲ್ಲಾ ಕೇಸಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಪ್ರಜ್ವಲ್‌ ಮೊರೆ

Tap to resize

Latest Videos

2 ಬ್ಯಾಗ್‌ಗಳ ಜತೆಗೆ ಆರೋಪಿ ಪ್ರಜ್ವಲ್ ರೇವಣ್ಣ ಚೆಕ್‌ ಇನ್‌ ಆಗಿದ್ದಾರೆ.  ಬೋರ್ಡಿಂಗ್ ಆದ ನಂತರ ಒಟ್ಟು ಎರಡು ಪ್ರಯಾಣಿಕರ ಲಿಸ್ಟ್ ಗಳನ್ನು ಲುಫ್ತಾನ್ಸಾ ಏರ್‌ಲೈನ್ಸ್‌  ಅವರು ಇಮ್ಯುಗ್ರೇಷನ್ ವಿಭಾಗ ಮತ್ತೊಂದು ಕಷ್ಟಮ್ಸ್ ವಿಭಾಗಕ್ಕೆ ಕಳುಹಿಸುತ್ತಾರೆ. ಈ ಎರಡು ಲಿಸ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಇದೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಜ್ವಲ್ ವಿಮಾನ ಹತ್ತಿದ್ದಾರೆ ಎನ್ನುವುದು ಖಚಿತವಾಗಿದೆ..

 ಪ್ರಜ್ವಲ್ ರೇವಣ್ಣ ಒಟ್ಟು 5 ಬಾರಿ ಟಿಕೆಟ್‌ ಬುಕ್‌ ಮಾಡಿದ್ದು, 4 ಬಾರಿ ಕ್ಯಾನ್ಸಲ್‌ ಆಗಿದೆ. ಈ ಬಾರಿ ಟಿಕೆಟ್‌ ಕನ್ಫರ್ಮ್ ಆಗಿದೆ. ಪ್ರಜ್ವಲ್‌ ಬರುವ ನಿರೀಕ್ಷೆಯಲ್ಲಿರುವ ಎಸ್‌ಐಟಿ ಬೆಂಗಳೂರಿಗೆ ಬಂದಾಗ ಯಾವ ರೀತಿಯಲ್ಲಿ  ಬಂಧಿಸಬೇಕು ಎಂದೆಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರಜ್ವಲ್ ಈ ಹಿಂದೆ ಮೇ 10, ಮೇ.12, ಮೇ.14,  ಮೇ.15ರಂದು ಟಿಕೆಟ್‌ ಬುಕ್ ಮಾಡಿದ್ದರು. ಆದರೆ ಯಾವ ವಿಮಾನವನ್ನೂ ಹತ್ತಿರಲಿಲ್ಲ. ಈ ನಡುವೆ ಮೇ 15ರಂದು ಪ್ರಜ್ವಲ್‌ ಭಾರತಕ್ಕೆ ವಾಪಾಸ್‌ ಆಗಲು ಕಾಯ್ದಿರಿಸಿದ್ದ ವಿಮಾನ ಟಿಕೆಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಬಳಿಕ ಆ ಟಿಕೆಟ್‌ ರದ್ದಾಗಿತ್ತು. ಅಂತಿಮವಾಗಿ ಈಗ ಕುಮಾರಸ್ವಾಮಿ ಅವರ ಮನವಿ ಮತ್ತು ದೇವೇಗೌಡ ಅವರ ಪತ್ರದ ಮೇರೆಗೆ ಒಂದು ವಿಡಿಯೋ ಬಿಡುಗಡೆ ಮಾಡಿ, ನಾನು ಮೇ 31 ಭಾರತಕ್ಕೆ ಬಂದು ಎಸ್‌ಐಟಿ ವಿಚಾರಣೆ ಹಾಜರಾಗುತ್ತೇನೆ ಎಂದು ವಿಡಿಯೋ ಬಿಡುಗಡೆ ಮಾಡಿ ಹೇಳಿದ್ದರು.

ವಿದೇಶದಿಂದ ಬರುವ ಮುನ್ನವೇ ನಿರೀಕ್ಷಣಾ ಜಾಮೀನಿಗೆ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಕೆ; ತಿರಸ್ಕರಿಸಿದ ಕೋರ್ಟ್

ಲುಫ್ತಾನ್ಸಾ ಏರ್‌ಲೈನ್ಸ್‌ ವಿಮಾನದಲ್ಲಿ  ಮ್ಯೂನಿಚ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.20ಕ್ಕೆ ವಿಮಾನ ಹೊರಟಿದೆ. ಹವಾಮಾನ ವೈಪರಿತ್ಯದ ಕಾರಣ 1 ಗಂಟೆ ತಡವಾಗಿ ವಿಮಾನ ಟೇಕ್‌ ಆಫ್ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮೇ 31ರ ಮಧ್ಯರಾತ್ರಿ 1.30ರ ಸಮಯದಲ್ಲಿ ಪ್ರಜ್ವಲ್ ಬೆಂಗಳೂರು ತಲುಪಲಿದ್ದು,  ಎಸ್‌ಐಟಿ ತಂಡ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದೆ. ಪ್ರಜ್ವಲ್‌ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಎಸ್‌ಐಟಿ ವಶಕ್ಕೆ ಪಡೆಯಲಿದೆ.

click me!