ಹಾಸನ ಟಿಕೆಟ್‌ ಗೊಂದಲಕ್ಕೆ ಕಣ್ಣೀರು ಹಾಕಿದ ದೊಡ್ಡಗೌಡ್ರು: ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ ಎಂದ್ರು

Published : Apr 01, 2023, 04:22 PM IST
ಹಾಸನ ಟಿಕೆಟ್‌ ಗೊಂದಲಕ್ಕೆ ಕಣ್ಣೀರು ಹಾಕಿದ ದೊಡ್ಡಗೌಡ್ರು: ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ ಎಂದ್ರು

ಸಾರಾಂಶ

ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆ ಗೊಂದಲವನ್ನು ನನೆದು ಕಾರ್ಯಕರ್ತರ ಮುಂದೆ ಕಣ್ಣೀರು ಹಾಕಿದ ದೇವೇಗೌಡರು, ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ ಎಂದರು. 

ಬೆಂಗಳೂರು (ಏ.1): ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆ ಕುರಿತು ಅಂತಿಮ ತೀರ್ಮಾನ ಪ್ರಕಟಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬೆಂಗಳೂರಿನ ಮನೆಗೆ ಆಗಮಿಸಿದ್ದ ಹಾಸನದ ಜೆಡಿಎಸ್‌ ಕಾರ್ಯಕರ್ತರ ಮುಂದೆ ಕ್ಷೇತ್ರವನ್ನು ಉಳಿಸಿಕೊಳ್ಳುವುದಷ್ಟೇ ನಮ್ಮ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿಯೇ ಟಿಕೆಟ್‌ ನೀಡಲಾಗುವುದು ಎಂದು ದೇವೇಗೌಡರು ಹೇಳಿದರು.

ಹಾಸನದ ಜೆಡಿಎಸ್‌ ಟಿಕೆಟ್‌ ಹಂಚಿಕೆ ವಿಚಾರಕ್ಕಾಗಿ ಭಾರಿ ಗೊಂದಲ ಶುರುವಾಗಿದೆ. ಜೆಡಿಎಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ ದೇವೇಗೌಡರ ಮಕ್ಕಳ ನಡುವೆಯೇ ಈಗ ಟಿಕೆಟ್‌ ಹಂಚಿಕೆ ಭಿನ್ನಾಭಿಪ್ರಾಯ ಹುಟ್ಟುಕೊಂಡಿದೆ. 40 ವರ್ಷಗಳಿಂದ ಹಾಸನದಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದರೂ ಕಳೆದ ಬಾರಿ ಸೋಲು ಉಂಟಾಗಿತ್ತು. ಆದರೆ, ಈ ಬಾರಿ ಸ್ವತಃ ದೇವೇಗೌಡರ ಹಿರಿಸೊಸೆ ಭವಾನಿ ರೇವಣ್ಣ ತಾವೇ ಸ್ಪರ್ಧೆ ಮಾಡುವಂತೆ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕರ್ತರ ಸ್ವರೂಪ್‌ ಅವರಿಗೆ ಟಿಕೆಟ್‌ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಎಚ್.ಡಿ. ರೇವಣ್ಣ ಅವರು ಸ್ವರೂಪ್‌ಗೆ ಟಿಕೆಟ್‌ ನೀಡದಂತೆ ಮನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡರಿಗೆ ಟಿಕೆಟ್‌ ಆಯ್ಕೆಯನ್ನು ಕೈಬಿಟ್ಟಿದ್ದು, ಇಬ್ಬರ ಮಕ್ಕಳ ನಡುವೆ ಗೊಂದಲಕ್ಕೆ ಸಿಲುಕಿದ್ದು, ಇಂದು ಬೆಂಗಳೂರಿನ ಮನೆಯಲ್ಲಿ ಹಾಸನ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ದೇವೇಗೌಡರು ಕಣ್ಣೀರು ಹಾಕಿದ್ದಾರೆ. 

ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು; ಗೊಂದಲಕ್ಕೆ ತೆರೆ ಎಳೆಯಲು ಫೀಲ್ಡ್‌ಗಿಳಿದ ಎಚ್‌ಡಿ ದೇವೇಗೌಡ

ಕಣ್ಣೀರು ಹಾಕದಂತೆ ಸಮಾಧಾನ ಮಾಡಿದ ಕಾರ್ಯಕರ್ತರು: ಕುಮಾರಸ್ವಾಮಿ ಅವರು ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್‌ ಕಿಡುವುದಾಗಿ ಹೇಳಿದ್ದಾರೆ. ಆದರೆ, ರೇವಣ್ಣ ಅವರು ತಮ್ಮ ಪತ್ನಿ ಭವಾನಿ ಅವರಿಗೆ ಟಿಕೆಟ್‌ ಕೊಡಿಸಲು ಮುಂದಾಗಿದ್ದಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಗಿರೋ ಗೊಂದಲ ಪ್ರಸ್ತಾಪ ಮಾಡಿ ದೇವೇಗೌಡರು ಕಣ್ಣೀರು ಹಾಕಿದರು. ಕಳೆದ 40 ವರ್ಷದಿಂದ ಎನೇನಾಗಿದೆ ಎಲ್ಲವೂ ನಿಮಗೆ ಗೊತ್ತಿದೆ ಎಂದರು. ನೀವು ಕಣ್ಣಿರು ಹಾಕಬೇಡಿ ಎಂದು ಕಾರ್ಯಕರ್ತರು ಸಮಾಧಾನ ಮಾಡಿದರು. ಒಟ್ಟಿನಲ್ಲಿ ಯಾರೇ ಅಭ್ಯರ್ಥಿಯಾದರೂ ನಮ್ಮ‌ಕೆಲಸ ನಾವು ಮಾಡ್ತೇವೆ. ನಿಮ್ಮ ಮರ್ಯಾದೆ ತೆಗೆಯುವ ಕೆಲಸ ಹಾಸನ ಕಾರ್ಯಕರ್ತರಿಂದ ಆಗಲ್ಲ ಎಂದು ಭರವಸೆ ನೀಡಿದರು. 

ರೇವಣ್ಣ ಅವರಿಗೆ ಎರಡೂ ಕ್ಷೇತ್ರದಲ್ಲಿ ಟಿಕೆಟ್‌ ಕೊಡಿ:  ಹಾಸನ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿಯೇ ಟಿಕೆಟ್ ನೀಡುತ್ತೇವೆ ಎಂದು ಸಭೆಯಲ್ಲಿ ನೆರೆದಿದ್ದ ಮುಖಂಡರಿಗೆ ದೇವೇಗೌಡರು ಸ್ಪಷ್ಟನೆ ನೀಡಿದರು. ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣಗೆ ಟಿಕೆಟ್ ನೀಡುವಂತೆ ಬೆಂಬಲಿಗರ ಪಟ್ಟು ಹಿಡಿದರು. ಜೊತೆಗೆ, ಭವಾನಿ ರೇವಣ್ಣ ಬೆಂಬಲಿಗರಿಂದ ದೇವೇಗೌಡರಿಗೆ ಮನವರಿಕೆಗೆ ಯತ್ನ ಮಾಡಲಾಯಿತು. ಇನ್ನೂ ಒಂದು ಹೆಜ್ಜೆ ಮುಮದೆ ಹೋಗಿ, ಭವಾನಿ ರೇವಣ್ಣಗೆ‌ ಟಿಕೆಟ್ ನೀಡದೇ ಹೋದರೂ ಹೆಚ್.ಡಿ. ರೇವಣ್ಣ ಅವರಿಗೆ ಎರಡೂ ಕ್ಷೇತ್ರದಿಂದ ಟಿಕೆಟ್ ಕೊಡಿ. ಟಿಕೆಟ್ ಘೋಷಣೆ ಮಾಡುವ ಮುನ್ನ ಒಮ್ಮೆ ಹಾಸನಕ್ಕೆ ಬಂದು ಹೋಗಿ ಎಂದು ಹಾಸನ ಜೆಡಿಎಸ್‌ ಮುಖಂಡರು ದೇವೇಗೌಡರಿಗೆ ಕೈಮುಗಿದು ತೆರಳಿದರು.

ಪ್ರಧಾನಿಯಾಗಿ ದೇವೇಗೌಡರ ಸಾಧನೆ ಇಲ್ಲಿದೆ ನೋಡಿ: ನೀವು ಭಾವುಕರಾಗೋದು ಗ್ಯಾರಂಟಿ

ಒತ್ತಡ ತರಬೇಡಿ ಎಂದು ಮನವಿ ಮಾಡಿದ ಗೌಡರು:  ಈ ಕುರಿತು ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಈಗಾಗಲೇ ರೇವಣ್ಣ ಹೊಳೆನರಸೀಪುರದಿಂದ ಸ್ಪರ್ಧಿಸುತ್ತಾರೆ. ಎರಡೂ ಕ್ಷೇತ್ರದಲ್ಲಿ ರೇವಣ್ಣ ಚುನಾವಣೆಗೆ ನಿಲ್ಲೋದಿಲ್ಲ. ನಮಗೆ ಹಾಸನ ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ ಆಗಿದೆ. ಹಾಸನ‌ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ ಕೊಡಬೇಕು ಅನ್ನೋದನ್ನ ನಿರ್ಧಾರ ಮಾಡುತ್ತೇನೆ. ನಮ್ಮ ನಿರ್ಧಾರಕ್ಕೆ ಎಲ್ಲರೂ ಬೆಂಬಲಿಸಬೇಕು. ಹಾಸನ ರಾಜಕಾರಣ ನನಗೆ 40 ವರ್ಷದಿಂದ ಗೊತ್ತಿದೆ. ಗೆಲ್ಲುವ ಅಭ್ಯರ್ಥಿ ಹಾಗೂ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ. ದಯವಿಟ್ಟು ಒತ್ತಡ ತರಬೇಡಿ. ಏನೇ ತಿರ್ಮಾನ ಮಾಡಿದರೂ ಕ್ಷೇತ್ರದಲ್ಲಿ ಇರುವ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ತರುವಂತಹ ಫಲಿತಾಂಶ ಬರಬೇಕು ಎಂದು ಮನವಿ ಮಾಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್