
ತುಮಕೂರು, (ಜೂನ್. 05): ಮೈಸೂರು ಐಎಎಸ್ ಅಧಿಕಾರಿಗಳು ರಂಪಾಟ ಇದೀಗ ಬೀದಿಗೆ ಬಂದಿದ್ದು, ಪರ ವಿರೋಧಗಳ ಚರ್ಚೆಗಳು ನಡೆಯುತ್ತಿವೆ.
ಇನ್ನು ಈ ಬಗ್ಗೆ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದು, ಮೈಸೂರಲ್ಲಿ ಐಎಎಸ್ ಅಧಿಕಾರಿಗಳ ಗಲಾಟೆಯಲ್ಲಿ ಎಲ್ಲೋ ಒಂದು ಕಡೆ ತಪ್ಪಾಗಿದೆ ಅದನ್ನ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಗೆಹರಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.
ಸಿಂಧೂರಿ v/s ಶಿಲ್ಪಾನಾಗ್: ಏನಿದು ಇನ್‌ಸೈಡ್ ಪಾಲಿಟಿಕ್ಸ್..?
ಸಾರ್ವಜನಿಕರು ಕಷ್ಟದಲ್ಲಿರಬೇಕಾದ್ರೆ ಅಧಿಕಾರಿಗಳ ಗಲಾಟೆ ಸರಿಯಲ್ಲ. ಅಂಗನವಾಡಿ ನೌಕರರಿಗೆ, ಆಶಾಕಾರ್ಯಕರ್ತೆಯರಿಗೆ ಸಂಬಳ ಕೊಟ್ಟಿಲ್ಲ. ಈ ವೇಳೆ ರೋಹಿಣಿ ಸಿಂಧೂರಿ ಅವರ ಬಗ್ಗೆ ಒಂದು ಮಾತು ಹೇಳ್ಬೇಕಾಗುತ್ತೆ.
ಸ್ವಿಮ್ಮಿಂಗ್ ಪೂಲ್ ಕಟ್ಟೋದು ಮೋಜು ಮಸ್ತಿಗೆ ಹಣ ಖರ್ಚು ಮಾಡೋದು ಸೂಕ್ತವಲ್ಲ. ಇಂತಹ ಸಂದರ್ಭದಲ್ಲಿ ಇದೆಲ್ಲಾ ಮಾಡೋಕೆ ಹೋಗಬಾರದು. ಇಂತಹ ಕೆಲಸಗಳು ಕೆಟ್ಟ ಪ್ರೆಸಿಡಿಂಗ್ಸ್ ಸೆಟ್ ಮಾಡುತ್ತೆ, ಇದಕ್ಕೆ ನನ್ನ ವಿರೋಧ ಇದೆ. ಒಬ್ಬ ಶಾಸಕ ಹೇಳಿದ್ರೆ ಅವರ ವಿರುದ್ಧ ಇದ್ದಾರೆ ಅನ್ನಬಹುದು. ಎಲ್ಲಾ ಶಾಸಕರು, ಎಲ್ಲಾ ಪಕ್ಷದವರು, ಎಲ್ಲರೂ ವಿರೋಧ ಇರೋದ್ರಿಂದ ಎಲ್ಲೋ ಒಂದ್ ಕಡೆ ಏನೋ ತಪ್ಪಾಗಿರುತ್ತೆ. ಅದನ್ನ ಸಿಎಸ್, ಸಿಎಂ ಪರಿಶೀಲಿಸಿ ಸರಿಪಡಿಸಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.