Karnataka Politics: ಬಿಜೆಪಿ ನಾಯಕ ಕಾಂಗ್ರೆಸ್‌ ಸೇರ್ಪಡೆಗೆ ಮಾತುಕತೆ, ಮಾಹಿತಿ ಬಿಟ್ಟುಕೊಟ್ಟ 3ನೇ ವ್ಯಕ್ತಿ

By Suvarna News  |  First Published Dec 2, 2021, 4:24 PM IST

* ಬಿಜೆಪಿ ನಾಯಕ ಕಾಂಗ್ರೆಸ್‌ ಸೇರ್ಪಡೆಗೆ ಮಾತುಕತೆ
* ಸಿದ್ದರಾಮಯ್ಯ-ಡಿಕೆ ಶಿವಕುಮಾರ್‌ ಜೊತೆ ಮಾತುಕತೆ
* ಒಂದು ಸುತ್ತಿನ ಮಾತುಕತೆ ಮಾಹಿತಿ ಬಿಟ್ಟುಕೊಟ್ಟ 3ನೇ ವ್ಯಕ್ತಿ


ಹಾಸನ, (ಡಿ.02): ಮಾಜಿ ಸಚಿವ ಎ .ಮಂಜು (A Manju) ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್‌ಗೆ9Congress) ಮರಳಲು ಕಸರತ್ತು ನಡೆಸಿದ್ದು, ಇದಕ್ಕೆ ವೇದಿಕೆ ಸಿದ್ದವಾಗುತ್ತಿದೆ.

ಮೂರು ವರ್ಷಗಳ ಹಿಂದೆ ಲೋಕಸಭೆ ಚುನಾವಣೆಯಲ್ಲಿ 2019 (Loksaa Elections 2019) ರಲ್ಲಿ ಎ. ಮಂಜು ಬಿಜೆಪಿ (BJP) ಸೇರಿದ್ದರು. ದೇವೇಗೌಡರ (HD Devegowda) ತವರು ಜಿಲ್ಲೆ ಹಾಸನದಲ್ಲಿ (Hassan) ಸ್ಪರ್ಧಿಸಿದ್ದ ಮಂಜು, ಪ್ರಜ್ವಲ್ ರೇವಣ್ಣ(Prajwal Revanna) ವಿರುದ್ಧ ಸೋತಿದ್ದರು. ಇದೀಗ ಕಾಂಗ್ರೆಸ್ ಕೊಡಗು ವಿಧಾನಪರಿಷತ್ ಸ್ಥಾನಕ್ಕೆ (Kodagu MLC) ಮಂಜು ಅವರ ಪುತ್ರ ಮಂಥರ್ ಗೌಡಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಎ.ಮಂಜುಗೆ ವಹಿಸಿದ್ದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಿ ಮಾಡಿದೆ. ಇದರಿಂದ ಬೇಸರಗೊಂಡಿರುವ ಮಂಜು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ.

Tap to resize

Latest Videos

undefined

Karnataka Politics: ಮಗನಿಗೆ ಕಾಂಗ್ರೆಸ್ ಟಿಕೆಟ್, ಅಪ್ಪನಿಗೆ ಪಕ್ಷದ ಜವಾಬ್ದಾರಿಯಿಂದ ಬಿಜೆಪಿ ಕೊಕ್

ಇನ್ನು ಈ ವಿಚಾರಕ್ಕೆ ಸಂಬಂಧಸಿದಂತೆ ಎ. ಮಂಜು ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಮಂಜು ಅವರು ಕಾಂಗ್ರೆಸ್‌ಗೆ ಮರಳುವುದನ್ನು ವಿರೋಧಿಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರೊಂದಿಗೆ ಮಾತನಾಡುವುದಾಗಿ ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮಂಜು, ಡಿಕೆಶಿ ಭೇಟಿ ವೇಳೆ ಜೊತೆಗಿದ್ದ ವಿಧಾನ ಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ ಮಾಧ್ಯಮಗಳಿಗೆ ಪತಿಕ್ರಿಯಿಸಿದ್ದು, ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಎ. ಮಂಜು ಜೊತೆ ಕೆಪಿಸಿಸಿ ಅಧ್ಯಕ್ಷ
ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ ಸ್ಪಷ್ಟಪಡಿಸಿದರು.

Karnataka Politics : ಬಿಜೆಪಿ ತೊರೆಯುತ್ತಾರಾ ಮುಖಂಡ : ಕ್ರಮಕ್ಕೆ ಬೇಸರಿಸಿ ಕಣ್ಣೀರು

ಎ. ಮಂಜು ಪುತ್ರ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿರುವುದರಿಂದ ಬಿಜೆಪಿಯಲ್ಲಿನ ಹೈಕಮಾಂಡ್ ತೀರ್ಮಾನದಂತೆ ಕೆಲ ನಿರ್ಬಂಧಗಳನ್ನು ಮೀರಿದ್ದಾರೆ. ಎ.ಮಂಜು ನಮ್ಮ ಪಕ್ಷದಲ್ಲಿ ಸಚಿವರಾಗಿದ್ದರು. ನಂತರ ಬಿಜೆಪಿ ಪಕ್ಷಕ್ಕೆ ಪಲಾಯನ ಮಾಡಿದ್ದಾರೆ. ಪಕ್ಷಕ್ಕೆ ಮತ್ತೆ ಬಂದರೇ ಸ್ವಾಗತ ಮಾಡಲೇಬೇಕು ಎಂದು ಮಂಜು ಪರ ಬ್ಯಾಟಿಂಗ್ ಮಾಡಿದರು.

 ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸೀಟು ಗೆದ್ದು ಸರಕಾರ ರಚಿಸುತ್ತೇವೆ. ನಮ್ಮ ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾವುಗಳು ಬದ್ಧರಾಗಿರುತ್ತೇವೆ. ಈಗಾಗಲೇ ಮಾತುಕತೆ ನಡೆದಿರುವುದು ಸತ್ಯ. ಅನೇಕರು ಜೆಡಿಎಸ್ ಪಕ್ಷದಿಂದಲೂ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಹಾಸನ ಜಿಲ್ಲೆ ಎಂದರೇ ಇಲ್ಲಿ ರೇವಣ್ಣಅವರದ್ದೇ ಸರ್ಕಾರವಾಗಿ ಭಯದ ವಾತಾವರಣ ಉಂಟಾಗಿದ್ದು, ಇದಕ್ಕೆ ಮುಂದೆ ಎಲ್ಲಾ ಸಾಕ್ಷಿ ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ಎಲ್ಲಾ ಶಾಸಕರು ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಲೋಕಾಸಭಾ ಸದಸ್ಯರ ನಿವಾಸದಲ್ಲಿ ಸಭೆ ಮಾಡುವ ಹಾಗಿಲ್ಲ. ಆದರೇ ಸದಸ್ಯರ ಸಭೆಯನ್ನು ಜೆಡಿಎಸ್ ನಾಯಕರು ಮಾಡಿದ್ದಾರೆ ಎಂದು ಆರೋಪಿಸಿದರು. 

ಜಿಲ್ಲೆಯಲ್ಲಿ ಜೆಡಿಎಸ್ ಕುಟುಂಬ ರಾಜಕಾರಣ ನಡೆಯುತ್ತಿದೆ. ಎಂಎಲ್‌ಸಿ ಚುನಾವಣೆಯಲ್ಲಿ ಮತದಾನ ಗೌಪ್ಯವಾಗಿ ಆಗಬೇಕು. ನೂರು ಮೀಟರ್ ದೂರ ಇಡಬೇಕು. ಮೊಬೈಲ್ ಬಳಕೆ ನಿಷೇಧ ಮಾಡಬೇಕು. ಎಂಪಿ ನಿವಾಸದಲ್ಲಿ ಸಭೆ ಮಾಡುವುದರ ಬಗ್ಗೆ ಸೇರಿದಂತೆ ದೂರು ಕೊಡಲಾಗುವುದು" ಎಂದು ಹೇಳಿದರು.

ಮತ್ತೋರ್ವ ಜೆಡಿಎಸ್‌ ಮುಖಂಡ ಕಾಂಗ್ರೆಸ್‌ಗೆ
ಕಳೆದ ಬಾರಿ ಚಿಕ್ಕಮಗಳೂರು(Chikkamagaluru) ವಿಧಾನಸಭಾ ಚುನಾವಣೆಯಲ್ಲಿ (Assembly Election) ಜೆಡಿಎಸ್‌ನಿಂದ (JDS) ಸ್ಪರ್ಧೆ ಮಾಡಿದ್ದ ಬಿ.ಎಚ್‌. ಹರೀಶ್‌ ಕಾಂಗ್ರೆಸ್‌ (Congress) ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.  ಡಿ.3ರಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಕಾಂಗ್ರೆಸ್‌ ಮತದಾರರ ಸಮಾವೇಶದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದೇನೆ ಎಂದು ಬಿ.ಎಚ್‌. ಹರೀಶ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

click me!