ಕುಸ್ತಿ ಕಣದ ಹೆಣ್ಣು ಹುಲಿ ವಿನೇಶ್ ಪೊಗಾಟ್‌ಗೆ 2000ಕ್ಕೂ ಅಧಿಕ ಮತಗಳಿಂದ ಹಿನ್ನಡೆ

By Anusha Kb  |  First Published Oct 8, 2024, 10:59 AM IST

ಇಲ್ಲಿನ ಜುಲನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕಿಳಿದಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೊಗಾಟ್ ಅವರು ಇಲ್ಲಿ 2000 ಕ್ಕೂ ಅಧಿಕ ಮತಗಳ ಅಂತರದಿಂದ ಹಿನ್ನಡೆಯಲ್ಲಿದ್ದಾರೆ.


ಹರ್ಯಾಣ: ಹರ್ಯಾಣ ವಿಧಾನಸಭೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು,ಪ್ರಸ್ತುತ ಇಲ್ಲಿ ಬಿಜೆಪಿ ಮುಂಚೂಣಿಯಲ್ಲಿದ್ದು, ಮತ್ತೆ ಅಧಿಕಾರಕ್ಕೇರುವ ಕನಸು ನನಸಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ. ಆದರೆ ಇಲ್ಲಿನ ಜುಲನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕಿಳಿದಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೊಗಾಟ್ ಅವರು ಇಲ್ಲಿ 2000 ಕ್ಕೂ ಅಧಿಕ ಮತಗಳ ಅಂತರದಿಂದ ಹಿನ್ನಡೆಯಲ್ಲಿದ್ದಾರೆ. ಕುಸ್ತಿಗೆ ವಿದಾಯ ಹೇಳಿ ರಾಜಕೀಯ ಪ್ರವೇಶಿಸಿದ ವಿನೇಶ್ ಪೋಗಾಟ್ ಅವರಿಗೆ ಮೊದಲ ಚುನಾವಣೆಯಲ್ಲಿ ಜನ ವಿಜಯಶಾಲಿಯಾಗಿ ಮಾಡ್ತಾರ ಅಥವಾ ಸೋಲಿನ ರುಚಿ ತೋರಿಸ್ತಾರ ಎಂಬುದು ಸ್ವಲ್ಪ ಹೊತ್ತಿನಲ್ಲಿ ಗೊತ್ತಾಗಲಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ ಅವರು 2000ಕ್ಕೂ ಹೆಚ್ಚು ವೋಟುಗಳಿಂದ ಲೀಡಿಂಗ್‌

ಹರ್ಯಾಣದ  90 ವಿಧಾನಸಭಾ ಕ್ಷೇತ್ರಗಳಿಗೆ  ಒಂದೇ ಹಂತದಲ್ಲಿ ಆಕ್ಟೋಬರ್ 5 ರಂದು ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ.  ಇಲ್ಲಿ ಬಿಜೆಪಿ 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮತ್ತೆ ಮೂರನೇ ಬಾರಿಗೆ ಅಧಿಕಾರಕ್ಕೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಾಂಗ್ರೆಸ್ 36 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಎಎಪಿ ಹಾಗೂ ಇತರರು ಕೇವಲ ಒಂದೊಂದು ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆರಂಭದಲ್ಲಿ ಇಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸಿತ್ತು.

Latest Videos

undefined

ಜಮ್ಮು ಕಾಶ್ಮೀರ ಫಲಿತಾಂಶ ಅತಂತ್ರವಾದರೆ ರಾಜ್ಯಪಾಲರ ಆಟ?

ವಿನೇಶ್ ಪೋಗಾಟ್‌ ಯಾರು?

ವಿನೇಶ್ ಪೋಗಾಟ್ ಪ್ಯಾರಿಸ್ ಒಲಿಂಪಿಕ್‌ನ ಕುಸ್ತಿ ಸ್ಪರ್ಧೆಯಲ್ಲಿ 53 ಕೇಜಿ ಫ್ರಿಸ್ಟೈಲ್‌ ಕುಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ 100 ಗ್ರಾಂ. ತೂಕದ ಕಾರಣಕ್ಕೆ ಅವರು ಪದಕ ವಂಚಿತರಾಗಿದ್ದರು. ಈ ವಿಚಾರ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿತ್ತು. ಒಲಿಂಪಿಕ್ ಕುಸ್ತಿ ಪಂದ್ಯಾವಳಿ ಬಗ್ಗೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕುಸ್ತಿಪಟುಗಳ ಕುಟುಂಬದಲ್ಲೇ ಜನಿಸಿದ ಇವರು, ಗೀತಾ ಪೋಗಟ್ ಹಾಗೂ ಬಬಿತಾ ಕುಮಾರಿ ಅವರ ಸೋದರ ಸಂಬಂಧಿಯಾಗಿದ್ದಾರೆ.  ಏಷ್ಯನ್ ಗೇಮ್ಸ್‌ ಹಾಗೂ ಕಾಮನ್‌ ವೆಲ್ಸ್ ಗೇಮ್ಸ್‌ಗಳಲ್ಲಿನ ಕುಸ್ತಿ ಸ್ಪರ್ಧೆಗಳಲ್ಲಿ ಇವರು ಭಾರತಕ್ಕೆ ಹಲವು ಪದಕಗಳನ್ನು ತಂದುಕೊಟ್ಟಿದ್ದಾರೆ. 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅವರು ಕಂಚಿನ ಪದಕ ಗಳಿಸಿದ್ದರು. 

ಇದಕ್ಕೂ ಮೊದಲು ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.  ಇದಾದ ನಂತರ  ಭಾರತೀಯ ಕುಸ್ತಿ ಫೆಡರೇಷನ್‌ಗೆ ಬ್ರಿಜ್ ಭೂಷಣ್ ರಾಜೀನಾಮೆ ನೀಡಿದ್ದರು. 

ಜಮ್ಮು ಕಾಶ್ಮೀರದಲ್ಲಿ ಸಾಮಾರ್ಥ್ಯ ಹೆಚ್ಚಿಸಿಕೊಂಡ ಬಿಜೆಪಿ; ಸರ್ಕಾರ ರಚನೆಯತ್ತ ಕಾಂಗ್ರೆಸ್ ಮೈತ್ರಿಕೂಟ

click me!