Davanagere: ಮಾಜಿ ಶಾಸಕ ಶಿವಶಂಕರ್‌ಗೆ ಗೆಲ್ಲುವ ತಾಕತ್ತಿಲ್ಲ: ಶಾಸಕ ರಾಮಪ್ಪ

By Kannadaprabha News  |  First Published Oct 28, 2022, 11:16 PM IST

ಪುರಸಭೆಯ ಉಪಚುನಾವಣೆಗೆ ಮಾಜಿ ಶಾಸಕ ಶಿವಶಂಕರ್‌ ಸಾಕಿತ್ತು, ರಾಜ್ಯ ಮುಖಂಡ ಇಬ್ರಾಹಿಂರನ್ನು ಕರೆಸುವ ಅಗತ್ಯವೇನಿತ್ತು, ಮಾಜಿ ಶಾಸಕರಿಗೆ ಗೆಲ್ಲುವ ತಾಕತ್ತು ಇಲ್ಲವೆಂದು ಬರೀ ಬುರುಡೆ ಬಿಡುತ್ತಿದ್ದಾರೆ ಎಂದು ಶಾಸಕ ಎಸ್‌.ರಾಮಪ್ಪ ತಿರುಗೇಟು ನೀಡಿದರು. 


ಮಲೇಬೆನ್ನೂರು (ಅ.28): ಪುರಸಭೆಯ ಉಪಚುನಾವಣೆಗೆ ಮಾಜಿ ಶಾಸಕ ಶಿವಶಂಕರ್‌ ಸಾಕಿತ್ತು, ರಾಜ್ಯ ಮುಖಂಡ ಇಬ್ರಾಹಿಂರನ್ನು ಕರೆಸುವ ಅಗತ್ಯವೇನಿತ್ತು, ಮಾಜಿ ಶಾಸಕರಿಗೆ ಗೆಲ್ಲುವ ತಾಕತ್ತು ಇಲ್ಲವೆಂದು ಬರೀ ಬುರುಡೆ ಬಿಡುತ್ತಿದ್ದಾರೆ ಎಂದು ಶಾಸಕ ಎಸ್‌.ರಾಮಪ್ಪ ತಿರುಗೇಟು ನೀಡಿದರು. ಮಲೇಬೆನ್ನೂರಲ್ಲಿ ಪುರಸಭೆ ಉಪಚುನಾವಣೆ ಅಂಗವಾಗಿ ಕುಂಬಳೂರಿನ ಹಾಲಪ್ಪ ಮನೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬರೀ ಸಿದ್ದರಾಮಯ್ಯರನ್ನು ಕರೆದಿದ್ದು ಅಭಿವೃದ್ಧಿ ದೃಷ್ಟಿಯಿಂದ ಜಮೀರ್‌ ಅಹ್ಮದ್‌ ಅಲ್ಲ ಯಾರೇ ಬಂದರೂ ಚುನಾವಣೆಗೆ ಹರಿಹರ ಕ್ಷೇತ್ರ ಬಿಟ್ಟು ಕೊಡಲೂ ಸಿದ್ಧನಿದ್ದೇನೆ ಎಂದು ಶಾಸಕ ಎಸ್‌.ರಾಮಪ್ಪ ಪ್ರತಿಕ್ರಿಯೆ ನೀಡಿದರು.

ಸರ್ಕಾರದ ಹಣ ಪೋಲು: ಎರಡು ಕೋಟಿ ರು. ಅನುದಾನವನ್ನು ದೇವಾಲಯ, ಚಚ್‌ರ್‍ ಮತ್ತು ಮಸೀದಿಗಳಿಗೆ ಖರ್ಚು ಮಾಡಿದ್ದೇನೆ. ವಿಶೇಷ ಅನುದಾನಕ್ಕಾಗಿ ಮುಖ್ಯಮಂತ್ರಿ, ಮಂತ್ರಿಗಳಿಗೆ ಪತ್ರ ಬರೆದಿರುವುದು ಶೀಘ್ರವೇ ಬಹಿರಂಗಪಡಿಸುತ್ತೇನೆ. ಮಾಜಿ ಶಾಸಕರು ಐದು ವರ್ಷದ ಅವಧಿಯ ಹತ್ತು ಕೋಟಿ ರು. ಗಳನ್ನು ಖರ್ಚು ಮಾಡಿದ ರೀತಿಯ ಬಹಿರಂಗಪಡಿಸಲಿ, ಕೊಮಾರನಹಳ್ಳಿಯ ಗುಂಡೀಲಿ ಯಾತ್ರಿ ನಿವಾಸಕ್ಕೆ 40 ಲಕ್ಷ ರು. ಖರ್ಚು ಮಾಡಿ ಉದ್ಘಾಟನೆ ಮಾಡಲಿಕ್ಕೆ ಆಗೋಲ್ಲ, ಅಂತಹ ಸ್ಥಳದಲ್ಲಿ ಸರ್ಕಾರದ ಹಣ ಪೋಲು ಮಾಡಿದ್ದಾರೆ ಎಂದು ರಾಮಪ್ಪ ಆರೋಪಿಸಿದರು.

Tap to resize

Latest Videos

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅರ್ಚಕನೊಬ್ಬನ ವಿಚಿತ್ರ ಪೂಜಾ ವಿಧಾನ!

ರಸ್ತೆಗಳ ಕಾಮಗಾರಿಗೆ ಅನುದಾನ: ಮುಂಬರುವ ಚುನಾವಣೆಯಲ್ಲಿ ಶಿವಶಂಕರ್‌ರನ್ನು ಮತದಾರರು ಮೂರನೇ ಸ್ಥಾನಕ್ಕೆ ಕಳಿಸಲಿದ್ದಾರೆ. ಪರಿಶಿಷ್ಟಜಾತಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಜನರನ್ನು ಸಮಾನವಾಗಿ ಕಂಡಿದ್ದೇನೆ. ಕೊರೋನಾದಿಂದಾಗಿ ಎರಡು ವರ್ಷಗಳಲ್ಲಿ ಹಣ ಬಂದಿಲ್ಲ, ಉಳಿದ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅನುದಾನ ಕಡಿತ ಮಾಡಿದೆ. ಬಂದಿರುವ ಅನುದಾನದಲ್ಲಿ ರಸ್ತೆಗಳ ಕಾಮಗಾರಿ ನಡೆಯುತ್ತಿವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕಿರಿಕಿರಿ ಮಾಡುತ್ತಿದ್ದ ಮೂವರ ಬಂಧನ

ಭೈರನಪಾದ ನೀರಾವರಿ ಯೋಜನೆ ಬಗ್ಗೆ ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್‌ ಪಟೇಲ್‌ ಉತ್ತರಿಸಿ ಹರಿಹರ ಮತ್ತು ಮಲೇಬೆನ್ನೂರು ಸಂತೆ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ಅನುದಾನದ ಕಾಮಗಾರಿಗಳನ್ನು ಉಧ್ಘಾಟನೆ ಮಾಡಲಿಕ್ಕೆ ಮಾಜಿ ಶಾಸಕ ಶಿವಶಂಕರ್‌ ಅಡ್ಡಿಪಡಿಸಿದರೂ ಅಂದಿನ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್‌, ಶಾಸಕ ಅಬ್ದುಲ್‌ ಜಬ್ಬಾರ್‌ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿಸಲಾಗಿದೆ. ಆ ಕಾರಣಕ್ಕೆ ಇಲ್ಲ ಸಲ್ಲದ ಸುಳ್ಳು ಹೇಳುತ್ತಾ ಸಾಗಿದ್ದಾರೆ ಎಂದರು. ಕಾಂಗ್ರೆಸ್‌ ಮುಖಂಡರಾದ ದೇವೇಂದ್ರಪ್ಪ, ವೈ.ವಿರೂಪಾಕ್ಷಪ್ಪ, ನಯಾಜ್‌, ಅಬಿದ್‌ಅಲಿ, ಸನಾವುಲ್ಲಾ, ಎಲ್‌.ಬಿ.ಹನುಮಂತಪ್ಪ, ಜಿ.ಆನಂದಪ್ಪ, ವಿದ್ಯಾ, ನೇತ್ರಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ, ಹಾಲಪ್ಪ, ಸಾಬಿರ್‌ ಅಲಿ, ಶಿವರಾಮಚಂದ್ರಪ್ಪ, ಫೈಜು, ಝಾಕಿರ್‌, ಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

click me!