‘ಚುನಾವಣೆ ಸಮಯದಲ್ಲಿ ಪೊಲೀಸರು ನನಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಸಾಕಷ್ಟುಕಿರುಕುಳ ನೀಡಿದ್ದಾರೆ. ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿ ಕದ್ದು ಮುಚ್ಚಿ ಓಡಾಡುವಂತಹ ಸ್ಥಿತಿ ನಿರ್ಮಿಸಿದ್ದರು’ ಎಂದು ಪೊಲೀಸರ ಕಿರುಕುಳ ನೆನೆಯುತ್ತಾ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರು ಡಿ.ಕೆ.ಶಿವಕುಮಾರ್ ಬಳಿ ಕಣ್ಣೀರು ಸುರಿಸಿದ ಘಟನೆ ಬುಧವಾರ ನಡೆದಿದೆ.
ಬೆಂಗಳೂರು (ಮೇ.25): ‘ಚುನಾವಣೆ ಸಮಯದಲ್ಲಿ ಪೊಲೀಸರು ನನಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಸಾಕಷ್ಟುಕಿರುಕುಳ ನೀಡಿದ್ದಾರೆ. ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿ ಕದ್ದು ಮುಚ್ಚಿ ಓಡಾಡುವಂತಹ ಸ್ಥಿತಿ ನಿರ್ಮಿಸಿದ್ದರು’ ಎಂದು ಪೊಲೀಸರ ಕಿರುಕುಳ ನೆನೆಯುತ್ತಾ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರು ಡಿ.ಕೆ. ಶಿವಕುಮಾರ್ ಬಳಿ ಕಣ್ಣೀರು ಸುರಿಸಿದ ಘಟನೆ ಬುಧವಾರ ನಡೆದಿದೆ.
ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿಸಿ ಬೇರೆ ಶಾಸಕರು ಹೊರಡುವಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಳಿ ಬಂದ ಸಚಿವ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಕಲಾ ನನ್ನ ವಿರುದ್ಧ ಸುಳ್ಳು ಕೇಸು ದಾಖಲಿಸಿ ಕಿರುಕುಳ ನೀಡಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕಾರ್ಮಿಕರಿಗೆ ಆಹಾರ ಕಿಟ್ ನೀಡಿದ್ದಕ್ಕೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನನ್ನನ್ನು ಮೊದಲ ಆರೋಪಿ ಮಾಡಿದ ಕಾರಣ ಕದ್ದು ಮುಚ್ಚಿ ಓಡಾಡುವ ಸ್ಥಿತಿ ಬಂದಿತ್ತು. ಚುನಾವಣಾ ಅಧಿಕಾರಿಗಳ ಮಾತು ಕೇಳಿಕೊಂಡು ಪೊಲೀಸರು ತುಂಬಾ ಕಿರುಕುಳ ನೀಡಿದ್ದಾರೆ. ವಿನಾಕಾರಣ ಕಿರುಕುಳ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದುಃಖ ತೋಡಿಕೊಳ್ಳುತ್ತಾ ಕಣ್ಣೀರಾದರು.
ಅರಣ್ಯ ಇಲಾಖೆ ಸಸಿಗಳ ಬೆಲೆ ವಿಪರೀತ ಹೆಚ್ಚಳ: ಅನ್ನದಾತರ ಆಕ್ರೋಶ
ಕೆಜಿಎಫ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲು ಆದ್ಯತೆ: ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುತ್ತಿದ್ದಂತೆ ಸ್ಥಳೀಯ ಶಾಸಕಿ ರೂಪಕಲಾ ಶಶಿಧರ್‌ರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿಕೊಡಬೇಕೆಂದು ಮುಖಂಡರು, ಕಾರ್ಯಕರ್ತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ರೂಪಕಲಾ ಶಶಿಧರ್ ಆಯ್ಕಾಯಾಗಿದ್ದಾರೆ.
ಮೋದಿ ಪ್ರಧಾನಿಯಾಗಿ 9 ವರ್ಷ: ಬಿಜೆಪಿಯಿಂದ 1 ತಿಂಗಳ ಅಭಿಯಾನ
ಈ ಬಾರಿ ಪರಿಶಿಷ್ಟ ಜಾತಿ ಎಡಗೈ ಸಮುದಾಯದ 11 ಮಂದಿ ಅಭ್ಯರ್ಥಿಗಳಲ್ಲಿ ರೂಪಕಲಾ ಶಶಿಧರ್‌ರವನ್ನು ಸಾಮಾಜಿಕ ನ್ಯಾಯ ಮತ್ತು ಮಹಿಳಾ ಕೋಟಾ ಪರಿಕಲ್ಪನೆಯಡಿಯಲ್ಲಿ ಪರಿಗಣಿಸಿ ಸಚಿವ ಸ್ಥಾನವನ್ನು ನೀಡಿದಲ್ಲಿ ಕೆಜಿಎಫ್ ಕ್ಷೇತ್ರವನ್ನು ಮತ್ತು ಕೋಲಾರ ಜಿಲ್ಲೆಯನ್ನು ಇಡೀ ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲು ಸಹಕಾರಿಯಾಗಲಿದೆ ಎನ್ನುವುದು ಎಲ್ಲರ ಒತ್ತಾಯವಾಗಿದೆ. ಕೆಜಿಎಫ್ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಇವರಿಗೆ ಸಚಿವ ಸ್ಥಾನವನ್ನು ನೀಡಬೇಕಾಗಿದೆ ಎಂದು ನಗರಸಭೆ ಸದಸ್ಯ ಮಾಣಿಕ್ಯಂ ಹೇಳಿದ್ದಾರೆ.